ಶ್ರೀನಿವಾಸಪುರ : ವಿದ್ಯಾರ್ಥಿಗಳಿಗೆ ಕೆಲವರಿಗೆ ಬಹುಮಾನ ಬರುತ್ತದೆ ಕೆಲವರಿಗೆ ಬರುವುದಿಲ್ಲ ಆದರೆ ಬಹುಮಾನ ಬರುವುದಕ್ಕಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ . ನಿಮ್ಮಲ್ಲಿನ ಪ್ರತಿಭೆಯನ್ನು ಹೊರಹೊಮ್ಮಸುವುದಕ್ಕಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ. ಎಂದು ವಿದ್ಯಾರ್ಥಿಗಳಿಗೆ ಶುಭಕೋರಿದರು. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪ್ರತಿದಿನ ಯೋಗ, ದ್ಯಾನ ಮಾಡಿಸುವಂತೆ ದೈನಂದಿನ ಚಟುವಟಿಕೆಯಂತೆ ಪ್ರತಿ ಮಾಡಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಶಿಕ್ಷಕರಿಗೆ ತಿಳಿಸಿದರು.
ತಾಲೂಕಿನ ರಾಯಲ್ಪಾಡು ಗ್ರಾಮದ ಸರ್ಕಾರಿ ಸರ್ಕಾರಿ ಪದವಿ ಪೂರ್ವ ಕಾಲೇಜುವರಣದಲ್ಲಿ ಗುರುವಾರ ತಾಲೂಕು ಮಟ್ಟದ ಕಿರಿಯ/ ಹಿರಿಯ/ ಪ್ರೌಡಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ನನ್ನನ್ನು ನಂಬಿ 5 ನೇ ಬಾರಿ ಶಾಸಕನಾಗಿ ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ ನಾನು ಮತದಾರರ ಹಿತಕ್ಕಾಗಿ ಋಣತೀರಿಸುವ ಸಲುವಾಗಿ ಹಗಲಿರುಲು ದುಡಿಯಲು ಸಿದ್ದನಿದ್ದೇನೆ. ಕಾಲೇಜು ಆವಣರದಲ್ಲಿ ರಂಗಮಂದಿರ ನಿರ್ಮಿಸಲು ನಾನು ನನ್ನ ಅನುದಾನದಿಂದ 5ಲಕ್ಷ ಕೂಡುತ್ತೇನೆ. ಉಳಿದ ಕಾಮಗಾರಿಯನ್ನು ಗ್ರಾಮಪಂಚಾಯಿತಿ ವತಿಯಿಂದ ಮಾಡಿಕೊಡಲು ಪಿಡಿಒ ರವರಿಗೆ ಸೂಚಿದ್ದೇನೆ ಎಂದರು.
ಯಂಡಗುಟ್ಟಪಲ್ಲಿ ಗ್ರಾಮದ ಬಳಿ ಸರ್ವೆ ನಂಬರ್ 55 ರಲ್ಲಿ ಅಂದಾಜು 33 ಎಕರೆ ಸರ್ಕಾರಿ ಭೂಮಿ ಇದ್ದು, ಆ ಭೂಮಿಯನ್ನು ಕೆಲವರು ಒತ್ತವರಿ ಮಾಡಿಕೊಂಡಿದ್ದು, ತಕ್ಷಣ ಬಿಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಜಾಗದಲ್ಲಿ ಸುಮಾರು 500 ಕಡುಬಡವರಿಗೆ ನಿವೇಶನಗಳನ್ನು ನಿರ್ಮಿಸಿ ಅಲ್ಲಿ ಟೌನ್ಶಿಫ್ ಮಾಡಲು . ಹಾಗು ಅಲ್ಲಿ ವಿವಿಧ ಇಲಾಖೆಗಳ ಕಚೇರಿಗಳನ್ನು ನಿರ್ಮಿಸಲು ಯೋಜನೆಯನ್ನು ಹಮ್ಮಿಕೊಂಡಿದ್ದೇನೆ ಎಂದರು. ಇದೇ ಸಮಯದಲ್ಲಿ ಗ್ರಾಮ ದಿವಗಂತ ಆರ್.ಜಿ.ನಾರಾಯಣರೆಡ್ಡಿ ರವರು ಮಾಡಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ನೆನೆದರು.
