ಶ್ರೀನಿವಾಸಪುರ; ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಹೊಸ ವರ್ಷದ ಪ್ರಯುಕ್ತ ದೇವಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಜನ ಜಾತ್ರೆ ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಹೊರವಲಯದಲ್ಲಿರುವ ಕೇತಗಾನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ನೆಲಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಪ್ರತಿ ವರ್ಷದಂತೆ ಈ ವರ್ಷವು ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು, ಬೆಳಗ್ಗೆ 5 ಗಂಟೆಯಿಂದಲೇ ದೇವಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಪಟ್ಟಣದ ನಾಗರೀಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ತಂಡೋಪ ತಂಡವಾಗಿ ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಯಲ್ಲಿ ಬೇಡಿಕೊಂಡರು. ದರ್ಶನಕ್ಕೆ ಬಂದತಂಹ ಭಕ್ತಾಧಿಗಳಿಗೆ ದೇವಾಲಯದ ಸಮಿತಿವತಿಯಿಂದ ಅನ್ನ ಸಂತರ್ಪಣೆ, ಹಾಗೂ ತೀರ್ಥ ಪ್ರಸಾದವನ್ನು ಏರ್ಪಡಿಸಲಾಗಿತ್ತು.
ದರ್ಶಕ್ಕೆ ಬಂದತಂಹ ಭಕ್ತಾಧಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಮಾತನಾಡುತ್ತಾ ಪ್ರತಿ ವರ್ಷದಂತೆ ಈ ವರ್ಷವು ದೇವಾಲಯದ ಸಮಿತಿಯ ಭಕ್ತ ಮಂಡಳಿದವರು ಎಲ್ಲಾ ಸೌಲಭ್ಯಗಳನ್ನು ಭಕ್ತಾಧಿಗಳಿಗೆ ಒದಿಗಿಸಿದ್ದಾರೆ. ಹಾಗೆಯೇ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು. ತಾಯಿಯ ದರ್ಶನವನ್ನು ಪಡೆದು ನಾವು ಪುನಿತರಾಗಿದ್ದೇವೆ. ಮುಂದಿನ ವರ್ಷವು ಇದೇ ರೀತಿಯಲ್ಲಿ ಸಾವಿರಾರು ಭಕ್ತಾಧಿಗಳು ಹೆಚ್ಚಿನದಾಗಿ ಬರಲಿ ದೇವಿಯ ಆಶೀರ್ವಾದ ಈ ಕ್ಷೇತ್ರದ ಎಲ್ಲಾ ಜನರಿಗೂ ಸಿಗಲಿ ಹಾಗೆಯೆ ಇಲ್ಲಿನ ಸೇವಾ ಕರ್ತರಿಗೆ ಆ ತಾಯಿ ಒಳ್ಳೆಯ ಆರೋಗ್ಯ ಭಾಗ್ಯ ಸಂಪತ್ತು, ವ್ಯಾಪಾರ ವಹಿವಾಟದಲ್ಲಿ ಲಾಭ ಸಿಗಲಿ ಸಮಸ್ತ ನಾಗರೀಕರನ್ನು ಈ ದೇವಿ ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಹೊಸ ವರ್ಷ ಅಲ್ಲದೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಬಾನುವಾರದಂದು ದೇವಿಗೆ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಭಕ್ತಾಧಿಗಳು ಆಗಮಿಸಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಳ್ಳಬಹುದೆಂದು ದೇವಾಲಯದ ಸಮಿತಿಯ ಭಕ್ತ ಮಂಡಳಿ ಸದಸ್ಯರುಗಳು ತಿಳಿಸುತ್ತಾ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಮಹಿಮೆಗಳು, ಸಂತಾನ ಭಾಗ್ಯ, ವ್ಯಾಪಾರ, ಅಭಿವೃದ್ದಿ, ಆರೋಗ್ಯಾಭಿವೃದ್ದಿ, ವಿವಾಹ ಯೋಗ, ಇನ್ಯಾವುದೇ ಅರಿಕೆಗಳು ಮಾಡಿಕೊಂಡರೆ ದೇವಿಯ ಕೃಪಾ ಕಟಾಕ್ಷಗಳು ದೊರೆಯುತ್ತವೆ ಎಂದರು.
ಈ ಪೂಜಾ ಕಾರ್ಯಕ್ರಮಗಳನ್ನು ಪ್ರಧಾನ ಅರ್ಚಕ ಹರ್ಷವರ್ದನ್, ಶಿವಪ್ರಸಾದ್, ವಿಶ್ವಕರ್ಮ, ಸೀನಣ್ಣ, ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯ ರಾಘವರೆಡ್ಡಿ, ಸತ್ಯಣ್ಣ, ನಾಗಣ್ಣ, ವೆಲ್ಡಿಂಗ್ ಆರ್. ಶ್ರೀನಿವಾಸ್, ಗಾರ್ ಮೇಸ್ತ್ರಿ ಮಂಜಣ್ಣ, ಬೈರೆಡ್ಡಿ, ಎಸ್,ಎಲ್,ಎನ್ ಮಂಜುನಾಥ್, ಲಕ್ಷ್ಮಣ್‍ರೆಡ್ಡಿ, ಸಿ.ವಿ.ಆರ್. ಆಶೋಕ್, ಆರ್. ಪ್ರಭಾಕರ್, ಟಿ.ವಿ. ಮ್ಯಾಕನಿಕ್ ಸುಧಾಕರ್, ಮೇಸ್ತ್ರಿ ಮುನಿರೆಡ್ಡಿ, ಕೇತಗಾನಹಳ್ಳಿ ಗ್ರಾಮಸ್ಥರಾದ ಕೂವಪ್ಪ, ರಾಧಾಕೃಷ್ಣಾರೆಡ್ಡಿ, ಗಿರಿಯಪ್ಪ, ಮಂಜುನಾಥ್, ಶ್ರೀರಾಮರೆಡ್ಡಿ, ಶಿವಣ್ಣ, ವೆಂಕಟಸ್ವಾಮಿ, ಹಾಗೂ ಪಟ್ಟಣದ ನಾಗರೀಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.