

ಶ್ರೀನಿವಾಸಪುರ : ತಾಲೂಕಿನ ಕೇತುಗಾನಹಳ್ಳಿ ಗ್ರಾಮದ ಬಳಿ ಮತ್ತೆ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ತಳ್ಳಾಟ, ತೊರಾಟಗಳ ನಡುವೆ ಸಂಘರ್ಷ ನಡೆಯಿತು. ಶನಿವಾರ ಬೆಳ್ಳಂಬೆಳಗ್ಗೆ ಏಕಾಏಕಿ ತೆರವು ಮಾಡಿದ್ದ ಪ್ರದೇಶದಲ್ಲಿ ಟ್ರಾಕ್ಟರ್ನಲ್ಲಿ ಉಳುಮೆ ಮಾಡಲು ಮುಂದಾಗಿದ ಸ್ಥಳೀಯ ರೈತರು. ಕೋರ್ಟ್ ಅನುಮತಿ ಪಡೆದು ಉಳುಮೆ ಮಾಡಲು ಮುಂದಾಗಿರುವುದಾಗಿ ರೈತರು ವಾದ. ಉಳಿಮೆ ಮಾಡಲು ಪ್ರಾರಂಭಿಸಿದ್ದ ರೈತರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು. ಮೂಕ ಪ್ರೇಕ್ಷಕರಂತಾಗಿರುವ ಅರಣ್ಯ ಸಿಬ್ಬಂದಿ. ನಾಲ್ಕೈದು ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿದ ಸ್ಥಳೀಯ ರೈತರು.
ಈ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಅರಣ್ಯ ಇಲಾಖೆ , ಪೋಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಡಿಎಫ್ಒ ಅಧಿಕಾರಿ ಸರೀನಾ ಬೇಟಿ ನೀಡಿ ರೈತರಿಗೆ ಇಲಾಖೆಯ ಆದೇಶಗಳ ಬಗ್ಗೆ ಮಾಹಿತಿ ನೀಡಿದರೂ ಸಹ ರೈತರು ಹೈಕೋರ್ಟ್ ಆದೇಶದಂತೆ ಉಳಿಮೆ ಮಾಡುತ್ತಿದ್ದು, ನೀವು ಕೋರ್ಟ್ ಆದೇಶವನ್ನು ದಿಕ್ಕರಿಸಿದಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಕಂಡು ಬಂತು.
ಇನ್ನು ಕೆಲ ರೈತರು ಚೈನ್ಲಿಂಕ್ನಂತೆ ಒಬ್ಬರಿಗೊಬ್ಬರು ಕೈ ಹಿಡಿದುಕೊಳ್ಳುವದರ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿಯು ಜಮೀನಿನ ಒಳಗೆ ಬಿಡುತ್ತಿರಲಿಲ್ಲ ದೃಶ್ಯವು ಕಂಡು ಬಂತು. ರೈತರನ್ನು ತಳ್ಳಿ ಜಮೀನಿನ ಒಳಗೆ ನುಗ್ಗಿಬಂದು ಟ್ಯಾಕ್ಟರ್ ಮೂಲಕ ಉಳಿಮೆ ಮಾಡುತ್ತಿದ್ದನ್ನು ಅಡ್ಡಪಡಿಸಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ ಕೋರ್ಟ್ ಆದೇಶವನ್ನು ಅಧಿಕಾರಿಗಳು ಆಗಲಿ, ರೈತರಾಗಲಿ ದಿಕ್ಕರಿಸುವಂತಿಲ್ಲ. ಕೋರ್ಟ್ ಆದೇಶದಂತೆ ಕೇತುಗಾನಹಳ್ಳಿ 11 ಜನ ರೈತರಿಗೆ ಬೇಸಾಯ ಮಾಡಿಕೊಳ್ಳಬಹುದು ಎಂದು ಅರಣ್ಯ ಇಲಾಖೆಗೂ ಆದೇಶ ನೀಡಲಾಗಿದೆ. ಕೋರ್ಟ್ ಆದೇಶವನ್ನು ಯಾರು ದಿಕ್ಕರಿಸದಂತೆ ಮನವಿ ಮಾಡಿದರು. ಕಾನೂನಿಗೆ ಗೌರವ ನೀಡುವಂತೆ ಮನವಿ ಮಾಡಿ, ನಾವು ಕೋರ್ಟ್ನಿಂದ ಆದೇಶ ಬಂದ ಮೇಲೆಯೇ ನಾವು ಜಾಗಕ್ಕೆ ಬಂದಿದ್ದೇವೆ ಅಷ್ಟೆ. ಕಾನೂನು ವಿರುದ್ಧವಾಗಿ ಯಾರು ಕೆಲಸ ಮಾಡದಂತೆ ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಸಂಜಯ್ರೆಡ್ಡಿ ಮಾತನಾಡಿ ಕೋರ್ಟ್ ಆದೇಶದಂತೆ ಕೆ.ಎಂ.ನಾಗರಾಜ್ ರವರಿಗೆ ಕೋರ್ಟ್ನಿಂದ ಉಳಿಮೆ ಮಾಡಿಕೊಳ್ಳಲು ಆದೇಶ ನೀಡಲಾಗಿದ್ದು, ಅರಣ್ಯ ಇಲಾಖೆಯು ಯಾವುದೇ ಕಾರಣಕ್ಕೂ ಕೆ.ಎಂ.ನಾಗರಾಜ್ ರವರಿಗೆ ತೊಂದರೆ ಕೊಡದಂತೆ ಮನವಿ ಮಾಡಿದರು.
ಕೊನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೋರ್ಟ್ ಮುಂದಿನ ಆದೇಶ ಬರುವವರೆಗೂ ನಾವಾಗಲೀ, ರೈತರಾಗಲಿ ಯಾವುದೇ ಕಾರಣಕ್ಕೂ ಜಮೀನುಗಳನ್ನು ಯಥಾ ಸ್ಥಿತಿ ಕಾಡಪಾಡಿಕೊಂಡುಬರಬೇಕೆಂದು ಬರಿಸಿ ಸಹಿಗಳನ್ನು ಮಾಡಿಕೊಂಡರು.
ಅಡಿಷನಲ್ ಎಎಸ್ಸ್ಪಿ ರವಿಶಂಕರ್, ಪ್ರೋಬಿಷನಲ್ ಐಪಿಎಸ್ ಎಸ್ಪಿ ಯಶ್ಕುಮಾರ್ಶರ್ಮ, ಡಿವೈಎಸ್ಪಿ ನಂದಕುಮಾರ್, ಪಿಎಸ್ಐ ಜಯರಾಮ್, ಅರಣ್ಯ ಇಲಾಖೆ ಅಧಿಕಾರಿ ಮಹೇಶ್, ಆರ್ಎಫ್ಒ ರವಿಕೀರ್ತಿ, ಮುಖಂಡರಾದ ಸೀತಾರಾಮ್ರೆಡ್ಡಿ, ಶಿವರಾಮ್ಶರ್ಮ , ನಾಗದೇನಹಳ್ಳಿ ಶ್ರೀನಿವಾಸ್, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಡಾ|| ವೆಂಕಟೇಶ್, ಕೇತಗಾನಹಳ್ಳಿ ರೈತರಾದ ನಾಗರಾಜ್, ರಾಧಕೃಷ್ಣ, ಪಿಆರ್.ಸೂರ್ಯನಾರಾಯಣ, ಪಿ.ಆರ್.. ನವೀನ್ಕುಮಾರ್ , ಸಾಕಪಲ್ಲಿ ರಘು ಇದ್ದರು.