ಕಾರ್ಯಕ್ರಮಕ್ಕೆ ತಹಶೀಲ್ದರ್ ಜಿ.ಎನ್.ಸುದೀಂದ್ರ ಹಾಗು ಇಒ ಶಿವಕುಮಾರಿ ಗೈರು ಹಾಜರಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿವುದು ಬಿಟ್ಟು . ಕಾರ್ಯಕ್ರಮಕ್ಕೆ ಗೈರುಹಾಜರಾಗುವುದು ಎಷ್ಟು ಸರಿ ಎಂದು ಗರಂ ಆದರು. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವುದೇ ಸಮಜಾಯಿಸಿ ನೀಡದೆ ಕಾರ್ಯಕ್ರಮದಲ್ಲಿ ಪಾಲ್ಗುಳ್ಳಬೇಕು ಎಂದು ಎಚ್ಚರಿಸಿದರು.
ಇದೇ ಸಮಯದಲ್ಲಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳನ್ನು ವಿಕ್ಷೀಸಿ ಮೆಚ್ಚುಗೆ ವ್ಯಕ್ತಪಡಿಸಿ , ಮಕ್ಕಳೊಂದಿಗೆ ಸೆಲ್ಪಿ ಫೋಟೋಗಳನ್ನು ತೆಗೆಸಿಕೊಂಡರು.
ತಾಲೂಕಿನ ಶಿಕ್ಷಕರು ತೀರ್ಪಗಾರರಾಗಿ ಕಾರ್ಯನಿರ್ವಹಿಸಿದರು. ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ, ನಿರ್ದೇಶಕರಾದ ಆರ್.ಕಳಾಚಾರಿ, ಕೆ.ರಾಜಣ್ಣ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈಯಾರೆಡ್ಡಿ, ಕಾರ್ಯದರ್ಶಿ ಶಿವಣ್ಣ, ಜಿಲ್ಲಾ ಖಜಾಂಚಿ ಆರ್.ಎಸ್.ರೆಡ್ಡಪ್ಪ, ವೇಣುಗೋಪಾಲ್, ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್.ರಾಮಚಂದ್ರ, ನೋಡಲ್ಅಧಿಕಾರಿ ಆರ್.ಸುಬ್ರಮಣಿ, ಇಸಿಒ ಗಳಾದ ಕೆ.ಸಿ.ಶ್ರೀನಿವಾಸ್, ಎಲ್.ವಿ.ಲಕ್ಷ್ಮೀನಾರಾಯಣ, ಜಿ.ಎನ್.ಕೋದಂಡಪ್ಪ, ವೆಂಕಟರಮಣಪ್ಪ, ಪ್ರಾಥಮಿಕ, ಬಿಆರ್ಪಿ, ಬಿಐಇಆರ್ಪಿ, 26 ಕ್ಲಸ್ಟರ್ಗಳ ಸಿಆರ್ಪಿಗಳು, ಪ್ರೌಡಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು , ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಸ್.ಮಂಜುಳ, ಪದವಿ ಪೂರ್ವ ಕಾಲೇಜಿನ ದಾನಿಗಳಾದ ನರೇಶ್, ಉಪೇಂದ್ರ, ಮಹೇಶ್, ಸುರೇಶ್, ಸಿಮೆಂಟ್ನಾರಾಯಣಸ್ವಾಮಿ, ಚಕ್ಕಾ ಅಪ್ಪಿ, ಅರುಣವೆಂಕಟ್ ಇದ್ದರು.