
ಶ್ರೀನಿವಾಸಪುರ 1 : ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬೇಟಿ ನೀಡಿದ ಸಂದರ್ಭದಲ್ಲಿ ವೈದ್ಯರು ಇರಲಿಲ್ಲ, ನಂತರ ಬಂದ ವೈದ್ಯರು ಬಗ್ಗೆ ಮಾಹಿತಿ ಪಡೆದರು. ಆರೋಗ್ಯ ಕೇಂದ್ರದ ಎಲ್ಲಾ ರೂಂಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಆವರಣವು ಗೊಬ್ಬು ನಾರುತ್ತಿರುವುದನ್ನ ಕಂಡು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಲಕ್ಷೀಪುರ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ಅನಿರೀಕ್ಷಿತ ಬೇಟಿ ಮಾಡಿ ಮೂಲ ಸೌಲಭ್ಯಗಳ ಕೊರತೆಗಳ ಬಗ್ಗೆ ಅಧಿಕಾರಿಗಳೊಂದಿಗೆ, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ಆರೋಗ್ಯ ಕೇಂದ್ರದಲ್ಲಿನ ಸಮರ್ಪಕವಾಗಿ ಔಷಧಿಗಳ ಲಭ್ಯವಿಲ್ಲದ ಬಗ್ಗೆ ಹಾಗು ವೈದ್ಯರು ಬೆರದುಕೊಟ್ಟ ಔಷಧಿಗಳು ಆರೋಗ್ಯ ಕೇಂದ್ರದಲ್ಲಿ ನೀಡುತ್ತಲ್ಲವೆಂದು ಸಾರ್ವಜನಿಕರು ಆರೋಪ ಮಾಡಿದ ಹಿನ್ನೆಲೆಯಲ್ಲಿ ಟಿಎಚ್ಒ ಹಾಗು ಡಿಎಚ್ಒ ರವರನ್ನು ದೂರವಾಣಿ ಮೂಲಕ ಕರೆ ಮಾಡಿ ತರಾಟೆಗೆ ತೆಗೆದುಕೊಂಡು ಆರೋಗ್ಯ ಕೇಂದ್ರದಲ್ಲಿ ಸಮರ್ಪಕವಾಗಿ ಔಷಧಿಗಳು ಲಭ್ಯವಿಲ್ಲ ವೈದ್ಯರು ಬರೆದುಕೊಡುವ ಚೀಟಿಗಳು ಖಾಸಗಿ ಔಷಧಿ ಅಂಗಡಿ ಗಳಲ್ಲಿ ತಂದುಕೊಳ್ಳತ್ತಾರೆ ಎಂದು ವಿವರಿಸಿ , ಇಲಾಖೆಯಿಂದ ಏಕೆ ಸಮರ್ಪಕವಾಗಿ ಔಷಧಿಗಳನ್ನು ನೀಡತ್ತಿಲ್ಲವೆಂದು ಪ್ರಶ್ನಿಸಿ, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿಯೇ ಉಚಿತವಾಗಿ ಔಷಧಿಗಳನ್ನು ನೀಡಲು ವ್ಯವಸ್ಥೆ ಮಾಡಿಕೊಡುವಂತೆ ಡಿಎಚ್ಒ ಹಾಗು ಟಿಎಚ್ಒ ಸೂಚನೆ ನೀಡಿದರು.
ಅಲ್ಲದೆ ಲ್ಯಾಬ್ ಕೊಠಡಿಗೆ ಬೇಟಿ ನೀಡಿದ ಸಂದರ್ಭದಲ್ಲಿ ರಕ್ತ ಹಾಗು ಇತರೆ ಪರೀಕ್ಷೆ ಮಾಡಬೇಕಾಗಿರುವ ಕೆಮಿಕಲ್ ಇಲ್ಲದಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಖಾಲಿ ಆಗಿರುವ ಕೆಮಿಕಲ್ಗಳನ್ನು ನೀಡುವಂತೆ 6 ತಿಂಗಳ ಹಿಂದೆಯೇ ಬೇಡಿಕೆ ನೀಡಿದ್ದರೂ ಸಹ ಇದುವರೆಗೂ ನೀಡದ ಬಗ್ಗೆ ಚರ್ಚಿಸಿ ಅತಿಶೀಘ್ರವಾಗಿ ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಿ, ಅತಿ ಶೀಘ್ರವಾಗಿ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಕುಂದುಕೊರತೆಗಳನ್ನು ಪರಿಹರಿಸುವಂತೆ ಡಿಎಚ್ಒ ರವರಿಗೆ ಸೂಚಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂದಿಸಿದಂತೆ 4 ಎಕರೆಯಲ್ಲಿ ಭೂಮಿ ಇದ್ದು , ಆರೋಗ್ಯ ಕೇಂದ್ರದ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಖಾತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಅದನ್ನ ಪತ್ತೆ ಹಚ್ಚಿ ಸರ್ಕಾರದ ಭೂಮಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಹಾಗು ಗ್ರಾ.ಪಂ ಅಧಿಕಾರಿಗಳು ಒತ್ತುವರಿ ತರೆವು ಮಾಡಿಕೊಡುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ. ಮಾಜಿ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಲಕ್ಷೀಪುರ ಜಗದೀಶ್, ಎಲ್.ಕೆ.ರವಿ, ತೂಪಲ್ಲಿ ಮಧು, ದಾಸರ್ಲಪಲ್ಲಿ ಚೌಡರೆಡ್ಡಿ, ಎಲ್.ಎನ್.ಸುರೇಶ್ , ಇಸ್ಮಾಯಿಲ್, ಎಲ್.ಎಂ.ಶ್ರೀನಿವಾಸರೆಡ್ಡಿ, ಬಾರ್ ನಾರಾಯಣಸ್ವಾಮಿ, ಕೊಂಡಸಂದ್ರ ನಾಗೇಂದ್ರ, ಅಭಿಯಂತರ ಸುರೇಶ್, ಗ್ರಂಥಪಾಲಕ ನಾಗೇಂದ್ರ ಇತರರು ಇದ್ದರು.