ಶ್ರೀನಿವಾಸಪುರ ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದಲ್ಲಿ ಸೋಮವಾರ ವರಸಿದ್ಧ ವಿನಾಯಕ, ಆದಿನಾಗ ಸಮೇತ ಏಕಾದಶ ನಾಗರಾಜ ಪ್ರತಿಷ್ಠಾಪನಾ ಮಹೋತ್ಸವ ಏರ್ಪಡಿಸಲಾಗಿತ್ತು.
ನಾಗರಾಜ ಪ್ರತಿಷ್ಠಾಪನಾ ಮಹೋತ್ಸವ
ಶ್ರೀನಿವಾಸಪುರ: ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದಲ್ಲಿ ಸೋಮವಾರ ವರಸಿದ್ಧ ವಿನಾಯಕ, ಆದಿನಾಗ ಸಮೇತ ಏಕಾದಶ ನಾಗರಾಜ ಪ್ರತಿಷ್ಠಾಪನಾ ಮಹೋತ್ಸವ ಏರ್ಪಡಿಸಲಾಗಿತ್ತು.
ಮಹೋತ್ಸವದ ಅಂಗವಾಗಿ ಗಣಪತಿ ಹೋಮ, ಕಳಶಾರಾಧನೆ, ಹಣಹೋಮ, ಮೂರ್ತಿಹೋಮ, ರುದ್ರಹೋಮ, ನಾಗಹೋಮ, ಕಳಸ್ಯಾಸಹೋಮ, ನೇತ್ರೋನ್ಮಿಲನ, ಪ್ರಾಣಪ್ರತಿಷ್ಠೆ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಶೀರ್ವಚನ ಹಾಗೂ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದೇವಾಲಯದ ಧರ್ಮದರ್ಶಿ ಎಂ.ಗೋಪಾಲಕೃಷ್ಣ ಮಾತನಾಡಿ, ಹಿಂದೆ ಈಗ ದೇವಾಲಯವಿರುವ ಸ್ಥಳದಲ್ಲಿ ಗ್ರಾಮಸ್ಥರು ಸಾಮೂಹಿಕವಾಗಿ ನಾಗರ ಪಂಚಮಿ ಆಚರಿಸುತ್ತಿದ್ದರು. ಆದ್ಧರಿಂದ ಭಕ್ತಾದಿಗಳ ಆಶಯದಂತೆ ಹಾಗೂ ದೈವಾದೇಶದ ಮೇರೆಗೆ ನಮ್ಮ ಸ್ವಂತ ಜಮೀನಿನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಂದೆ ಸಾರ್ವಜನಿಕರಿಗೆ ಅನುಕೂಲವಾಗುಂತೆ ಕಲ್ಯಾಣ ಮಂಟಪ ನಿರ್ಮಿಸಲಾಗುವುದು. ಸಾರ್ವಜನಿಕರು ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಅರ್ಚಕರು ಹಾಗೂ ಪ್ರಧಾನ ಆಗಮಿಕರಾದ ಅನಿಲ್ ಕುಮಾರ್ಶರ್ಮ, ಶಿಲ್ಪಿ ಎಸ್.ಮಂಜುನಾಥಾಚಾರಿ, ಧರ್ಮಕರ್ತರಾದ ಮುನಿಯಮ್ಮ, ಎಂ.ಎಲ್.ಮುನಿವೆಂಕಟಪ್ಪ, ಮುಖಂಡರಾದ ಸೊಣ್ಣಪ್ಪರೆಡ್ಡಿ, ರಾಘವೇಂದ್ರ, ರಘು, ಸುನಿಲ್, ಶ್ರೀರಾಮಪ್ಪ, ಕೃಷ್ಣಪ್ಪ, ಶ್ರೀನಿವಾಸ್, ಗಿರೀಶ್, ಮುನಿವೆಂಕಟಪ್ಪ, ಸುರೇಶ್ ರೆಡ್ಡಿ, ಶ್ರೀನಾಥರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.