ಶ್ರೀನಿವಾಸಪುರ 1 : ಸುಮಾರು 10 ಸಾವಿರ ಕ್ಯೂಸೆಕ್ ನೀರು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಈ ಯೋಜನೆ ಗ್ರಾಮೀಣ ಬಾಗದ ರೈತರ ಕೃಷಿ ಹಾಗು ನಾಗರೀಕರ ಕುಡಿಯುವ ನೀರು ಪರಿಸರ ಸಂರಕ್ಷಣೆಗೆ ಪೂರಕವಾಗಿದೆ ಎಂದು ಯಲ್ದೂರು ಗ್ರಾಮಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಎಂ. ಮಂಗಳಾಂಬ ತಿಳಿಸಿದರು.
ತಾಲ್ಲೂಕಿನ ಯಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲಟೂರು ಗ್ರಾಮದಲ್ಲಿ ಅಮೃತ ಸರೋವರ ಯೋಜನೆ ಅಡಿಯಲ್ಲಿ ಸುಮಾರು 60 ಲಕ್ಷ ವೆಚ್ಚದಲ್ಲಿ ಕೆರೆ ಕಟ್ಟೆ ದುರಸ್ಥಿ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಕನಸಿನ ಕೂಸು ನರೇಗಾ ಯೋಜನೆ ಅಡಿ ಕೆರೆಗಳನ್ನು ಅಭಿವೃದ್ದಿ ಪಡಿಸುವ ಯೋಜನೆಯೇ ಅಮೃತ ಸರೋವರ ಯೋಜನೆಯಾಗಿದೆ, ಗ್ರಾಮೀಣ ಪ್ರದೇಶದಲ್ಲಿ ಕೆರೆಗಳನ್ನು ದುರಸ್ಥಿಮಾಡಿ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ಹರಿದು ಹೋಗುತ್ತಿರುವ ನೀರನ್ನು ಸಂಗ್ರಹಿಸುವ ಗುರಿ ಈ ಯೋಜನೆಯ ಉದ್ದೇಶ, ಅಂತರ್ಜಲ ವೃದ್ದಿಯಾಗಿ ಜನ ಹಾಗು ಪ್ರಾಣಿ ಪಕ್ಷ್ಷಿಗಳಿಗೆ ಸುತ್ತಮುತ್ತಲ ಗ್ರಾಮಗಳ ರೈತರ ಬೋರ್ವೆಲ್ ಗಳಿಗೆ ಅನುಕೂಲವಾಗುತ್ತದೆ ಇದು ಒಂದು ಅತ್ಯಂತ ಉಪಯೋಗಕಾರಿ ಯೋಜನೆ ಯಾಗಿದೆ ಎಂದರು.
ಪರಿಸರ ಸಂರಕ್ಷಣೆಯ ಗುರಿ ಈಗಾಗಲೇ ಅಮೃತ ಸರೋವರ ಯೋಜನೆಯು ಈ ತಾಲ್ಲೂಕಿನಲ್ಲಿ ಮಾಡಲಾಗಿದ್ದು ನಮ್ಮ ಯಲ್ದೂರು ಗ್ರಾಮಪಂಚಾಯಿತಿಯಲ್ಲಿನ ವಾರ್ಡ ಸಭೆ ಹಾಗು ಗ್ರಾಮ ಸಭೆಯಲ್ಲಿ ಚರ್ಚೆಮಾಡಿ ಈ ಬಾಗದಲ್ಲಿ ದೊಡ್ಡಕೆರೆ ನೀಲಟೂರು ಗ್ರಾಮದಲ್ಲಿ ಇದ್ದು ಎಲ್ಲಾ ಸದಸ್ಯರ ಒಪ್ಪಿಗೆ ಯಂತೆ ಈ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಈ ಗ್ರಾಮದ ಎಲ್ಲರೂ ಸೇರಿ ಕೆರೆಯನ್ನು ಅಭಿವೃದ್ದಿ ಪಡಿಸಲು ಕೈಜೋಡಿಸಬೇಕು ಇದರಿಂದ ನಿಮಗೆ ಒಳ್ಳೇದಾಗಲಿದೆ ಈ ಯೋಜನೆಯಿಂದ ಕೂಲಿಕಾರ್ಮಿಕರಿಗೆ ಉದ್ಯೋಗವೂ ಸಿಗಲಿದೆ ಎಂದರು.
