

ಶ್ರೀನಿವಾಸಪುರ : ಪುರಸಭೆ ಎಚ್ಚೆತ್ತುಕೊಂಡು ಶುಕ್ರವಾರ ಒತ್ತುವರಿ ತೆರುವು ಕಾರ್ಯ ಮುಖ್ಯಾಧಿಕಾರಿ ವಿ.ನಾಗರಾಜ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
2010 ಕ್ಕೂ ಮೊದಲು ತಿಪ್ಪೆ ಗುಂಡಿಯಾಗಿದ್ದ ಈ ಸ್ಥಳವನ್ನು, 2010/11 ರಲ್ಲಿ ನಮ್ಮ ಊರು ಟ್ರಸ್ಟ್ ವತಿಯಿಂದ, ತಮ್ಮ ಸ್ವಂತ ಖರ್ಚಿನಲ್ಲಿ ಈ ಸುಂದರವಾದ ಉದ್ಯಾನವನವನ್ನು ನಿರ್ಮಾಣ ಮಾಡಿದರು. ನಂತರದ ದಿನಗಳಲ್ಲಿ ಇದೇ ಉದ್ಯಾನವನಕ್ಕೆ ಪುರಸಭೆವತಿಯಿಂದ 25 ಲಕ್ಷದ ಟೆಂಡರ್ ಕರೆದಿದ್ದು ಊರಿನ ಜನಕ್ಕೆ ತಿಳಿದ ವಿಚಾರ. ಸುಂದರವಾದ ಉದ್ಯಾನವನವನ್ನು ನಿರ್ಮಿಸಿ ಕೊಟ್ಟರೂ, ಮುನಿಸಿಪಾಲಿಟಿ ರವರು ನಿರ್ವಹಣೆ ಮಾಡದೆ, ಈ ಉದ್ಯಾನವನ ಹಳಾಗತೊಡಗಿದಾಗ, ನಮ್ಮ ಊರು ಟ್ರಸ್ಟ್ ನವರೇ ಬಹಳ ವರ್ಷಗಳ ಕಾಲ ನಿರ್ವಹಣೆ ಮಾಡಿದರು.
ನಂತರದ ದಿನಗಳಲ್ಲಿ ರೋಡ್ ಅಗಲೀಕರಣ ನೆಪದಲ್ಲಿ, ಸಮಾಜ ಘಾತುಕ ಶಕ್ತಿಗಳು, ಉದ್ಯಾನವನದ ಬೇಲಿಯನ್ನು ವ್ಯವಸ್ಥಿತವಾಗಿ ಕಿತ್ತು ಹಾಕಿದರು. ಇದನ್ನು ವಿರೋಧಿಸಿ, ಶ್ರೀನಿವಾಸಪುರ ಮತ್ತು ಕೋಲಾರ ರಸ್ತೆಯನ್ನು ಸಾರ್ವಜನಿಕರು ಬಂದ್ ಮಾಡಿ ಪ್ರತಿಭಟಿಸಿದರು.
ಇμÉ್ಟಲ್ಲಾ ಇತಿಹಾಸ ಇಟ್ಟುಕೊಂಡಿರುವ ಉದ್ಯಾನವನವನ್ನು ಖಾಸಗಿ ವ್ಯಕ್ತಿಗಳು ಇಂದು ತಮ್ಮ ಸ್ವಂತ ಲಾಭಕ್ಕೆ, ತಮ್ಮ ವಾಹನಗಳಿಗೆ ಪಾಕಿರ್ಂಗ್ ಲಾಟ್ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಇದನ್ನು ಕಂಡ ನಮ್ಮ ಊರು ಟ್ರಸ್ಟ್ ನ ಸದಸ್ಯರು ತಮ್ಮ ಮನದಾಳದ ನೋವನ್ನು ಹಂಚಿಕೊಂಡರು.