ಶ್ರೀನಿವಾಸಪುರ: ಜನರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು:ರೋ|ಡಾ. ವೈ.ವಿ.ವೆಂಕಟಾಚಲ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಜನರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ತಾಲ್ಲೂಕಿನ ಯಲ್ದೂರು ಗ್ರಾಮದ ಶ್ರೀನಿವಾಸ ಪಬ್ಲಿಕ್ ಶಾಲೆ ಆವರಣದಲ್ಲಿ ವಿವಿಧ ರೋಟರಿ ಕ್ಲಬ್ ಘಟಕಗಳಿಂದ ಶನಿವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಬಡ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಸೇವಾ ಸಂಸ್ಥೆಗಳು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತವೆ. ಅರ್ಹ ಫಲಾನುಭವಿಗಳು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ರೋಟರಿ ಕಂಟೋನ್‍ಮೆಂಟ್ ಅಧ್ಯಕ್ಷ ವಿನೋದ್ ಜಾನ್, ರೋಟರಿ ಕಲ್ಯಾಣ್ ಅದ್ಯಕ್ಷ ನವೀನ್ ಕುಮಾರ್, ರೋಟರಿ ಹಲಸೂರು ಅಧ್ಯಕ್ಷ ಸಂತೋಷ್ ಬೈಜ್‍ವಾಲಾ, ಗ್ಲೋಬಲ್ ಪ್ರಾಸ್ಟೇಟ್ ಫೌಂಡೇಷನ್ ಮತ್ತು ಬ್ರೆಸ್ಟ್ ಕ್ಯಾನ್ಸರ್ ಫೌಂಡೇಶನ್ ಸಂಸ್ಥಾಪಕ ಕರ್ನಲ್ ಅಯ್ಯಪ್ಪ, ಜಿಲ್ಲಾ ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷ ಡಾ. ಲೋಹಿತ್ ಮುನಿಯಪ್ಪ, ರೊಟೇರಿಯನ್ಸ್ ಎಸ್.ವಿ.ಸುಧಾಕರ್, ರಾಮಚಂದ್ರಪ್ಪ, ಜಯರಾಮೇಗೌಡ, ರವೀದ್ರನಾಥ್ ಇದ್ದರು.
ಶಿಬಿರದಲ್ಲಿ 165 ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಯಿತು. ಅರ್ಹ ರೋಗಿಗಳನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು.