

ಶ್ರೀನಿವಾಸಪುರ : ಇಂದು ದೇಶದಲ್ಲಿ ನಾವೆಲ್ಲರೂ ನೆಮ್ಮದಿಯಾಗಿ ಇರಬೇಕಾದರೆ ಗಡಿಯಲ್ಲಿನ ನಮ್ಮ ಸೈನಿಕರು ನಮ್ಮನ್ನು ಹಗಲಿರಲು ಕಾಯುತ್ತಿದ್ದಾರೆ . ಕಳೆದ ತಿಂಗಳು ಏ.22 ರಂದು ಉಗ್ರರರು ಕಾಶ್ಮೀರದ ಪೆಹಲ್ಗಾಮ್ನಲ್ಲಿ ಕುಟುಂಬದ ಸದಸ್ಯರ ಎದುರೇ ಜಾತಿ ಕೇಳಿ ಕುಟುಂಬದ ಗಂಡಸರನ್ನು ಶೋಟ್ ಮಾಡಿರುವುದು ಖಂಡನೀಯ ಎಂದು ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಬಿಜೆಪಿ ಪಕ್ಷ ಹಾಗು ಸಂಘ ಸಂಸ್ಥೆಗಳಿಂದ ನಡೆದ ತಿರಂಗ ಯಾತ್ರೆ ಅಂಗವಾಗಿ ಮಾಜಿ ಸೈನಿಕರನ್ನು ಸನ್ಮಾನಿಸಿ ಮಾತನಾಡಿದರು.
ಯಾರು ಉಗ್ರಗಾಮಿಗಳ ಹಿಂದೆ ಇದ್ದಾರೆ, ಅವರಿಗೆ ಬೆಂಬಲ ನೀಡುತ್ತಿದ್ದಾರೆ ಅವುರುಗಳ ಸುಮ್ಮನೆ ಬಿಡುವುದಿಲ್ಲ ಉಗ್ರಗಾಮಿಗಳನ್ನು ಸದೆಬಡಿಯುವವರೆಗೂ ನಾನು ವಿಶ್ರಮಸುವುದಿಲ್ಲ ಎಂದು ಶಪಥವನ್ನು ನರೇಂದ್ರ ಮೋದಿರವರು ಹೇಳಿದರು . ಅದರಂತೆ ಅಪರೇಷನ್ ಸಿಂದೂರ್ ಹೆಸರಿನಲ್ಲಿ ನಮ್ಮ ಸೈನಿಕರು ಪಾಕಿಸ್ತಾನದ 9 ಉಗ್ರಶಿಬಿರಗಳನ್ನು ನೆಲಸಮಮಾಡಿ , ನೂರಾರು ಉಗ್ರಗಾಮಿಗಳನ್ನು ಸಂಹಾರ ಮಾಡಿದ್ದಾರೆ.
ನಿಮ್ಮ ಆತ್ಮಸ್ಥೈರ್ಯ ತುಂಬಲು ನಿಮ್ಮೋಂದಿಗೆ ನಾವು ಇದ್ದೇವೆ . ಭಾರತ ರಕ್ಷಣೆ ವಿಚಾರಕ್ಕೆ ಬಂದಾಗ ಯಾವುದೇ ಜಾತಿ, ಧರ್ಮ , ಪಂಗಡ ನಿಮ್ಮೊಂದಿಗೆ ನಾವು ಇದ್ದೇವೆ ಎಂದರು.
ಇದೇ ಸಮಯದಲ್ಲಿ ತಾಲೂಕಿನ ಮಾಜಿ ಸೈನಿಕರಾದ ಎನ್.ವಿ. ರಮೇಶ್ಕುಮಾರ್ , ರಾಜೇಶ್, ರೆಡ್ಡಪ್ಪ, ನವೀನ್ಕುಮಾರ್ ಸನ್ಮಾನಿಸಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಓಶಕ್ತಿ ಚಲಪತಿ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಪಿಎಸ್ಐ ಜಯರಾಮ್, ತಾಲೂಕು ಅಧ್ಯಕ್ಷ ರೋಣೂರು ಆರ್.ಎನ್.ಚಂದ್ರಶೇಖರ್, ಪುರಸಭಾ ಸದಸ್ಯ ಬಿ.ವಿ.ರೆಡ್ಡಿ, ಶಿಕ್ಷಕ ಕಲಾ ಶಂಕರ್ ಇದ್ದರು.