ಶ್ರೀನಿವಾಸಪುರ, ಮೇ.20: ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ರೈತ ಕೂಲಿಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಿ ಕಾನೂನು ಬಾಹಿತ ಕಮೀಷನ್ ಹಾವಳಿಗೆ ಕಡಿವಾಣ ಹಾಕಿ ವಾಹನ ಸಂಚಾರ ಅವ್ಯವಸ್ಥೆ ಸರಿಪಡಿಸಬೇಕೆಂದು ಎ.ಪಿ.ಎಂ.ಸಿ ಕಾರ್ಯದರ್ಶಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
365 ದಿನ ಕಷ್ಟಪಟ್ಟು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಮಾವು ಪಸಲನ್ನು ಬಿಸಿಲು ಗಾಳಿ ಎನ್ನದೆ ದುಬಾರಿ ಔಷದಿಗಳನ್ನು ಖರೀದಿ ಮಾಡಿ ರೋಗಗಳಿಂದ ಮಾವು ಬೆಳೆ ರಕ್ಷಣೆ ಮಾಡಿ ಪಸಲನ್ನು ಮಾರುಕಟ್ಟೆಗೆ ತಂದರೆ ವ್ಯಾಪಾರಸ್ಥರು ರಾತ್ರಿವೇಳೆ ಹರಾಜು ಹಾಕಿ 10 ನಿಮಿಷದಲ್ಲಿ ವರ್ಷದ ರೈತರ ಕಷ್ಟವನ್ನು ಕಾನೂನು ಬಾಹಿರ ಕಮೀಷನ್ ಪಡೆದು ಕೋಟ್ಯಾಧಿಪತಿಗಳಾಗುತ್ತಿದ್ದರೆ ರೈತ ಮಾತ್ರ ಸಂಸಾರ ನಿರ್ವಹಣೆಗೆ ಖಾಸಗಿ ಸಾಲ ಮೊರೆ ಹೋಗುವ ಪರಿಸ್ಥಿತಿ ಇದೆ ಎಂದು ಮರುಕಟ್ಟೆಯ ಅವ್ಯವಸ್ಥೆಯ ಬಗ್ಗೆ ದ್ವನಿಯಿಲ್ಲದ ಕೋಮಾಸ್ಥಿತಿಯಲ್ಲಿರುವ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳ ವಿರುದ್ದ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿವರ್ಷ ಮಾವು ಸುಗ್ಗಿಕಾಲ ಪ್ರಾರಂಭವಾಗುವುದು ಅಧಿಕಾರಿಗಳ ಜನಪ್ರತಿನಿದಿಗಳ ಗಮನಕ್ಕೆ ಇದ್ದರೂ ಬದುಕು ಕಟ್ಟಿಕೊಳ್ಳಲು ಬರುವ ರೈತ ಕೂಲಿಕಾರ್ಮಿಕರಿಗೆ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಹೆಜ್ಜೆ ಹೆಜ್ಜೆಗೂ ಅನಾರೋಗ್ಯದ ಕತ್ತಲೆ ಕೂಪದಲ್ಲಿ ಕೆಲಸ ಮಾಡಿ ಮಕ್ಕಳ ಜೊತೆ ಸಂಸಾರ ಮಾಡಬೇಕಾದ ಪರಿಸ್ಥಿತಿ ಇದ್ದರೂ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಕುಡಿಯುವ ನೀರಿಲ್ಲ, ಶೌಚಾಲಯ ವ್ಯವಸ್ಥೆಯಿಲ್ಲ, ಕನಿಷ್ಠ ಮಹಿಳೆಯರ ರಕ್ಷಣೆಗೆ ತಂಗುದಾಣಗಳಿಲ್ಲ, ಸಿ,ಸಿ ಕ್ಯಾಮಾರ ವ್ಯವಸ್ಥೆಯಿಲ್ಲ ಒಟ್ಟಾರೆಯಾಗಿ ಮಾವು ಸುಗ್ಗಿಕಾಲ ಅಧಿಕಾರಿಗಳ ವ್ಯಾಪಾರಸ್ಥರ ಜೇಬು ತುಂಬಿಸುವ ಕಾಲವಾಗಿ ಮಾರ್ಪಡುತ್ತಿರುವುದು ದುರಾದೃಷ್ಠಕರ ಎಂದು ವಿಷಾದ ವ್ಯಕ್ತಪಡಿಸಿದರು.
