

ಶ್ರೀನಿವಾಸಪುರ : ಜಗತ್ತಿನಲ್ಲಿ ಯಾರು ಪರಿಪೂರ್ಣರಲ್ಲ, ಎಲ್ಲರಲ್ಲೂ ಒಂದಲ್ಲ-ಒಂದು ನ್ಯೂನತೆ ಇರುತ್ತದೆ. ವಿಶೇಷ ಚೇತನರಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪೋಷಿಸಿದರೆ ಸಾದನೆ ಮಾಡಬಹುದು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ ಹೇಳಿದರು.
ಪಟ್ಟಣದ ನೌಕರರ ಭವನದಲ್ಲಿ ಸಾಂತ್ವನ ಟ್ರಸ್ಟ್ ವತಿಯಿಂದ ಶನಿವಾರ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಕಲಚೇತನರು ತಮ್ಮ ನ್ಯೂನತೆ ಮರೆತು ನೆಮ್ಮದಿಯಿಂದ ಬದಕು ಸಾಗಿಸುತ್ತಿದ್ದಾರೆ. ಅಂತಹವರಿಗೆ ಅನುಕಂಪ ತೋರದೆ ಅವರ ಕೆಲಸಗಳಿಗೆ ಪ್ರೋತ್ಸಾಹವನ್ನು ನೀಡಿ ಅತ್ಮಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದ ಇವರು ವಿಶೇಷಚೇತನರು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಚಲ ಇದ್ದರೆ ಸಾಕು ಏನುಬೇಕಾದರೂ ಸಾದನೆ ಮಾಡಬಹುದೆಂದು ತಿಳಿಸಿದರು.
ಇಒ ಎಸ್.ಶಿವಕುಮಾರಿ ಮಾತನಾಡಿ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿಶೇಷ ಸಾಲ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ ಅವುಗಳ ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕು ಸಾಧಿಸಬೇಕು ಎಂದು ಸಲಹೆ ನೀಡಿದರು. ವಿಕಲಚೇತನರು ವಿಶೇಷವಾಗಿರುವ ಕೌಶಲ, ಪ್ರತಿಭೆ ಇರುತ್ತದೆ. ವಿಕಲಾಂಗರಲ್ಲೂ ಇದೆ. ಸರಕಾರದ ಯೋಜನೆಗಳ ಸದುಪಯೋಗ ಪಡೆದು ನೆಮ್ಮದಿ ಜೀವನ ನಡೆಸಬೇಕೆಂದರು.
ಸಾಂತ್ವನ ಟ್ರಸ್ಟ್ನ ಅಧ್ಯಕ್ಷ ಕೆ.ವಿ.ವೆಂಕಟಚಾಲಪತಿ ಮಾತನಾಡಿ ನಮ್ಮ ಟ್ರಸ್ಟ್ವತಿಯಿಂದ ಕಳೆದ 15 ವರ್ಷಗಳಿಂದಲೂ ರಾಜ್ಯಾದ್ಯಾಂತ ಶೈಕ್ಷಣಿಕವಾಗಿ ಹಾಗು ಇತರೆ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದರು
ಟಿಎಚ್ಒ ಮಹ್ಮದ್ ಶರೀಫ್ ಮಾತನಾಡಿದರು. ಸಾಂತ್ವನ ಟ್ರಸ್ಟ್ನ ಕಾರ್ಯದರ್ಶಿ ವಿಶ್ವನಾಥ್, ಉಪಾಧ್ಯಕ್ಷ ವಿನಯ ಕೆ. ಪ್ರಕಾಶ್, ಖಜಾಂಚಿ ಶ್ರೀನಿವಾಸಗೌಡ, ನಿರ್ದೇಶಕ ಮಂಜುನಾಥರೆಡ್ಡಿ, ನಾಗರಾಜ್ಗೌಡ , ವಿಕಲಚೇತನ ತಾಲೂಕು ಸಂಯೋಜಕ ವೈ.ವಿ.ಶ್ರೀನಿವಾಸಗೌಡ, ಶಿಕ್ಷಕ ಅಶೋಕ್, ಬಿಐಇಆರ್ಟಿ ಎಸ್.ಎನ್.ಪದ್ಮ, ಆರೋಗ್ಯ ಇಲಾಖೆ ಸಿಬ್ಬಂದಿ ಆಂಜಲಮ್ಮ ಇದ್ದರು.