ಶ್ರೀನಿವಾಸಪುರ : ಹಲವು ವರ್ಷಗಳ ಹಿಂದೆ ಸಾಗುವಳಿ ಚೀಟಿಗಳನ್ನು ಪಡೆದು ರೈತರು ಭೂಮಿಯಲ್ಲಿ ಕೊಳವೆ ಬಾವಿಗಳನ್ನು ಹಾಕಿ ಸುಮಾರು 30 ರಿಂದ 40 ವರ್ಷಗಳಿಂದ ವ್ಯವಸಾಯ ಮಾಡಿಕೊಳ್ಳುತ್ತಿದ್ದ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು 2023 ರಲ್ಲಿ ಈ ಭೂಮಿ ಅರಣ್ಯ ಇಲಾಖೆಗೆ ಸಂಬಂದಿಸಿದೆಂದು ಸಂಪೂರ್ಣವಾಗಿ ಮಾವಿನ ಮರಗಳು ಕ್ಯಾಪ್ಸಿಕಮ್ ಕೋಸು ಸೇರಿ ಹಲವು ಬೆಳೆಗಳನ್ನು ಸಹಾ ಸಂಪೂರ್ಣವಾಗಿ ಮಣ್ಣು ಪಾಳು ಮಾಡಲಾಯಿತು . ಒತ್ತುವರಿ ತೆರವುಗೊಳಿಸುವಂತಹ ವೇಳೆ ಜೆಸಿಬಿ ಗಳ ಮೇಲೆ ಕೆಲ ರೈತರು ಕಲ್ಲು ತೂರಾಟವನ್ನು ಸಹ ಮಾಡಿದರು
ಹಲವು ರೈತರ ಮೇಲೆ ಕೇಸುಗಳನ್ನು ಹಾಕಿ ಜೈಲಿಗೆ ಕಳಿಸುವಂತ ಕೆಲಸವನ್ನು ಸಹ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದರು ಸಂದರ್ಭದಲ್ಲಿ ಬಹಳಷ್ಟು ರೈತರು ನ್ಯಾಯಾಲಯದ ಮೊರೆ ಹೋಗಿ ಕಂದಾಯ ಇಲಾಖೆಯಿಂದ ಸಾಗುವಳಿ ಚೀಟಿಗಳನ್ನು ನೀಡಿರುವ ಜಮೀನಿನಲ್ಲಿ ಮಾತ್ರ ನಾವು ಬೆಳೆ ಬೆಳೆಯುತ್ತಿದ್ದೇವೆ ಏಕಾಏಕಿ ಬಂದು ಸುಮಾರು 30 ರಿಂದ 40 ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ್ದ ಮಾವಿನ ಮರಗಳನ್ನು ಹಾಗೂ ಬಹಳಷ್ಟು ಬೆಳೆಗಳನ್ನು ಮಣ್ಣು ಪಾಲು ಮಾಡಿದ್ದೀರಿ ಎಂದು ನ್ಯಾಯಾಲಯದ ಮೊರೆ ಹೋದಂತಹ ಸಂದರ್ಭದಲ್ಲಿ ಹಾಗೂ ಕೋಲಾರ ಸಂಸದ ರಾಗಿದ್ದ ಮುನಿಸ್ವಾಮಿ ರವರು ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ಕೂತಿದ್ದ ವೇಳೆ ಕರ್ನಾಟಕ ಸರ್ಕಾರದ ಸಚಿವರಾದ ಈಶ್ವರ ಖಂಡ್ರೆ ಜಂಟಿ ಸರ್ವೆ ಮಾಡುವು ತನಕ ಯಾವುದೇ ಕೆಲಸವನ್ನು ಮಾಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು
ನ್ಯಾಯಾಲಯದ ಆದೇಶ ಹಾಗೂ ಸಚಿವರ ಮಾತನ್ನು ಲೆಕ್ಕಿಸದೆ ಪುನಃ ಏಪ್ರಿಲ್ 6 ಶನಿವಾರದಂದು ಶ್ರೀನಿವಾಸಪುರ ತಾಲೂಕಿನ ದಳಸನೂರು ಗ್ರಾಮದ ಬಳಿ ತೆರವುಗೊಳಿಸಿದಂತಹ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡೆಯುವುದಕ್ಕಾಗಿ ಗುಂಡಿ ತೆಗೆಯಲು ಮುಂದಾಗಿದ್ದು ಸಾರ್ವಜನಿಕರು ಅಡ್ಡಿ ಪಡಿಸಿ ಕೂಡಲೇ ಸ್ಥಳಕ್ಕೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ಬರಬೇಕು ಜಂಟಿ ಸರ್ವೆ ಮಾಡುವ ತನಕ ಯಾವುದೇ ಕೆಲಸ ಮಾಡಲ್ಲವೆಂದು ಹೇಳಿ ಏಕೆ ಕೆಲಸ ಮಾಡುತ್ತಿದ್ದೀರಾ ಎಂದು ಕೆಲ ಕಾಲ ರೈತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡೆವೆ ಮಾತಿನ ಚಕಮಕಿ ನಡೆಯಿತು. .
ಬಂದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ರೈತರು ವಾಗ್ದಾಳಿ ನಡೆಸಿ, ಸರ್ಕಾರ ಆದೇಶದಂತೆ ಜಂಟಿ ಸರ್ವೆ ಮಾಡಿ ನಂತರ ಮಾಡಬೇಕು ಸಖಸುಮ್ಮನ್ನೆ ಬಡ ರೈತರ ಮೇಲೆ ದಬ್ಭಾಳಿಕೆ ಮಾಡಬೇಡಿ. ಈ ಕೆಲಸ ಮಾಡಲು ನಿಮಗೆ ಏನು ಆದೇಶ ಇದೆ ತೋರಿಸಿ ಎಂದು ರೈತರು ಅರಣ್ಯ ಇಲಾಖೆ ಅಧಿಕಾರಿಗಳನ್ನ ಪ್ರಶ್ನೆಸಿದರು ?
ರೈತರೊಬ್ಬರು ಅರಣ್ಯ ಇಲಾಖೆ ಅಧಿಕಾರಿಯೊಂದಿಗೆ ನಮಗೆ ಜಿಲ್ಲಾಧಿಕಾರಿಗಳು ಮೌಖಿಕವಾಗಿ ಜಂಟಿ ಸರ್ವೆ ಮಾಡಿದ ನಂತರ ಕಾಮಗಾರಿ ಪ್ರಾರಂಭಿಸಲು ತಿಳಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಸರಿಯಲ್ಲ ಎಂದರು.