![](https://jananudi.com/wp-content/uploads/2025/02/Screenshot-946-3.png)
![](https://jananudi.com/wp-content/uploads/2025/02/11-srinivaspur-photo-.jpg)
ಶ್ರೀನಿವಾಸಪುರ 3 : ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಮಂಗಳವಾರ ಗ್ರಾಮ ಆಡಳಿತ ಅಧಿಕಾರಿಗಳು 2 ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಭೇಟಿ ನೀಡಿದರು.
ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಮಾತನಾಡಿ ಮುಷ್ಕರ ನಿರತರ ಬೇಡಿಕೆಗಳನ್ನು ಆಲಿಸಿ ಸರ್ಕಾರದ ಗಮನಕ್ಕೆ ತುರುವುದಾಗಿ ಭರವಸೆ ನೀಡುತ್ತಾ, ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯನಿರ್ವಹಿಸುವ ಗ್ರಾಮಗಳಲ್ಲಿ ಕಚೇರಿ ನಿರ್ಮಿಸಲು ಸ್ಥಳವನ್ನು ಗುರ್ತಿಸುವಂತೆ ಈಗಾಗಲೇ ಇಲಾಖೆಯಿಂದ ಸೂಚನೆ ನೀಡಲಾಗಿದೆ ಆದರೆ ಇದುವರೆಗೂ ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳವನ್ನು ಗುರ್ತಿಸಿಲ್ಲವೆಂದರು. ಮುಂದಿನ ದಿನಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯನಿರ್ವಹಿಸುವ ಗ್ರಾಮಗಳಲ್ಲಿ ಸ್ಥಳ ಗುರ್ತಿಸಿದರೆ ಇಲಾಖೆವತಿಯಿಂದ ಕಚೇರಿ ಕಟ್ಟಡವನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದರು. ಸರ್ಕಾರಿ ನೌಕರರ ಬೇಡಿಕೆಯನ್ನು ಆಲಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರದಾನ ಕಾರ್ಯದರ್ಶಿ ಆರ್.ಕಳಾಚಾರಿ, ಖಾಜಾಂಚಿ ಮುಲ್ಲಹಳ್ಳಿ ವೆಂಕಟೇಶ್, ಉಪಾಧ್ಯಕ್ಷ ಎಸ್.ಎಂ.ಮುನಿವೆಂಕಟಪ್ಪ, ಸಂಘನಾಕಾರ್ಯದರ್ಶಿಗಳಾದ ವೈ.ವಿ.ಶ್ರೀನಿವಾಸ್, ಕೃಷ್ಣಪ್ಪ, ಟಿ.ರಮೇಶ್, ನಿರ್ದೇಶಕರಾದ ಮುನಿರೆಡ್ಡಿ, ಮುನಿರಾಜು, ಆರ್ಐ ಗುರುರಾಜರಾವ್, ಗ್ರಾಮ ಆಡಳಿತ ಅಧಿಕಾರಿ ಅಧ್ಯಕ್ಷ ಎಂ.ಎನ್.ಶಂಕರ್, ಉಪಾಧ್ಯಕ್ಷ ಎನ್. ಮುರಳಿ, ಕಾರ್ಯದರ್ಶಿ ಹರೀಶ್ ಉಪಸ್ಥಿತಿರಿದ್ದರು.