

ಶ್ರೀನಿವಾಸಪುರ : ತಾಲೂಕಿನ ಬೆಳೆಯುವ ಅವರೆ ಕಾಯಿ, ಮಾವಿನಹಣ್ಣು ರುಚಿಯು ರಾಜ್ಯದ ಜನತೆ ಮನ ಸೊತಿದ್ದು, ಬೆಂಗಳೂರು, ಚನೈ ಇತರೆ ಮಾರುಕಟ್ಟೆಗಳಿಗೆ ಹೆಚ್ಚಿನ ಅವರೆಕಾಯಿ ರಪ್ತು ಆಗುತ್ತದೆ, ಇದರ ಹಿನ್ನೆಲೆಯಲ್ಲಿ ತಾಲೂಕಿನ ರೈತರ ಮೂರು ರಿಂದ ನಾಲ್ಕು ತಿಂಗಳು ಹಗಲಿರುಳು ಕಷ್ಟ ಬಿದ್ದು, ಅವರೆಕಾಯಿಗಳು ಬೆಳೆಯುತ್ತಾರೆ ಇದರ ಹಿನ್ನೆಲೆಯಲ್ಲಿ ಅವರೆಕಾಯಿಯು ಪರಿಸರದ ಹವಾಮಾನ ರೀತ್ಯ ತುಂಬಾ ಸೊಗಡಿನಿಂದ ಕೂಡಿ ರುಚಿಕರವಾಗಿರುತ್ತದೆ ಎಂದು ಆರ್ಯ ವೈಶ್ಯ ಮಂಡಲಿ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆರ್ಯ ವೈಶ್ಯ ಮಹಿಳಾ ಮಂಡಲಿ ವತಿಯಿಂದ 2ನೇ ವರ್ಷದ ಅವರೇಕಾಯಿ ತಿಂಡಿಗಳ ಒಂದು ದಿನದ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಅದರಂತೆ ವಾಸವಿ ಕಲ್ಯಾಣ ಮಂಟಪದಲ್ಲಿ ಅವರೇಕಾಯಿ ತಿಂಡಿಗಳ ಮೇಳವನ್ನು ಆಯೋಜನೆ ಮಾಡಿದ್ದು, ಈ ಮೇಳದಲ್ಲಿ ವಿಧ ವಿಧವಾದ ರುಚಿಕರ ತಿಂಡಿಗಳನ್ನು ಮಾಡಿದ್ದು ಹೆಚ್ಚಿನ ಸಂಖ್ಯೆ ಗ್ರಾಹಕರು ಸೇರಿ ರುಚಿ ರುಚಿಯಾದ ತಿಂಡಿಗಳನ್ನು ಸವಿದರು. ಎಂದು ಹೇಳಿ ಮಹಿಳಾ ಮಂಡಲಿಯವರಿಗೆ ಶುಭಕೋರಿದರು.
ನಾನಾ ವಿಧವಾದ ಸುಚಿಯಾದ ರುಚಿ ರುಚಿಯಾದ ತಿಂಡಿಗಳನ್ನು ತಯಾರಿಸಿದ್ದರು. ದೀಪಾ ಆರ್ ಕುಲಕರ್ಣಿ ಮಾತನಾಡಿದರು. ಆರ್ಯ ವೈಶ್ಯ ಮಂಡಲಿ ಕಾರ್ಯದರ್ಶಿ ಕೆ.ವಿ.ಸೂರ್ಯನಾರಾಯಣಶೆಟ್ಟಿ, ಮಹಿಳಾ ಮಂಡಲಿ ಅಧ್ಯಕ್ಷೆ ಮಂಜುಳ ಶಿವಪ್ರಕಾಶ್, ಉಪಾಧ್ಯೆಕ್ಷೆ ಸಂದ್ಯಾ ನಾಗೇಂದ್ರ, ಹಾಗು ಆರ್ಯವೈಶ್ಯ ಮಂಡಲಿ ಸದಸ್ಯರು ಹಾಜರಿದ್ದರು.