ಶ್ರೀನಿವಾಸಪುರ : ವಾಲ್ಮೀಕಿ ಮಹರ್ಷಿಗಳು ಮಹಾನ್ ಪುರುಷರು ಅವರನ್ನ ಕೇವಲ ಒಂದು ಜಾತಿ ಸೀಮಿತ ಮಾಡಬಾರದು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು.
ಪಟ್ಟಣದ ನೌಕರರ ಭವನದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಪೂರ್ವ ಸಭೆಯಲ್ಲಿ ಮಾತನಾಡಿದರು.
ಎಲ್ಲಾ ಸಮುದಾಯಗಳಿಗೂ ಅವರ ಜೀವನವು ಆದರ್ಶ ಪ್ರಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಸಮುದಾಯಗಳು ಸಹ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗುಂಡು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು. ಯುವ ಪಿಳೀಗೆಯು ಅವರ ಆದರ್ಶವನ್ನ ತಮ್ಮ ಜೀವಕ್ಕೆ ಅಳವಡಿಸಿಕೊಳ್ಳಬೇಕು ಎಂದರು.
ಸಮುದಾಯದ ಮುಖಂಡರ ಪ್ರಶ್ನೆಗೆ ಉತ್ತರಿಸಿ ಪುರಸಭೆ ಮುಖ್ಯಾಧಿಕಾರಿ, ಇಒ ರವರು ಸಂತೆ ಮೈದಾನದಲ್ಲಿ ಸ್ಥಳ ಗುರ್ತಿಸಿ ಕೊಡುತ್ತಾರೆ ಆ ಸ್ಥಳದಲ್ಲಿ ವಾಲ್ಮೀಕಿ ಪುತ್ಥಳಿಯನ್ನ ಸ್ಥಾಪಿಸಿ, ಆ ದಿನ ಪುತ್ಥಳಿಗೆ ಹೂಮಾಲೆ ಹಾಕಿ ನಂತರ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯೊಂದಿಗೆ ತಹಶೀಲ್ದಾರ್ ಕಚೇರಿಯ ಆವಣರದಲ್ಲಿ ನಡೆಯುವ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಚರಿಸುವುದಾಗಿ ಮಾಹಿತಿ ನೀಡಿದರು . ಸಮುದಾಯದ ಮುಖಂಡರು ಅಧಿಕಾರಿಗಳಗೆ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಮಾಡುವಂತೆ ಮನವಿ ಮಾಡಿದರು.
ಇಒ ಎ.ಎನ್.ರವಿ ಮಾತನಾಡಿ ಇಲಾಖೆಯಿಂದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಸ್ಥಳಿಯ ಗ್ರಾಮಪಂಚಾಯಿತಿಗಳ ಅಧ್ಯಕ್ಷರ, ಉಪಾಧ್ಯಕ್ಷರ ವಿವೇಚನೆಗೆ ತಕ್ಕಂತೆ ವ್ಯವಸ್ಥೆ ಮಾಡಬಹುದು ಎಂದರು. ಸಾಧ್ಯವಾದಷ್ಟು ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳಿಂದಲೂ ಬೆಳ್ಳಿ ರಥದಲ್ಲಿ ಬರುವಂತೆ ಸೂಚಿಸುತ್ತೇನೆ ಎಂದರು
ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಎನ್.ರಾಜೇಶ್ ಮಾತನಾಡಿ ಸಮುದಾಯದ ಮುಖಂಡರ ಪ್ರಶ್ನೆಗೆ ಉತ್ತರಿಸಿ ಎಸ್ಎಸ್ಎಲ್ಸಿ, ಪಿಯುಸಿ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿ ಪ್ರತಿಭಾ ಪುರಸ್ಕಾರ, ಸಮುದಾಯದ ಸಮಾಜ ಸೇವಕರಿಗೆ ಸನ್ಮಾನ , ಪೆಂಡಾಲ್, ಆಸನ ವ್ಯವಸ್ಥೆ, ಕರಪತ್ರ, ಕಲಾತಂಡಗಳು, ಊಟದ ವ್ಯವಸ್ಥೆ ಇಲಾಖೆಯಿಂದ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಪಿಡಬ್ಲ್ಯೂಡಿ ಅಬಿಯಂತರ ಎನ್. ನಾರಾಯಣಸ್ವಾಮಿ, ಸಬ್ರಿಜಿಸ್ಟರ್ ರಾಮಕೃಷ್ಣಪ್ಪ, ಸಿಡಿಪಿಒ ಅಧಿಕಾರಿ ನವೀನ್, ತೋಟಗಾರಿಕೆ ಸಹಾಯಕ ನಿರ್ದೇಶಕ ಬೈರೆಡ್ಡಿ, ಬೆಸ್ಕಾಂ ಎಇಇ ಪಿ.ಪಿ.ರವೀಂದ್ರಬಾಬು, ಮುಖಂಡರಾದ ರಾಮಮೋಹನ, ಗಾಯತ್ರಿ ಮುತ್ತಪ್ಪ, ಸುಣ್ಣಕಲ್ಲು ಮಂಜುನಾಥ್, ರಾಮಚಂದ್ರಪ್ಪ, ಹರೀಶ್ನಾಯಕ್, ಕೃಷ್ಣಪ್ಪ, ಆಂಜಿ, ಶ್ರೀನಿವಾಸ್, ರಾಮಾಂಜಮ್ಮ, ಈರಪ್ಪ, ವೆಂಕಟೇಶ್ ಇದ್ದರು.