

ಶ್ರೀನಿವಾಸಪುರ : ಹನ್ನೊಂದನೆಯ ಶತಮಾನದ ಆದಿಕವಿ. ಪ್ರಥಮ ವಚನಕಾರ , ಬಸವಪೂರ್ವ ಯುಗದ ಶಿವಶರಣ, ಸಾಮಾಜಿಕ ನ್ಯಾಯದ ಆದಿ ಸಿದ್ದಾಂತಿ, ಹೆಣ್ಣು-ಗಂಡು ಮೇಲು-ಕೀಳು, ಜಾತಿ-ಪಂಥ ಆಚರಣೆಗಳ ಭೇದಗಳನ್ನು ಗುರುರ್ತಿಸಿ, ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧಿಕ್ಕರಿಸಿ , ಎಳೆಎಳೆಯಾಗಿ ಬಿಡಿಸಿ ತೋರಿಸಿದ ವಚನಕಾರ ಇಂತಹ ಮಾಹಾ ಪುರಷರು ಸಮಾಜದ ಉದ್ದಾರಕ್ಕಾಗಿ ಅನೇಕ ರೀತಿಯಾದ ವಚನಗಳ ಮೂಲಕ ತಿಳಿ ಹೇಳಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದು, ಎಲ್ಲರೂ ಸಹ ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ದೇವರ ದಾಸಿಮಯ್ಯ ಜಯಂತಿಯ ಅಂಗವಾಗಿ ಬಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. .
ಇದೇ ಕಾರ್ಯಕ್ರಮದಲ್ಲಿ ಸಮುದಾಯದ ಗಣ್ಯರಿಗೆ ಸನ್ಮಾನಿಸಲಾಯಿತು. ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಸಮುದಾಯದ ತಾಲೂಕು ಅಧ್ಯಕ್ಷ ಜೆ.ಎಸ್.ಮಣಿ ಮಾತನಾಡಿದರು ಇಒ ಎಸ್.ಶಿವಕುಮಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ, ಸಮುದಾಯದ ಮುಖಂಡರಾದ ಬಟ್ಟುವಾರಿಪಲ್ಲಿ ಬಿ.ಕೆ.ಉಪೇಂದ್ರ, ಲಕ್ಷ್ಮೀಪುರ ನಾಗೇಂದ್ರ, ಹರಿಕುಮಾರ್, ಎಸ್.ವಿ.ಶಂಕರಪ್ಪ, ರಾಮಮೂರ್ತಿ, ರಾಜಪ್ಪ, ಪಿ.ಎಸ್.ರಾಮಚಂದ್ರ, ಶಂಕರ್, ಆಂಜಪ್ಪ, ಕೆ.ಪಿ.ಕೃಷ್ಣಪ್ಪ, ಸುಹಾಸ್, ವಂಶಿ, ಗಣೇಶ್ ಇದ್ದರು.
