ಶ್ರೀನಿವಾಸಪುರ : ತಾಲೂಕು ಕೇಂದ್ರಕ್ಕೆ ವಿವಿಧ ಕಛೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಂತಹ ಸಾರ್ವಜನಿಕರ ಸ್ಥಿತಿ ಹೇಳತೀರದು. ಬಹುತೇಕ ಜ್ಯೂಸ್ ಅಂಗಡಿಗಳ ಬಳಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದತಂಹ ಸಾರ್ವಜನಿಕರು ತಮ್ಮ ದಾಹವನ್ನು ತೀರಿಸಿಕೊಳ್ಳಲು ಹೆಚ್ಚು ಜ್ಯೂಸ್ ಅಂಗೆಡಿಗಳತ್ತಾ ಮೊರೆ ಹೋಗುತ್ತಿದ್ದು ಕಂಡು ಬಂತು.
ಪ್ರತಿ ವರ್ಷಕ್ಕಿಂತ ಈ ವರ್ಷ ವಾತಾವರಣದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಸೂರ್ಯನ ತಾಪಕ್ಕೆ ಬೆವರಿ ಸುಸ್ತಾದ ಜನರು ತಂಪು ಪಾನೀಯಕ್ಕೆ ಮೊರೆ ಹೋಗುತ್ತಿದ್ದಾರೆ. ಎಳೆನೀರು, ಮಜ್ಜಿಗೆ, ಐಸ್ ಕ್ರೀಮ್, ಕಿತ್ತಲೆಹಣ್ಣಿನ ಹಾಗೂ ಇತರ ಹಣ್ಣುಗಳ ಜ್ಯೂಸ್ಗಳಿಗೆ ಮೊರೆ ಹೋಗಿ ಹೇಹದ ದಣಿವು ನಿವಾರಿಸಿಕೊಳ್ಳುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿನ ಕೆಲ ಕೆರೆ ಕಟ್ಟೆಗಳಲ್ಲಿ ಅಲ್ಪ-ಸ್ವಲ್ಪ ನೀರು ಇದ್ದು ಆ ನೀರಿನಲ್ಲಿ ಮೀನುಗಳನ್ನು ಬಿಟ್ಟು ಅವುಗಳನ್ನು ಗ್ರಾಮಕ್ಕೆ ಸಂಬಂದಿಸಿದ ಮುಖಂಡರು ಹರಾಜು ಮೂಲಕ ಮೀನುಗಳನ್ನು ಹಿಡಿಯಲು ಅವಕಾಶ ಮಾಡಿಕೊಡುತ್ತಾರೆ ಇದರಿಂದ ಹರಾಜಿನ ಗುತ್ತಿಗೆದಾರರು ಕೆರೆಗಳಲ್ಲಿ ಇರುವ ಅಲ್ಪ-ಸ್ವಲ್ಪ ನೀರನ್ನು ಖಾಲಿ ಮಾಡುತ್ತಾರೆ ಇದರಿಂದ ಜಾನುವಾರುಗಳಿಗೆ ಇತರೆ ಮೂಕ ಪ್ರಾಣಿಗಳಿಗೆ ನೀರು ಇಲ್ಲದಂತೆ ಆಗುತ್ತದೆ. ಕೆರೆ ಕಟ್ಟೆಗಳಲ್ಲಿ ಇರುವ ಅಲ್ಪ-ಸ್ವಲ್ಪ ನೀರು ಮೂಕ ಪ್ರಾಣಿಗಳ ಪರಿಸ್ಥಿತಿ ಕೇಳುವವರೇ ಇಲ್ಲದಂತಾಗುತ್ತಿದೆ. ಇದೇ ರೀತಿ ಮುಂದುವರೆದರೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ಸಾರ್ವಜನಿಕರಲ್ಲಿ ಅಂತಕವಾಗುತ್ತಿದೆ.
ಇನ್ನೂ ಬಿಸಿಲಿನ ಪ್ರಖರತೆ ಹೆಚ್ಚಾದಂತೆ ವಿದ್ಯುತ್ ಸರಬರಾಜಿನಲ್ಲಿ ಕೂಡ ವ್ಯತ್ಯಯಾಗುತ್ತದೆ. ಈ ವ್ಯತ್ಯಯದಿಂದ ಜನರಿಗೆ ತೊಂದರೆ ದಾಯಕವಾಗಿ ಪರಿಣಮಿಸಬಹುದು. ಒಟ್ಟಿನಲ್ಲಿ ಬಿಲಿಸಿಲಿನ ಪ್ರಖರತೆಗೆ ಜನರು ಹೈರಾಣವಾಗುತ್ತಿರುವದಂತು ಸತ್ಯ.
ಶ್ರೀನಿವಾಸಪುರ ಪಟ್ಟಣದಲ್ಲಿ ನಮಗೆ ಸೇರಿದ ನಾಲ್ಕು ಕಿತ್ತಲೆಹಣ್ಣಿನ ಜ್ಯೂಸ್ ಅಂಗಡಿಗಳು ಇದೆ. ನಾವು ಕಿತ್ತಲೆಹಣ್ಣುಗಳನ್ನು ಬೆಂಗಳೂರಿನಿಂದ ತರಿಸಿಕೊಳ್ಳುತ್ತೇವೆ. ದಿನಕ್ಕೆ ಸುಮಾರು ಒಂದು ಸಾವಿರ ವ್ಯಾಪಾರವಾಗುತ್ತದೆ. ಜನರು ಕಡಿಮೆ ಬರುತ್ತಿದ್ದು ವ್ಯಾಪಾರ ಇನ್ನು ಹೆಚ್ಚಿನ ವ್ಯಾಪಾರ ಆಗಬಹುದೆಂಬ ಆಶಯದಲ್ಲಿ ಇದ್ದೇವೆ ಎಂದು ಉತ್ತರ ಪ್ರದೇಶದ ಮೂಲದವರಾದ ಶ್ರೀನಿವಾಸಪುರದಲ್ಲಿ ಜ್ಯೂಸ್ ಅಂಗಡಿ ವ್ಯಾಪಾರಿ. ರೋಹಿತ್ ಎಂಬವರು ಹೇಳುತ್ತಾರೆ.