ಶ್ರೀನಿವಾಸಪುರ : ತಾಲ್ಲೂಕಿನ ಎನಮರೇಪಲ್ಲಿ ಗ್ರಾಮದ ಸಮೀಪ ಭಾನುವಾರ ಅಭಿನಯ ಗೀತೆಯೊಂದರ ಚಿತ್ರೀಕರಣಕ್ಕೆ ಮುಖ್ಯ ಶಿಕ್ಷಕ ಎಂ.ಬೈರೇಗೌಡ ಚಾಲನೆ ನೀಡಿ ನಾಡು ನುಡಿ ಅಭಿವೃದ್ಧಿಗೆ ಸಾಂಘಿಕ ಪ್ರಯತ್ನ ಅಗತ್ಯ ಎಂದು ಮುಖ್ಯ ಶಿಕ್ಷಕ ಎಂ.ಬೈರೇಗೌಡ ಹೇಳಿ ‘ಗಡಿ ಪ್ರದೇಶದ ನಾಗರಿಕರು ಸ್ಥಳೀಯ ಸಾಹಿತಿ ಕಲಾವಿದರನ್ನು ಪ್ರೋತ್ಸಾಹಿಸಬೇಕು. ನಾಡು ನುಡಿ ಅಭಿವೃದ್ಧಿಗೆ ಸಾಂಘಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ತಾಲ್ಲೂಕಿನ ಎನಮರೇಪಲ್ಲಿ ಗ್ರಾಮದ ಸಮೀಪ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಉದ್ಯಾನದಲ್ಲಿ ಭಾನುವಾರ, ಕೇರ್ ಆಫ್ ಅಡ್ರಸ್ ಫಿಲಿಂಸ್ ವತಿಯಿಂದ, ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರ ಕೃಷ್ಣ ಮುಧುರ ಲೀಲಾ ಎಂಬ ಗೀತೆಯ ಲಿರಿಕಲ್ ವೀಡಿಯೋ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಥಳೀಯ ಸಾಹಿತಿ ಕಲಾವಿದರು ಹಾಗೂ ತಂತ್ರಜ್ಞರು ಸೇರಿಕೊಂಡು ಕನ್ನಡ ಗೀತೆಯೊಂದನ್ನು ಚಿತ್ರೀಕರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಗೀತೆಯನ್ನು ವಿದುಷಿ ಸಹನಾ ರಾಮಚಂದ್ರ ಸುಶ್ರಾವ್ಯವಾಗಿ ಹಾಡಿದ್ದಾರೆ. ಅದಕ್ಕೆ ನೃತ್ಯ ರೂಪಕ ರೂಪ ನೀಡುತ್ತಿರುವುದು ಸ್ವಗತಾರ್ಹ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಚಿತ್ರೀಕರಣ ಮಾಡಲು ಬೇಕಾದ ಹಲವು ಸ್ಥಳಗಳಿವೆ. ಮಳೆಗಾಲದಲ್ಲಿ ಮುದಿಮಡಗು ಪ್ರದೇಶ ಹಸಿರುಟ್ಟು ಕಂಗೊಳಿಸುತ್ತದೆ. ಗುಡ್ಡಗಾಡು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ. ಚಲನ ಚಿತ್ರ ನಿರ್ಮಾಪಕರು ಬಳಸಿಕೊಳ್ಳಬಹುದಾಗಿದೆ. ರಾಮದಾಸ್ ನಾಯ್ಡು ಅವರಂಥ ಸಮರ್ಥ ಚಿತ್ರ ನಿರ್ದೇಶಕರು ಈ ತಾಲ್ಲೂಕಿನವರು ಎಂದು ಹೇಳಲು ಹೆಮ್ಮೆಯೆನಿಸುತ್ತದೆ ಎಂದು ಹೇಳಿದರು.
ಶಾಲಾ ಕಾಲೇಜುಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರ ಪ್ರತಿಭೆ ಗುರ್ತಿಸಿ ಪ್ರೋತ್ಸಾಹಿಸಬೇಕು. ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಬೇಕು. ಹಾಗೆ ಮಾಡಿದರೆ ಮಾತ್ರ ಕಲಾವಿದರು ಬೆಳೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಿರ್ದೇಶಕ ವಿ.ನಿಶಾಂತ್ ಕುಮಾರ್, ನೃತ್ಯ ನಿರ್ದೇಶಕಿ ಸಿ.ಎಂ.ಪ್ರತೀಶ, ಛಾಯಾಗ್ರಾಹಕ ಭರತ್ ರೆಡ್ಡಿ, ಬಾಲ ಕಲಾವಿದೆಯರಾದ ಎಚ್.ಟಿ.ಲೇಖಶ್ರೀ, ಎಸ್.ಸಂಜನಾ ಇದ್ದರು.