ಶ್ರೀನಿವಾಸಪುರ : ಮಹತ್ವಾಕಾಂಕ್ಷಿ ಮಹಿಳೆಯರಿಗೆ ವಿಶೇಷವಾದ ಅವಕಾಶ ಇದಾಗಿದ್ದು, ಮಹಿಳೆಯರು ಪೂರ್ಣ ಸಮಯ ಅಥವಾ ಅರೆಕಾಲಿಕ ಏಜೆಂಟರಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಬೆಂಗಳೂರು-೨ ವಿಭಾಗದ ಕಾನೂನು ವ್ಯವಸ್ಥಾಪಕ ನರೇಂದ್ರಬಾಬು ತಿಳಿಸಿದರು.
ಪಟ್ಟಣದ ಎಲ್ಐಸಿ ಉಪಶಾಖೆಯಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಯೋಜನೆಯಾದ ಬಿಮಾ ಸಖಿ-ಮಹಿಳಾ ಕೆರಿಯರ್ ಏಜೆಂಟ್ ಬಗ್ಗೆ ಮಾಹಿತಿ ನೀಡಿ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಹತೆಯ ಕನಿಷ್ಟ ಪಕ್ಷ ೧೦ ನೇ ತರಗತಿ ತೇರ್ಗಡೆಯಾಗುಬೇಕಾಗಿದ್ದು, ಮಹಿಳೆಯರು ನಿಮ್ಮ ಮನೆಯಲ್ಲಿಯೇ ಇದ್ದುಕೊಂಡು ಕೆಲಸ ಮಾಡುತ್ತಾ ಅನಿಯಮಿತ ಆದಾಯ ಹೊಂದುವ ಸುವರ್ಣಾವಕಾಶ. ಈ ಯೋಜನೆಗೆ ಸಂಬಂದಿಸಿದಂತೆ ೩ ವರ್ಷ ಸ್ಟೈಫಂಡ್ ನೀಡಲಾಗಿ ೧ನೇ ವರ್ಷ ಏಳು ಸಾವಿರ ಪ್ರೀಮಿಯಮ್, ೨ನೇ ವರ್ಷ ಆರು ಸಾವಿರ ಪ್ರೀಮಿಯಮ್, ೩ನೇ ವರ್ಷ ಐದು ಸಾವಿರ ಪ್ರೀಮಿಯಮ್ ನೀಡಲಾಗುವುದು.
ಬಿಮಾ ಸಖಿ-ಮಹಿಳಾ ಕೆರಿಯರ್ ಏಜೆಂಟ್ ಈ ಯೋಜನೆಯನ್ನು ಇದೇ ತಿಂಗಳು ಪ್ರದಾನ ಮಂತ್ರಿ ನರೇಂದ್ರ ಮೋದಿರವರು ಮುಂಬಾಯಿ ಎಲ್ಐಸಿ ಶಾಖೆಯಲ್ಲಿ ಉದ್ಗಾಟನೆ ಮಾಡಲಿದ್ದಾರೆ . ಈ ಉಪಶಾಖೆಯಲ್ಲಿ ಅತಿ ಹೆಚ್ಚು ಮಹಿಳಾ ಏಜೆಂಟರಾಗಿ ನೇಮಕವಾಗಬೇಕು ಎಂದರು. ಏಜೆಂಟರ್ ಮಿಷನ್- ೫೦೦೦ ಈ ಪಾಲಿಸಿಗೆ ಸಂಬಂದಿಸಿದಂತೆ ಹೆಚ್ಚು ಪಾಲಿಸಿದಾರರನ್ನಾಗಿಸಬೇಕು ಎಂದು ಏಜೆಂಟರ್ಗೆ ಸಲಹೆ ನೀಡಿದರು.
ಉಪಶಾಖೆ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಮಾತನಾಡಿ ಶ್ರೀನಿವಾಸಪುರ ಉಪಶಾಖೆಯಿಂದ ಕನಿಷ್ಟ ೨೦೦ ಪಾಲಿಸಿ ಮಾಡಬೇಕು. ಏಜೆಂಟರ್ ಪ್ರತಿಯೊಬ್ಬರಿಗೆ ಪಾಲಿಸಿಯ ಉಪಯೋಗಗಳ ಬಗ್ಗೆ ಅರಿವು ಮೂಡಿಸಬೇಕು. ಏಜೆಂಟರ್ಗೆ ಹೆಚ್ಚು ಪಾಲಿಸಿಗಳನ್ನು ಮಾಡಿಸಲು ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.
ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಲು ಬಿಮಾ ಸಖಿ- ಮಹಿಳಾ ಕೆರಿಯರ್ ಏಜೆಂಟ್ನ್ನು ತೆರೆಯಲಾಗಿದ್ದು, ಮಹಿಳೆಯರು ಹೆಚ್ಚು ಹೆಚ್ಚು ಏಜೆಂಟರಾಗಿಸಲು ಪ್ರಯತ್ನಿಸಬೇಕು ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗ 2 ಆಡಳಿತ ಅಧಿಕಾರಿ ಸಿ. ಸುಬ್ರಮಣಿ, ಸ್ಥಳೀಯ ಉಪಖಾಖೆ ಆಡಳಿತ ಅಧಿಕಾರಿ ಡಿ. ರವಿಶಂಕರ್, ಅಭಿವೃದ್ಧಿ ಅಧಿಕಾರಿ ಲಿಖಿತ್ ಕುಮಾರ್ ಕೆ, ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.