ಇದೇ ಸಮಯದಲ್ಲಿ ಗ್ರಾಮಪಂಚಾಯಿತಿ ಉಪಾದ್ಯಕ್ಷ ಎಸ್. ಮೋಹನ್ ಬಾಬು ಮಾತನಾಡಿ ಅಮೃತ ಯೋಜನೆಯಡಿ ಉದ್ಯೋಗ ಖಾತ್ರಿಯ ಮೂಲಕ ಕೆರೆಗಳ ಅಭಿವೃದ್ದಿಗೆ ಅವಕಾಶ ಇದೆ ಎಲ್ಲರೂ ಸೇರಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ನಮ್ಮ ಉದ್ದೇಶ ಕೆರೆಗಳಿಗೆ ನೀರು ತುಂಬಿದರೆ ಈ ಬಾಗದ ಎಲ್ಲಾ ಜನರಿಗೆ ಅನುಕೂಲವಾಗಲಿದೆ ಈಗಾಗಲೇ ಈ ಕೆರೆಯಲ್ಲಿ ಮಣ್ಣು ಮುಚ್ಚಿದ್ದು ಮಳೆ ಬಂದರೆ ನೀರು ವ್ಯಥರ್Àವಾಗಿ ಹೋಗುತ್ತದೆ ಹಾಗಾಗಿ ಈ ಕೆರೆಯಲ್ಲಿ ಸಂಪೂರ್ಣವಾಗಿ ಹೂಳೆತ್ತಿ ಕೆರೆಯನ್ನು ಅಭಿವೃದ್ದಿ ಮಾಡುತ್ತಿದ್ದೇವೆ ಇದರಿಂದ ಸಾಕಷ್ಟು ಬೋರ್ ವೆಲ್ ಗಳಲ್ಲಿ ನೀರು ಉತ್ಪತ್ತಿಯಾಗುತ್ತದೆ ಪರಿಸರ ಸಂರಕ್ಷಣೆಯೂ ಆಗಿದಂತಾಗುತ್ತದೆ ಈ ಕೆರೆಯ ಅಭಿವೃದ್ದಿಯಿಂದ ಅಂತರ್ಜಲಮಟ್ಟ ಹೆಚ್ಚಾಗಿ ಈ ಬಾಗದ 5-6 ಗ್ರಾಮಗಳಿಗೆ ಶಾಶ್ವಿತವಾಗಿ ನೀರು ಸಿಗುತ್ತದೆ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಗದಂತಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಲ್ದೂರು ಗ್ರಾಮ ಪಂಚಾಯಿತಿಯ ಅದ್ಯಕ್ಷಿಣಿ ವಿಜಯಲಲಿತ, ಸದಸ್ಯರಾದ ರೂಪಾ ರಾಮಾಂಜಿ, ಯಲ್ದೂರು ಸೊಸ್ಶೆಟಿಯ ಮಾಜಿ ಅದ್ಯಕ್ಷ ಹೊಸಹಳ್ಳಿ ಹೆಚ್.ಎಂ ನಾರಾಯಣಸ್ವಾಮಿ, ಮುಖಂಡರಾದ ಹೆಚ್. ಆಂಜನೇಯಪ್ಪ, ಕೋದಂಡರಾಮಯ್ಯ, ಎಂ. ಶ್ರೀನಿವಾಸ್, ಶ್ರೀನಿವಾಸರೆಡ್ಡಿ, ಪೆದ್ದಪಲ್ಲಿ ರಾಮಕೃಷ್ಣ, ಚಂದ್ರಪ್ಪ, ಮುನಿಶಾಮಿ, ಅಮರ್ನಾಥ್, ಎನ್.ವಿ ನಾರಾಯಣಸ್ವಾಮಿ, ದೊಡ್ಡಗಂಗಪ್ಪ, ಬಾಬು, ಪ್ರತಾಪ್, ಚಾಮರಾಜ್ ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.