

ಶ್ರೀನಿವಾಸಪುರ : ಕೆರೆಗಳು ಸಾರ್ವಜನಿಕರ ಸ್ವತ್ತು. ಇದನ್ನ ಎಲ್ಲರೂ ಕಾಪಾಡಬೇಕಾಗಿದೆ. ಸರ್ಕಾರ ಸ್ವತ್ತಿಗೆ ಯಾವುದೇ ಕಾರಣಕ್ಕೂ ನೋಟಿಸ್ ಕೊಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಸೋಮವಾರ ಬೇಟಿ ಮಾಡಿ ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಿ ಮಾತನಾಡಿದರು.
ಈಗಾಗಲೇ ಕೆರೆಗಳ ಸರ್ವೆ ಕಾರ್ಯನಡೆಯುತ್ತಿದ್ದು, ಸರ್ವೆ ಮಾಡಿ ಒತ್ತುವರಿಯಾಗಿದ್ದರೆ ಗುರ್ತಿಸಿ, ಒತ್ತುವರಿ ತೆರವುಗೊಳಿಸುವುದು. ಕಾರ್ಯನಡೆಯುತ್ತಿದ್ದು, ಒಂದು ವೇಳೆ ಆ ಕೆರೆ ಏನಾದರೂ ಜಿ.ಪಂ ಅದೀನದಲ್ಲಿ ಇದ್ದರೆ ಅದನ್ನ ಗ್ರಾ.ಪಂ. ಪಿಡಿಒ ಹಾಗು ನಮ್ಮ ಇಲಾಖಾಧಿಕಾರಿ ಸಮುಖದಲ್ಲಿ ಸರ್ವೇ ಮಾಡಿ ಅದು ಒತ್ತವರಿಯಾಗಿದ್ದರೆ ಅದನ್ನ ಟ್ರಂಚ್ ಹೊಡಿಸಿ ಆ ಕೆರೆಯನ್ನ ಗ್ರಾ.ಪಂ. ಪಿಡಿಒ ರವರಿಗೆ ಒಪ್ಪಿಸುತ್ತಾರೆ.
ಕೆರೆಯಂಗಳದಲ್ಲಿ ಬೆಳದ ಪೂರ್ತಿ ಫಸಲು ಬಂದಿದ್ದರೆ ಯಾವುದೇ ಕಾರಣಕ್ಕೂ ನಾಶ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪಟ್ಟಣದ ಅಮಾನಿಕೆರೆಯಂಗಳದಲ್ಲಿ ಸುಮಾರು 200 ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಕೆರೆಯು ಅಳತೆ ಆಗಿದಿಯೋ ಇಲ್ಲವೋ ನನಗೆ ಇನ್ನು ಮಾಹಿತಿ ಸಿಕ್ಕಿಲ್ಲ. ತಾಲೂಕಿನ ಇನ್ನು ಉಳಿದ 50 ರಷ್ಟು ಕೆರೆಗಳು ಅಳತೆ ಆಗಬೇಕಾಗಿದೆ ಎಂದರು.
ಇದೇ ಸಮಯದಲ್ಲಿ ತಾಲೂಕಿನ ಸಾರ್ವಜನಿಕರ ಅರ್ಜಿಗಳನ್ನು ಸಲ್ಲಿಸಿದಾಗ ಆ ಅರ್ಜಿಗಳನ್ನು ಪರಿಶೀಲಿಸಿ , ಕೆಲವೊಂದು ಸಮಸ್ಯೆಗಳಿಗೆ ತಹಶೀಲ್ದಾರ್ವರೊಂದಿಗೆ ಚರ್ಚೆ ಮಾಡಿದರು. ಹಾಗು ವಿವಿಧ ಇಲಾಖಾಧಿರಿಗಳೊಂದಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಅತಿ ಶೀಘ್ರವಾಗಿ ಪರಿಹಾರ ಮಾಡಿಕೊಡುವಂತೆ ನಿದೇರ್ಶನ ನೀಡಿದರು. ಕಳೆದ ತಿಂಗಳಲ್ಲಿ ಕೇತಗಾನಹಳ್ಳಿ ಬಳಿ ಅರಣ್ಯ ಒತ್ತವರಿ ಆಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ನಮ್ಮ ಮೇಲೆ ದೌರ್ಜನ್ಯ ವೆಸಗೆದ್ದಾರೆಂದು ದೂರಿದರು. ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.