ಶ್ರೀನಿವಾಸಪುರ : ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಬುಧವಾರ ತ್ಯಾಗರಾಜ ಬಡವಾಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬೈರೇಗೌಡರವರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿ ಮಾತನಾಡಿದರು.
ಪ್ರಸ್ತುತ ಈ ಶಾಲೆಯಲ್ಲಿ ಎಲ್ ಕೆ ಜಿ ಯಿಂದ 8 ನೇತರಗತಿಯವರಿಗೂ 520 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ಶಾಲೆಗೆ ಮುಖ್ಯ ಶಿಕ್ಷಕ ಎಂ.ಬೈರೇಗೌಡರು ಹಗಲಿರಳು ಶ್ರಮವಹಿಸಿ ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ. ಈ ಶಾಲೆಗೆ ರಾಜ್ಯ ಮಟ್ಟದ ಸ್ವಾಭಿಮಾನಿ ಸಾರ್ವಜನಿಕ ಶಾಲಾ ಪ್ರಶಸ್ತಿ ಹಾಗೂ ಸ್ವಚ್ಛ ವಿದ್ಯಾಲಯ ಪುರಸ್ಕಾರ ಮುಂತಾದ ಪ್ರಶಸ್ತಿಗಳು ಲಭಿಸಿದ್ದು, ಕೆಲವು ರಾಜಕೀಯ . ಷಡ್ಯಂತರಗಳಿಂದ ಮನನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಯಿಂದ ವರ್ಗಾವಣೆಯಾಗಲಿದ್ದಾರೆ. ತಾವು ಈ ಶಿಕ್ಷಕರ ವರ್ಗಾವಣೆಯನ್ನು ತಡೆದು ನಮಗೆ ನ್ಯಾಯವನ್ನು ಒದಗಿಸಿಕೊಡಬೇಕಾಗಿ ಶಾಲೆಯ ಪೆÇೀಷಕರು ಎಸ್ಡಿಎಂಸಿ ಅಧ್ಯಕ್ಷ ಸದಸ್ಯರು ಹಾಗು ವಿದ್ಯಾರ್ಥಿಗಳ ಪೋಷಕರು ಆಗ್ರಹ ಮಾಡುತ್ತಿದ್ದೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಸಿ.ಮುನಿಲಕ್ಷ್ಮಯ್ಯ ಪ್ರತಿಭಟನಕಾರರ ಮಾತುಗಳನ್ನು ಆಲಿಸಿ ಮಾತನಾಡಿ ನಾವು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದು, ನಾನು ಹಾಗು ಇಲ್ಲಿ ಸೇರಿರುವ ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿಯೇ ಓದಿ ಅಧಿಕಾರಿಯಾಗಿರುವುದು ನಮಗೂ ಸರ್ಕಾರಿ ಶಾಲೆಗಳೆಂದರೆ ಹಾಗು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಂದರೆ ವಿಶೇಷವಾದ ಅಭಿಮಾನ. ನಾನು ಕಳೆದ 5 ತಿಂಗಳಿನಿಂದ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.
ಆದರೆ ಈ ಒಂದು ಶಿಕ್ಷಕ ವರ್ಗಾವಣೆ ವಿಚಾರದಲ್ಲಿ ನಾನು ಮತ್ತು ಡಿಡಿಪಿಐ ಅಧಿಕಾರಿ ಹಂತದಲ್ಲಿ ವರ್ಗಾವಣೆ ರದ್ದತಿ ಮಾಡುವುದಕ್ಕೆ ಆಗುವುದಿಲ್ಲ. ಸರ್ಕಾರದ ಹಂತದಲ್ಲಿ ವರ್ಗಾವಣೆ ರದ್ದತಿ ಮಾಡಬೇಕಾಗಿದ್ದು, ತಾವುಗಳು ಸರ್ಕಾರಿ ಹಂತದಲ್ಲಿ ಪ್ರಯತ್ನ ಮಾಡುವಂತೆ ತಿಳಿಸಿ, ಸರ್ಕಾರದ ಆದೇಶದಂತೆ ನೀವು ಶಿಕ್ಷಕನನ್ನು ಅದೇ ಶಾಲೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಇಲಾಖೆಯ ನಿಯಮಾನುಸಾರ ನಾವು ಕೆಲಸ ಮಾಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಶಾಲೆಗೆ ಶಿಕ್ಷಕರ ಕೊರತೆಯನ್ನ ನೀಗಿಸುವ ಸಲುವಾಗಿ ಮೂವರು ಶಿಕ್ಷಕರನ್ನ ಶಾಲೆಗೆ ನಿಯೋಜನೆ ಮಾಡಲಾಗಿದೆ ಎಂದರು.
ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಪೋಷಕರ ಬಳಿ ಮನವಿ ಪತ್ರವನ್ನು ಸ್ವೀಕರಿಸಿ ಮನವಿಯನ್ನು ಹಿರಿಯ ಇಲಾಖಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಪಿಎಸ್ಐ ಜಯರಾಮ್, ಆರ್ಆರ್ಸಿ ಶಿರಸ್ತೆದಾರ್ ವಿಶ್ವನಾಥ್, ಎಸ್ಡಿಎಂಸಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಪೋಷಕರಾದ ನಾಗರಾಜ್, ನರೇಶ್, ಮಂಜುನಾಥ್, ರಮೇಶ್, ಸ್ಥಳೀಯರಾದ ಜಿ.ಆರ್.ಶ್ರೀನಿವಾಸ್, ರಾಮಾಂಜಿ, ಸುನಿಲ್, ಸುಬ್ರಮಣಿ, ಆನಂದ್ ಇದ್ದರು.