

ಶ್ರೀನಿವಾಸಪುರ 1 : ಕಚೇರಿಯಲ್ಲಿ ಆಸನ ವ್ಯವಸ್ಥೆ ಇಲ್ಲ, ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿ, ಮುಂದಿನ ದಿನಗಳಲ್ಲಿ ಪ್ರತಿಯೊಂದು ಹಂತ ಹಂತವಾಗಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ರವಿ ಭರವಸೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಬುಧವಾರ ದೀಡಿರ್ ಬೇಟಿ ನೀಡಿ ಕಚೇರಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದರು.
ದಾಖಲೆಗಳು ಕೆಲವೊಮ್ಮೆ ಹರಿದುಹೋಗುತ್ತದೆ. ಕಳೆದುಹೋಗುವ ಸಂದರ್ಭವು ಇರಬಹುದು , ಮೂಲ ದಾಖಲೆಗಳು ನಾಪತ್ತೆಯಾಗುವುದು ಈ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ದಾಖಲೆಗಳನ್ನು ಡಿಜಟಲೀಕರಣ ಮೂಲಕ ದಾಖಲೆಗಳನ್ನು ಭದ್ರಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೇಸಿಗೆ ಕಾಲ ಬರುತ್ತಿದ್ದು, ಸಾರ್ವಜನಿಕರಿಗೆ ಕಚೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ ಸೂಚಿಸಿದರು. ಅಲ್ಲದೆ ತಾಲೂಕಿನ ಪ್ರತಿ ಗ್ರಾಮಕ್ಕೆ ಸಂಬಂದಿಸಿದಂತೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಕಚೇರಿಗೆ ಅಲೆದಾಡಿಸದೆ ಅತಿ ಶೀಘ್ರವಾಗಿ ಸಾರ್ವಜನಿಕರ ಕೆಲಸಗಳನ್ನು ಅತಿ ಶೀಘ್ರವಾಗಿ ಪರಿಹಾರ ಮಾಡಿಕೊಡಿ ಎಂದು ಸೂಚಿಸಿದರು. ಸಾರ್ವಜನಿಕರು ತಮ್ಮ ಕೆಲಸಕಾರ್ಯಗಳು ಸರಿಯಾಗಿ ವ್ಯವಹರಿಸುತ್ತಿಲ್ಲ ವೆಂದು ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕರ ಕಚೇರಿಗೆ ಅಲೆದಾಡಿಸದಂತೆ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.
ತಾಲೂಕಿನ ಒಂದು ವಾರದಲ್ಲಿ ಬಗರ್ಹುಕಂಗೆ ಸಂಬಂದಿಸಿದಂತೆ ಕೆಲಸವು ಪೂರ್ಣಗೊಳಿಸಲಾಗುವುದು. ಪೋಡಿ ಕೆಲಸವು ಜಿಲ್ಲೆಯಾದ್ಯಾಂತ ಮೂರು ತಿಂಗಳಲ್ಲಿ ಮುಗಿಸಿಕೊಡುವುದಾಗಿ ಮಾಹಿತಿ ನೀಡಿದರು. ತಾಲೂಕಿನ ಕೆಲ ಕೆರೆಗಳು ಒತ್ತುವರಿಯಾಗಿದ್ದು, ಒತ್ತುವರಿಯಾಗಿರುವ ಕೆರೆಗಳನ್ನು ಒತ್ತುವರಿ ತೆರವುಗೊಳಿಸಿ, ಕೆರೆಗಳಿಗೆ ಬೌಂಡರಿ ಫಿಕ್ಸ್ ಮಾಡಲಾಗುವುದು.
ಈ ಸಮಯದಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಉಪತಹಶೀಲ್ದಾರ್ ಕೆ.ಎಲ್.ಜಯರಾಮ್, ಶಿರಸ್ತೆದಾರ್ ಗೌತಮ್, ಎಡಿಎಲ್ಆರ್ ಎಸ್.ಎನ್.ರಾಮಕೃಷ್ಣಪ್ಪ,ಆರ್ಐ ಗಳಾದ ಮುನಿರೆಡ್ಡಿ, ಜರ್ನಾಧನ್, ವಿಎ ಹರಿ ಹಾಗು ಸಾರ್ವಜನಿಕರು ಇದ್ದರು.
