

ಶ್ರೀನಿವಾಸಪುರ : ನೀರು ಅಮೂಲ್ಯವಾದ ಸಂಪತ್ತು ಇದನ್ನ ಸುರಕ್ಷಿತವಾಗಿ, ಮಿತವಾಗಿ ಬಳಸುವಂತೆ ತಿಳಿಸಿ, ಜಲ ಮೂಲಗಳನ್ನು ಸಂರಕ್ಷಿಸಿ ಇದರಿಂದ ಅಂತರ್ಜಲವನ್ನು ಹೆಚ್ಚಿಸಿ ಮುಂದಿನ ಪೀಳಗೆಗೆ ಉಳಿಸುವ ಪ್ರಯತ್ನ ಮಾಡುವುದು ನಮ್ಮೆಲರ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕರ್ತವ್ಯ ಎಂದರು.
ಲಕ್ಷೀಪುರ ಗ್ರಾಮದಲ್ಲಿ ಸೋಮವಾರ ಜಲ ಜೀವನ್ ಮಿಷನ್ 94 ಲಕ್ಷ ಮೌಲ್ಯದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಸರ್ಕಾರವು ಎಷ್ಟೇ ಉಪಯುಕ್ತ ಯೋಜನೆಗಳು ತಂದರೂ ಸಹ ನಾಗರೀಕರು ಆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವದರ ಮೇಲೆ ಆ ಯೋಜನೆ ಪ್ರಬಾವ ಬೀರುತ್ತದೆ ಆದ್ದರಿಂದ ನಾಗರೀಕರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ 94 ಲಕ್ಷ ವೆಚ್ಚದಲ್ಲಿ ಗ್ರಾಮದ 700 ಮನೆಗಳಿಗೆ ಪಕ್ಷತೀತವಾಗಿ ನಲ್ಲಿಗಳ ಅಳವಡಿಸುವದರ ಮೂಲಕ ಸುರಕ್ಷಿತ ಮತ್ತು ಸಾಕಷ್ಟು ನೀರಿನ್ನು ಒದಗಿಸಲು ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು ಹಾಗು ಗ್ರಾಮದಲ್ಲಿ ಓವರ್ಹೆಡ್ ಟ್ಯಾಂಕ್ನ್ನು ನಿರ್ಮಿಸಿಕೊಡಲಾಗುವುದು ಎಂದರು.
ಇದೇ ಸಮಯದಲ್ಲಿ ಕೋಡಿಪಲ್ಲಿ ಗ್ರಾ.ಪಂ.ವ್ಯಾಪ್ತಿಯ ಚಿಲೇಪಲ್ಲಿ ಗ್ರಾಮದಲ್ಲಿ 57 ಲಕ್ಷ ವೆಚ್ಚದಲ್ಲಿ 150 ಮನೆಗಳಿಗೆ ಮನೆ ಮನೆಗಳಿಗೆ ನಲ್ಲಿ ಹಾಗು ಒಂದು ಕೊಳವೆ ಬಾವಿ ಕೊರೆಸಲಾಗುವುದು ಎಂದರು.
ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಿಂದ ಇರುವಂತೆ ಸೂಚಿಸಿ ನಿಗದಿತ ಸಮಯಕ್ಕೆ ಕಾಮಗಾರಿಯನ್ನು ಮುಗಿಸಿಕೊಡುವಂತೆ ಸೂಚನೆ ನೀಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಕೋಡಿಪಲ್ಲಿ ಗ್ರಾ.ಪಂ ಪಿಡಿಒ ಸುನಂದ, ಮುಖಂಡರಾದ ಬಾಬುರೆಡ್ಡಿ, ರಘುನಾಥರೆಡ್ಡಿ, ಭಾಸ್ಕರ್, ಅಯ್ಯಪ್ಪ ಗುತ್ತಿಗೆದಾರರಾದ ಕೆ.ಆರ್.ಮಹದೇವ, ರಮೇಶ್ ಇದ್ದರು.
