ಶ್ರೀನಿವಾಸಪುರ.: ಹೊಸಹುಡ್ಯ ಜಿಗಲಕುಂಟೆ ಅರಣ್ಯ ಒತ್ತುವರಿ ಮಾಡಿರುವ ಮಾಜಿ ಸ್ಪೀಕರ್ ರಮೇಶ್ಕುಮಾರ್ ರವರ ಜಮೀನು ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ಜಂಟಿ ಸರ್ವೇ ಮಾಡಿ ಒತ್ತುವರಿ ತೆರೆವುಗೊಳಿಸಬೇಕು ಎಂದು ರೈತ ಸಂಘದಿಸಿದ ತಾಲ್ಲೂಕು ಕಚೇರಿಯ ಮುಂದೆ ಅರೆಬೆತ್ತಲೆ ಹೋರಾಟ ಮಾಡಿ ಕಂದಾಯ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಒಂದು ವಾರದೊಳಗೆ ಕಂದಾಯ ಅರಣ್ಯಾಧಿಕಾರಿಗಳು ಜಂಟಿ ಸರ್ವೇ ನಡೆಸಿ ಪ್ರಭಾವಿ ಮಾಜಿ ಸ್ಪೀಕರ್ ರಮೇಶ್ಕುಮಾರ್ರವರ ಜಿಗಲಕುಂಟೆ ಅರಣ್ಯ 61 ಎಕರೆ ಭೂ ಒತ್ತುವರಿ ತೆರೆವುಗೊಳಿಸದೆ ಇದ್ದರೆ ರೈತರೇ ಕಾನೂನನ್ನು ಕೈಗೆತ್ತಿಕೊಂಡು ಕಳೆದುಕೊಂಡಿರುವ ಭೂಮಿಯನ್ನು ವಶಕ್ಕೆ ಪಡೆಯುವ ಪ್ರೋ.ನಂಜುÂಡಸ್ವಾಮಿರವರ 80 ರ ದಶಕದ ಹೋರಾಟದ ರೈತ ಕ್ರಾಂತಿ ಶ್ರೀನಿವಾಸಪುರ ತಾಲ್ಲೂಕಿನಿಂದಲೇ ಪ್ರಾರಂಭವಾಗುತ್ತದೆ. ಇದು ಎಚ್ಚರಿಕೆಯಲ್ಲಿ ದೇಶಕ್ಕೆ ಅನ್ನ ಹಾಕುವ ಅನ್ನದಾತನ ಹೊಸ ಕಾನೂನು ಎಂಬುದನ್ನು ಅರಿತುಕೊಂಡು ಸಮಸ್ಯೆ ಬಗೆಹರಿಸಿ ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದು ತೋರಿಸಿಕೊಡಿ ಎಂದು ಕಂದಾಯ ಅಧಿಕಾರಿಗಳಿಗೆ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಸಲಹೆ ನೀಡಿದರು.
ಪ್ರಭಾವಿ ರಾಜಕಾರಣಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ರವರು ಒತ್ತುವರಿ ಮಾಡಿಕೊಂಡಿರುವ ಜಿಗಲಕುಂಟೆ ಅರಣ್ಯ ಸರ್ವೇ ನಂ.1 ಮತ್ತು 2 ರಲ್ಲಿನ 61 ಎಕರೆ ಒತ್ತುವರಿ ತೆರೆವುಗೊಳಿಸಲು ಕಂದಾಯ ಅಧಿಕಾರಿಗಳೇ ಸರ್ವೇ ಮಾಡಲು ನಿಮ್ಮ ಮೇಲೆ ಯಾರ ಒತ್ತಡವಿದೆ? ಸಾರ್ವಜನಿಕವಾಗಿ ಬಹಿರಂಗ ಪಡಿಸಿ ಇಲ್ಲವಾದರೆ ಸರ್ಕಾರಿ ಸಂಬಳ ಬಿಟ್ಟು ರಮೇಶ್ ಕುಮಾರ್ರವರ ಬೆಂಗಾವಲಾಗಿ ನಿಯತ್ತಾಗಿ ಕೆಲಸ ನಿರ್ವಹಿಸಬಹುದಲ್ಲವೇ ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.
