

ಶ್ರೀನಿವಾಸಪುರ : ವಸತಿ ನಿಲಯದ ಒಳಗೆ ಹೋದರೆ ಒಳಗೆ ಸ್ವಚ್ಚತೆ ಇಲ್ಲದೆ ಕಸವು ತುಂಬಿ ತುಳುಕುತ್ತಿದ್ದುನ್ನ ಕಂಡು ಬೇಸರ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ವಸತಿನಿಲಯವು ಸಮಸ್ಯೆಗಳ ಆಗರವಾಗಿದೆ ಎಂದು ಅಧಿಕಾರಿಗಳ ವಿರುದ್ದ ಕರ್ನಾಟಕ ರಾಜ್ಯ ಉಪಲೋಕಾಯುಕ್ತ ವೀರಪ್ಪ ಕಿಡಿಕಾರಿದರು.
ಪಟ್ಟಣದ ಪದವಿ ( ಡಿಗ್ರಿ) ಕಾಲೇಜಿಗೆ ಭಾನುವಾರ ಬೆಳಗ್ಗೆ ಅನಿರೀಕ್ಷಿತ ಬೇಟಿ ನೀಡಿ ಮಾತನಾಡಿದರು.
ಪದವಿ (ಡಿಗ್ರಿ) ಕಾಲೇಜಿಗೆ ಬೇಟಿ ನೀಡಿದ ಸಮಯದಲ್ಲಿ ವಸತಿ ನಿಲಯವು ಧನಗಳ, ಹಂದಿಗಳ ದೊಡ್ಡಿಯಂತಿದೆ ಎಂದು ಖಾರವಾಗಿ ನುಡಿದು, ರಾಜ್ಯದಲ್ಲಿಯೇ ಈ ವಸತಿ ನಿಲಯವು ಅತೀ ಖಂಡನೀಯವಾಗಿದೆ ಇದೊಂದು ಅವವ್ಯಸ್ಥೆ ಗೂಡಾಗಿದೆ ವಸತಿ ನಿಲಯಕ್ಕೆ ಗೇಟು ಇದ್ದು ಇಲ್ಲದ ರೀತಿಯಲ್ಲಿ ಇದಿದ್ದನ್ನು ಕಂಡು ವಾರ್ಡನ್ ಹಾಗು ಸಮಾಜ ಕಲ್ಯಾಣ ಇಲಾಖಾಧಿಕಾರಿಗಳ ವಿರುದ್ದ ಕಿಡಿಕಾರಿದರು.
ವಿದ್ಯಾರ್ಥಿಗಳೊಂದಿಗೆ ಮಾಹಿತಿ ಪಡೆದ ಉಪಲೋಕಾಯುಕ್ತರು ಇಲ್ಲಿ ವಿದ್ಯಾರ್ಥಿಗಳಿಗೆ ಶುದ್ದವಾದ ಕುಡಿಯುವ ನೀರು, ಶುದ್ದವಾದ ಆಹಾರ ಪದಾರ್ಥಗಳು ಇಲ್ಲ ಎಂದು ತಿಳಿಸುತ್ತಾ, ಕರೆಂಟು ಹೋದ ಸಮಯದಲ್ಲಿ ಪರ್ಯಾಯವಾಗಿ ಸುಗುಮವಾಗಿ ವಿದ್ಯುತ್ ಸಂರ್ಪಕವಿಲ್ಲ.
ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನೀಡುವ ಅನುದಾನಗಳು ಅಧಿಕಾರಿಗಳ ಜೋಬು ಸೇರುತ್ತಿದ್ದೆ ಎಂದು ಕಿಡಿಕಾರುತ್ತಾ, ವಸತಿ ನಿಲಯದಲ್ಲಿ ಹಾಜರಾತಿ ಪುಸ್ತಕವಿಲ್ಲದ, ಸರಿಯಾದ ಕಾಂಪೌಡ್ ಇಲ್ಲದೆ ಇರುವುದನ್ನು ಗಮನಿಸಿ ವಸತಿ ನಿಲಯಕ್ಕೆ ಯಾವುದೇ ರೀತಿಯಾದ ಮೂಲ ಭೂತ ಸೌಲಭ್ಯಗಳ ಸಮಂಜಸವಾಗಿಲ್ಲದನ್ನು ಕಂಡು ಅಧಿಕಾರಿಗಳ ವಿರುದ್ದ ಸಮೋಟ ಕೇಸ್ ಹಾಕುತ್ತೇನೆ ಎಂದು ಎಚ್ಚರಿಸಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನ ದೂರವಾಣಿ ಮೂಲಕ ಮಾತನಾಡಿ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಜೇಶ್ ಉಪ ಲೋಕಾಯುಕ್ತರವರ ಸ್ವಗ್ರಾಮವಾದ ತಾಲೂಕಿನ ನಾಗೇದನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಸಂರ್ಪಕಿಸಿ ಲೋಕಾಯುಕ್ತರ ಸೂಚನೆಗಳನ್ನು ಆಲಿಸಿ ಒಂದು ವಾರ ಕಾಲಾವಕಾಶ ನೀಡುಂತೆ ಮನವಿ ಮಾಡಿ ಒಂದು ವಾರದೊಳಗೆ ತಮ್ಮ ಸೂಚನೆಯಂತೆ ಸರಿಪಡಿಸುವುದಾಗಿ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಜೇಶ್ ತಿಳಿಸಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆ :
ಕಳೆದ ಎರಡು ವರ್ಷಗಳ ಹಿಂದೆ ಆಸ್ಪತ್ರೆ ಗೆ ಬೇಟಿ ನೀಡಿದಾಗ ಸಮಯದಲ್ಲಿ ಆಸ್ಪತ್ರೆಯು ಉತ್ತಮ ರೀತಿಯಲ್ಲಿ ಕಂಡುಬಂದಿತ್ತು, ಆದರೆ ಇಂದು ಒಂದು ರೀತಿಯಲ್ಲಿ ಅವವ್ಯಸ್ಥೆಗಳಿಂದ ಕೂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಆಸ್ಪತ್ರೆಗೆ ಬೇಟಿ ನೀಡಿದಾಗ ರಾಜ್ಯದಲ್ಲೇ ಆಸ್ಪತ್ರೆಯು ಉತ್ತವಾಗಿ ರೀತಿಯಲ್ಲಿ ಕಂಡುಬಂದಿತ್ತು, ಈ ಹಿಂದಿನ ರೀತಿಯಲ್ಲಿ ಆಸ್ಪತ್ರೆಯು ಸಿದ್ದವಾಗಿರಬೇಕು ಎಂದು ವೈದ್ಯರಿಗೆ ಸೂಚಿಸಿದರು.
