![](https://jananudi.com/wp-content/uploads/2025/02/Screenshot-946-2.png)
![](https://jananudi.com/wp-content/uploads/2025/02/IMG_20250207_112954.jpg)
ಶ್ರೀನಿವಾಸಪುರ : ಹಾಲಿ ಅಧ್ಯಕ್ಷರ ವಿರುದ್ಧ ಕೈ ಎತ್ತುವದರ ಮೂಲಕ ಅವಿಶ್ವಾವನ್ನು ತೋರಿಸಿದ್ದು, ಈ ಮೂಲಕ ರೋಣೂರು ಗ್ರಾಮಪಂಚಾಯಿತಿ ಅಧ್ಯಕ್ಷ ಅಮರಾವತಮ್ಮ ರವರನ್ನು ತೆರವು ಗೊಂಡಿದೆ ಘೋಷಣೆ ಮಾಡಲಾಗಿದೆ ಎಂದು ಉಪ ವಿಭಾಗಧಿಕಾರಿ ಮೈತ್ರಿ ಮಾಹಿತಿ ನೀಡಿದರು.
ತಾಲೂಕಿನ ರೋಣೂರು ಗ್ರಾಮ ಪಂಚಾಯಿತಿ ೧೩ ಸದಸ್ಯರು ಜ.೨೪ ನೇ ತಾರೀಖಿನಂದು ನಮ್ಮ ಕಚೇರಿಗೆ ಬಂದು ಹಾಲಿ ಅಧ್ಯಕ್ಷರ ಬಗ್ಗೆ ಅವಿಶ್ವಾಸದ ಬಗ್ಗೆ ಮನವಿ ನೀಡಿದ್ದರು ಅದರಂತೆ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಒಟ್ಟು ೧೮ ಸದಸ್ಯರ ಪೈಕಿ ೧೨ ಸದಸ್ಯರು ಹಾಜರಾಗಿದ್ದರು. ಸದಸ್ಯರೊಂದಿಗೆ ಸಮಾಲೋಚಿಸಿ ಅವಿಶ್ವಾಸ ನಿರ್ಣಯದ ಪರವಾಗಿ ಮತ ಹಾಕಿದ್ದಾರೆಂದು ಎಂದರು .
ಜಿಲ್ಲಾ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗೆ ಅವಿಶ್ವಾಸ ನಿರ್ಣಯ ಸಭೆಯ ಬಗ್ಗೆ ಮಾಹಿತಿ ನೀಡಲಾಗುವುದು. ಅವರು ಚುನಾವಣೆಯ ಬಗ್ಗೆ ನಿರ್ಣಯಿಸಿ , ೧೦ ದಿನಗಳ ಮುಂಚೆ ನೋಟಿಸ್ ಕೊಟ್ಟು, ಒಬ್ಬ ಚುನಾವಣಾಧಿಕಾರಿಯನ್ನ ನೇಮಿಸಿ ಅವರಿಂದ ಚುನಾವಣೆ ನಡೆಯಿಲಿದೆ ಎಂದರು .