ಶ್ರೀನಿವಾಸಪುರ : ಪಟ್ಟಣ ಅಭಿವೃದ್ಧಿಗಾಗಿ ಸರ್ಕಾರವತಿಯಿಂದ ಅನೇಕ ಅನುದಾನಗಳು ಬರುತ್ತವೆ ಅವುಗಳನ್ನು ಸದ್ಭಳಕೆ ಮಾಡಿಕೊಳ್ಳವ ವ್ಯವಸ್ಥೆಯನ್ನು ಅಧಿಕಾರಿಗಳು ಹಮ್ಮಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಸ್.ಅಂಬಿಕಾ ಸೂಚಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಸಂಬಂದಿಸಿದಂತೆ ಪ್ರಗತಿ ಪರಿಶೀಲಾನ ಸಭೆ ನಡೆಸಿದರು.
ಪಟ್ಟಣಕ್ಕೆ ಸಂಬಂದಿಸಿದಂತೆ ಕುಡಿಯುವ ನೀರು, ಸ್ವಚ್ಚತೆ, ನೈರ್ಮಲ್ಯ ಕಾಪಾಡುವುದು, ಬೀದಿ ದೀಪಗಳು, ರಸ್ತೆ ಹಾಗೂ ಇತರೆ ಮೂಲ ಭೂತ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿ ಮಾಹಿತಿ ಪಡೆದು ಪಟ್ಟಣ ಅಭಿವೃದ್ಧಿಗಾಗಿ ಇನ್ನು ಬೇಕಾಗಿರುವ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕಛೇರಿ ವ್ಯವಸ್ಥಾಪಕ ಜಿ.ನವೀನ್ ಚಂದ್ರ, ಪರಿಸರ ಅಭಿಯಂತರ ಕೆ.ಎಸ್.ಲಕ್ಷ್ಮೀಶ್, ಕಿರಿಯ ಅಭಿಯಂತರ ವಿ.ಶ್ರೀನಿವಾಸಪ್ಪ, ಕಂದಾಯ ಅಧಿಕಾರಿ ವಿ.ನಾಗರಾಜ್, ಜಿಲ್ಲಾ ನಗರಾಭಿವೃದ್ಧಿ ಕೋಶದ ನೋಡಲ್ ಅಧಿಕಾರಿ ಚೌಡೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಇದ್ದರು.