ಕಳೆದ ವಾರ ಹಿಂದೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಸಮಯಲ್ಲಿ ಅವಧಿ ಮುಕ್ತಾವಾಗಿರುವ ಔಷಧಿಗಳು ಇದ್ದುನ್ನು ಕಂಡು ಅಲ್ಲಿನ ಸಿಬ್ಬಂದಿಯ ತರಾಟೆಗೆ ತೆಗದುಕೊಂಡೆ ಎನ್ನುತ್ತಾ, ಇಲ್ಲಿಯ ಸಿಬ್ಬಂದಿಗಳು ಅವಧಿ ಮುಕ್ತಾಯವಾದ ಔಷಧಿಗಳನ್ನು ರೋಗಿಗಳಿಗೆ ಕೊಡದಂತೆ ಎಚ್ಚರವಹಿಸಿ. ರೋಗಿಗಳು ಆಸ್ಪತ್ರೆಗೆ ಬರುವುದು ತಮ್ಮ ರೋಗವನ್ನು ಪರಿಹರಿಸಿ ಕೊಳ್ಳಲು ಅವರನ್ನು ಪ್ರೀತಿಯಿಂದ ಮಾತನಾಡಿ ಅವರಿಗೆ ಚಿಕಿತ್ಸೆ ಕೊಡವಂತೆ ಸಲಹೆ ನೀಡಿದರು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ :
ತಾಲೂಕಿನ ಚಲ್ದಿಗಾನಹಳ್ಳಿ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ, ಈಗಿರುವ ಪ್ರತಿ ವಿದ್ಯಾರ್ಥಿ ಹಾಗು ಶಿಕ್ಷಕರು ಒಂದು ಗಿಡವನ್ನು ನೆಟ್ಟು ಪೋಷಿಸುವ ವ್ಯವಸ್ಥೆಯನ್ನು ಮಾಡುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳು ವಸತಿನಿಯಲಕ್ಕೆ ರಸ್ತೆಯ ಬೇಡಿಕೆ ಇಟ್ಟಾಗ ಸ್ಥಳದಲ್ಲಿಯೇ ಇದ್ದ ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್ ರವರಿಗೆ ವಸತಿ ನಿಲಯಕ್ಕೆ ರಸ್ತೆಯನ್ನು ಹಾಕಿಸಿಕೊಂಡುವAತೆ ತಿಳಿಸಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಪದವಿಪೂರ್ವ ಕಾಲೇಜು ವಸತಿ ನಿಲಯ ಅನಿರೀಕ್ಷಿತ ಬೇಟಿ ನೀಡಿ ವಸತಿ ನಿಲಯ ವಾರ್ಡ್ನ್ ರವರಿಗೆ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳೆಂದು ಆರೈಕೆ ಮಾಡಿ ಚೆನ್ನಾಗಿ ಓದಲು ಪ್ರೇರಿಪಿಸಿ , ಕೊರತೆ ಇರುವ ಮೂಲ ಸೌಲಭ್ಯಗಳ ಹಾಗು ಇತರೆ ಕಾರ್ಯಗಳ ಬಗ್ಗೆ ಸೂಚನೆಗಳನ್ನು ಹಾಗು ಸಲಹೆ ನೀಡಿದರು.
ದೂರವಾಣಿ ಮೂಲಕ ತಹಶೀಲ್ದಾರ್ ಜಿ.ಎನ್.ಸುದೀಂದ್ರ ರವರನ್ನ ಮಾತನಾಡಿ ವಸತಿನಿಲಯಗಳಿಗೆ ಬೇಟಿ ನೀಡುವಂತೆ ಸೂಚಿಸಿದರು. ಜಿಲ್ಲಾ ಲೋಕಾಯುಕ್ತ ಎಸ್ಪಿ ದನಂಜಯ್, ಡಿವೈಎಸ್ಪಿ ಸೂರ್ಯನಾರಾಯಣ, ಲೋಕಾಯುಕ್ತ ಪಿ.ಐ ಆಂಜನಪ್ಪ, ಪಿಎಸ್ಐ ಜಯರಾಮ್, ಲೋಕಾಯುಕ್ತ ಸಿಬ್ಬಂದಿಗಳಾದ ರಾಜಗೋಪಾಲ್, ಏಜಾಜ್ಪಾಷ, ಶ್ರೀನಿವಾಸ್, ರಮೇಶ್ , ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯೆ ಗೌಸಿಯಾ ಬಾನು, ಸಿಬ್ಬಂದಿ ಉಷಾ, ಮಹಮ್ಮದ್ ಅಲಿ,. ವಸತಿ ನಿಲಯಗಳ ಮೇಲ್ವಿಚಾರಕರಾದ ಚೆನ್ನಪ್ಪ ದತ್ತಪ್ಪ, ವೀರೇಶ್ ಸುಬೇದಾರ್ ಹಾಗೂ ಸಿಬ್ಬಂದಿ ಉಪಸ್ಥಿತರದ್ದರು.