ಸರ್ಕಾರಿ ಕೆಲಸ ಪಡೆಯುವಾಗ ಸಂವಿಧಾನದ ಅಡಿಯಲ್ಲಿ ಕಟ್ಟಕಡೆಯ ಪ್ರಜೆಗೂ ನ್ಯಾಯ ದೊರಕಿಸಿಕೊಡುತ್ತೇವೆಂಬ ಆಣೆ ಪ್ರಮಾಣಿ ಮಾಡಿ ಕೆಲಸಕ್ಕೆ ಸೇರುವ ಅಧಿಕಾರಿಗಳೇ ಬಡವರ ಸೇವಕರಾಗದೆ ಶ್ರೀಮಂತರ ಗುಲಾಮರಾಗಿ ಕೆಲಸ ಮಾಡುವುದು ಪ್ರಜಾಪ್ರಭುತ್ವದ ಪ್ರಜಾ ವಿರೋದಿ ದೋರಣೆ ಅಲ್ಲವೇ ಎಂಬುದು ನಿಮ್ಮ ಮನಸಾಕ್ಷಿಗೆ ಅನಿಸುತ್ತಿಲ್ಲವೇ ಎಂದು ಕಿಡಿ ಕಾರಿದರು. ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಬಡವರ ಸರ್ಕಾರಿ ಒತ್ತುವರಿ ಜಮೀನು ತೆರೆವುಗೊಳಿಸುವ ಕಾರ್ಯಾಚರಣೆಗೆ ಸರ್ವೇ ತಾಂತ್ರಿಕ ಆಡಚಣೆ ಬರುವುದಿಲ್ಲ ಆದರೆ ಬಲಾಡ್ಯರ ನೂರಾರು ಎಕರೆ ಒತ್ತುವರಿ ತೆರೆವುಗೊಳಿಸಲು ಮುಂದಾದಾಗ ಮಾತ್ರ ತಾಂತ್ರಿಕ ಆಡಚಣೆ ದಾಖಲೆಗಳ ಕೊರತೆ ನೂರೊಂದು ಸಮಸ್ಯೆ ಕಣ್ಣಮುಂದೆ ಬಂದು ನಿಲ್ಲುತ್ತವೆ ಅಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಾದ್ಯಂತ ಸಾವಿರಾರು ಗೋಮಾಳ ಜಮೀನನ್ನು ಅರಣ್ಯಾಧಿಕಾರಿಗಳು ಮೈಸೂರು ಮಹಾರಾಜರ ಕಾಲದ ದಾಖಲಾತಿಗಳನ್ನು ಮುಂದಿಟ್ಟುಕೊÀಡು ಅರಣ್ಯ ಇಲಾಖೆಗೆ ಸೇರಿದೆ ಎಂದು ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಚಿಕ್ಕಪುಟ್ಟ ರೈತರ ಕೃಷಿ ಜಮೀನನ್ನು ಯಾವುದೇ ಕಾನೂನಿನ ಅಡೆತಡೆ ಇಡದೆ ವಶಕ್ಕೆ ಪಡೆಯುತ್ತಿರುವಾಗ ಕಂದಾಯ ಇಲಾಖೆಯಲ್ಲಿನ ದಾಖಲೆಗಳು ಎಲ್ಲಿ ಹೋದವು ಜಿಲ್ಲೆಯ ಗೋಮಾಳ ಜಮೀನಿನ ದಾಖಲೆಗಳು ಮೈಸೂರಿಗೆ ರಾತ್ರೋ ರಾತ್ರಿ ನಡೆದುಕೊಂಡು ಸೇರಿಕೊಂಡಿವೆಯೇ ಕಂದಾಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಜಂಟಿ ಸರ್ವೇ ಮಾಡಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ರಮೇಶ್ಕುಮಾರ್ರವರಿಂದ ಭೂಮಿ ಉಳಿಸಿ ಇಲ್ಲವೇ ರಾಜಿನಾಮೆ ಕೊಟ್ಟು ಮನೆಗೆ ಹೋಗಿ ರೈತರೇ ಕಾನೂನು ಕೈಗೆತ್ತಿಕೊಂಡು ಸರ್ಕಾರಿ ಅರಣ್ಯ ಭೂಮಿಯನ್ನು ಉಳಿಸುವ ಹೋರಾಟಕ್ಕೆ ಚಾಲನೆ ನೀಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ಅಧಿಕಾರಿಗಳು ತಾಂತ್ರಿಕ ಅಡಚಣೆಯಿಂದ ಸರ್ವೇ ಮಾಡಲು ವಿಳಂಭವಾಗಿದೆ ಶೀಘ್ರದಲ್ಲಿಯೇ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ತಾಲ್ಲೂಕಾಧ್ಯಕ್ಷ ರಹಳ್ಳಿ ಆಂಜಿನಪ್ಪ, ರಾಜೇಂದ್ರಗೌಡ ,ಶೇಕ್ಶಪಿವುಲ್ಲಾ, ಆಲವಾಟಿ ಶಿವ, ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ಆನಂದ್ರೆಡ್ಡಿ, ಗೀರೀಶ್, ಮಂಗಸAದ್ರ ತಿಮ್ಮಣ್ಣ ಮುಂತಾದವರಿದ್ದರು.