![](https://jananudi.com/wp-content/uploads/2025/02/Screenshot-946-3.png)
![](https://jananudi.com/wp-content/uploads/2025/02/IMG-20250211-WA0029.jpg)
ಶ್ರೀನಿವಾಸಪುರ : ಈಗಲಾದರೂ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಸುತ್ತಮುತ್ತಲಿರುವ ನೈಸರ್ಗಿಕ ಸಂಪತ್ತುಗಳಾದ ಗಿಡ, ಮರ, ಕೆರೆ, ಕುಂಟೆ , ಗೋಮಾಳ ಹಾಗೂ ಅರಣ್ಯವನ್ನು ಸಂರಕ್ಷಣೆ ಮಾಡಿಕೊಂಡು ನಮ್ಮ ಜೀವನಾದಾರಗಳನ್ನು ಸುದಾರಣೆ ಮಾಡಿಕೊಳ್ಳಲು ಗ್ರಾಮೀಣ ವ್ಯವಸ್ಥೆಗಳನ್ನು ಬಲಪಡಿಸಬೇಕಾಗಿದೆ ಎಂದು ಅರ್.ಐ ಮುನಿರೆಡ್ಡಿ ಎಂದರು.
ತಾಲ್ಲೂಕಿನ ಕಸಬಾ ಹೋಬಳಿ ಚಲ್ದಿಗಾನಹಳ್ಳಿ ವ್ಯಾಪ್ತಿಗೆ ಬರುವ ಮೊಗಿಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಕೆರೆ ಒತ್ತುವರಿ ಜಾಗ ತೆರುವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿದರು .
ಪಿ.ಡಿ.ಓ ಜಗದೀಶ್ ಕುಮಾರ್ ಮಾತನಾಡಿ ಮೊಗಿಲಹಳ್ಳಿ ಗ್ರಾಮದ ಸರ್ವೆ ನಂಬರ್ 92 ರಲ್ಲಿ61 ಎಕರೆ 27 ಗಂಟೆ ಇದ್ದು, 25 ಎಕರೆ ಒತ್ತುವರಿಯಾಗಿದ್ದು, ಜಿಲ್ಲಾಧಿಕಾರಿಗಳ ಅದೇಶದ ಮೇರೆಗೆ ಒತ್ತುವರಿ ಅಗಿರುವ ಕೆರೆಗಳನ್ನ ಹಂತ ಹಂತವಾಗಿ ತೆರುವುಗೊಳಿಸಲು ಕ್ರಮ ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಈ ತೆರವು ಕಾರ್ಯಚರಣೆಯಲ್ಲಿ ಭೂಮಾಕರಾದ ಶಿವಬೀರಪ್ಪ ಗ್ರಾಮ ಚಲ್ದಿಗಾನಹಳ್ಳಿ ಪಂಚಾಯಿತಿ ಕಾರ್ಯದರ್ಶಿ ಶಂಕರಪ್ಪ, ಕರ ವಸೂಲಿಗಾರ ನಾರಾಯಣಸ್ವಾಮಿ, ವೆಂಕಟರವಣಪ್ಪ ಹಾಗೂ ಪಂಚಾಯಿತಿಯ ಸಿಬ್ಬಂದಿ ಉಪಸ್ಥಿತರಿದ್ದರು.