

ಶ್ರೀನಿವಾಸಪುರ : ಸಾರ್ವಜನಿಕರು ಆಗಲೀ, ರೈತರೇ ಆಗಲೀ ಕಚೇರಿಗೆ ಅಹವಾಲು ತಂದರೆ , ಅಹವಾಲಿನ ಬಗ್ಗೆ ಮಾಹಿತಿ ಪಡೆದು, ತಮ್ಮ ಇಲಾಖೆಗೆ ಸಂಬಂದಿದಂತೆ ಶೀಘ್ರವಾಗಿ ಪರಿಹಾರ ಮಾಡಿಕೊಡಿ ಇಲ್ಲವಾದಲ್ಲಿ ಅವರಿಗೆ ಅಹವಾಲಿನ ಬಗ್ಗೆ ಮಾರ್ಗದರ್ಶನ ನೀಡಿ ಎಂದರು. ಅಧಿಕಾರಿಗಳು ಇಲಾಖೆ ಕಚೇರಿಗೆ ಅಲೆದಾಡಿಸದಂತೆ ಕ್ರಮಕೈಗೊಳ್ಳಿ ಎಂದು ಕೋಲಾರ ಜಿಲ್ಲಾ ಲೋಕಾಯುಕ್ತ ಎಸ್ಪಿ ದನಂಜಯ್ ಸೂಚಿಸಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಂದ ಏರ್ಪಡಿಸಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಗೆ ಚಾಲನೆ ನೀಡಿ ಸನ್ಮಾನಿಸಿ ಮಾತನಾಡಿದರು.
ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 15 , ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ 6 , ತೋಟಗಾರಿಕೆ ಇಲಾಖೆ 02, ಪೊಲೀಸ್ ಇಲಾಖೆ 03, ಜಿಲ್ಲಾ ಅಧಿಕಾರಿ ಕಚೇರಿಗೆ ಸಂಬಂದಪಟ್ಟಂತೆ 03, ಕೆ.ಎಸ್ಆರ್ಟಿಸಿ 01, ಭೂಮಾಪನ ಇಲಾಖೆಗೆ ಸಂಬಂಧಿಸಿದಂತೆ 03, ಜಿ.ಪಂ.ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿಗೆ 01, ಪುರಸಭೆಗೆ ಸಂಬಂದಪಟ್ಟಂತೆ 02, ಮಕ್ಕಳ ಮತ್ತು ಕಲ್ಯಾಣ ಇಲಾಖೆಗೆ 01 ಹೀಗೆ ಒಟ್ಟು 39 ಅರ್ಜಿ ಸ್ವೀಕರಿಸಲಾಯಿತು. ಈ ಅರ್ಜಿಗಳನ್ನು ಸಂಬಂಪಟ್ಟ ಇಲಾಖೆಗೆ ರವಾನಿಸಲಾಗುತ್ತದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು 15 ದಿನಗಳು ಇಲ್ಲವಾದಲ್ಲಿ ಒಂದು ತಿಂಗಳಲ್ಲಿ ಅರ್ಜಿಗಳ ವಿಲೆವಾರಿ ಮಾಡಬೇಕು. ಹಾಗೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ, ಹಿಂಬರಹ ಬರೆದುಕೊಡುತ್ತಾರೆ ಅದರಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಇತ್ತೀಚಿಗೆ ಎಲ್ಲಾ ಇಲಾಖೆಯ ದಾಖಾಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದ್ದು, ಕೆಲ ದಾಖಾಲೆಗಳಿಗೆ ಪರಿಹಾರ ಸಿಗಲು ಸಮಯ ಆಗುತ್ತದೆ ನಂತರ ಪರಿಹಾರ ನೀಡಲಾಗುವುದು ಎಂದರು.
ಲೋಕಾಯುಕ್ತ ಇನ್ಸ್ಪೆಕ್ಟರ್ ಆಂಜನಪ್ಪ ಮಾತನಾಡಿ ಕಳೆದ ಜೂನ್ 8 ರಂದು ನಡೆದ ಸಾರ್ವಜನಿಕ ಅಹವಾಲು ಸ್ವೀಕರ ಸಭೆಯಲ್ಲಿ ಒಟ್ಟು 53 ಅಹವಾಲು ಸ್ವೀಕರಿಸಲಾಗಿತ್ತು . ಅದರಲ್ಲಿ 48 ಅರ್ಜಿಗಳಿಗೆ ಪರಿಹಾರ ನೀಡಲಾಗಿದ್ದು , ಉಳಿದಂತೆ ಬೆಂಗಳೂರಿನ ವಿವಿಧ ಇಲಾಖೆಗಳಿಗೆ ಅರ್ಜಿಗಳನ್ನು ಕಳುಹಿಸಲಾಗಿದೆ ಎಂದರು.