ರೈತ ಸಂಘದ ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಪ್ರತಿವರ್ಷ ಮಳೆಗಾಲದಲ್ಲಿ ಪ್ರಾರಂಭವಾಗುವ ಮಾವು ಸುಗ್ಗಿಕಾಲ ಮಾರುಕಟ್ಟೆಯ ಅವ್ಯವಸ್ಥೆ ಕೋಮಾಸ್ಥಿತಿಯಲ್ಲಿರುವ ಅಧಿಕಾರಿಗಳು ದಿಕ್ಕುತೋಚದೆ ಮಳೆ ಚಳಿಗೆ ತಮ್ಮ ಆರೋಗ್ಯವನ್ನು ಕಡೆಸಿಕೊಳ್ಳುತ್ತಿರುವ ಕೂಲಿಕಾರ್ಮಿಕರು ಯಾವ ಪಾಪ ಮಾಡಿದ್ದಾರೋ ಗೊತ್ತಿಲ್ಲ ಅಧಿಕಾರಿಗಳ ನಿರ್ಲಕ್ಷೆಕ್ಕೆ ಬದುಕು ಕಟ್ಟಿಕೊಂಡು ಬರುವ ರಕ್ಷಣೆಯನ್ನು ಕಾಲಕಸದಂತೆ ಕಾಣುತ್ತಿರುವ ಮಂಡಿಮಾಲಿಕರ ವಿರುದ್ದ ಕ್ರಮ ಕೈಗೊಳ್ಳಬೇಕಾದ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾವು ತಿಂದು ಅನಾರೋಗ್ಯದಿಂದ ನಾಪತ್ತೆ ಅಗಿದ್ದಾರೆಂದು ಲೇವಡಿ ಮಾಡಿದರು.
ಮಳೆ ಬಿದ್ದರೆ ಕೆರೆಕುಂಟೆ ಆಗುತ್ತಿರುವ ಮಾರುಕಟ್ಟೆ ಕೊಳೆತ ಮಾವು ಕಸವನ್ನು ತೆರೆವುಗೊಳಿಸದ ನಗರಸಬೆ ಅಧಿಕಾರಿಗಳು ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ತಾಲ್ಲೂಕಾಡಳಿತ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ರೈತ ಕೂಲಿಕಾರ್ಮಿಕರ ಬದುಕು ಸುದಾರಿಸಿಕೊಳ್ಳುವುದು ಯಾವಾಗ ಎಂದು ಪ್ರಶ್ನೆ ಮಾಡಿದರು.
24 ಗಂಟೆಯಲ್ಲಿ ಲಾರಿ ನಿಲ್ದಾಣಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಾನೂನು ಬಾಹಿರ ಕಮೀಷನ್ ಹಾವಳಿಗೆ ಕಡಿವಾಣ ಹಾಕಿ ರಕ್ಷಣೆ ಮಾಡದೆ ಇದ್ದರೆ ಕೊಳೆತ ಮಾವು ಸಮೇತ ಸ್ಥಳಿಯ ಶಾಸಕರ ಮನೆ ಮುಂದೆ ಬಡವರ ನೋವಿನ ಹೋರಾಟದೊಂದಿಗೆ ಎಚ್ಚರಿಕೆ ನೀಡಿ ತಹಶೀಲ್ದಾರ್ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಎ.ಪಿ.ಎಂ.ಸಿ ಕಾರ್ಯದರ್ಶಿರವರು ಮಾರುಕಟ್ಟೆಯಲ್ಲಿ ಸಮಸ್ಯೆ ಇರುವುದು ನಿಜ, ಅವ್ಯವಸ್ಥೆಯನ್ನು ಸರಿಪಡಿಸಿ ಸಮಸ್ಯೆ ಯನ್ನು ಬಗೆಹರಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ದ್ಯಾವಂಡಹಳ್ಳಿ ರಾಜೇಂದ್ರಪ್ಪ, ಸಹದೇವಣ್ಣ, ಮಂಗಸಂದ್ರ ತಿಮ್ಮಣ್ಣ, ಅಲವಾಟಿ ಶಿವು, ಮುನಿರಾಜು ಮುಂತಾದವರಿದ್ದರು.