ಜೀವನದ ಗುರಿಯನ್ನ ಮುಟ್ಟಲು ಗುರು ಹಿರಿಯರ ಮಾರ್ಗದರ್ಶನವನ್ನು ಪಡೆದು ತಮ್ಮ ಜೀವನದ ಗುರಿಯನ್ನ ಸಾಧಿಸುವಂತೆ ಎಂದು ಎಂ ಶ್ರೀನಿವಾಸನ್ ರವರ ಧರ್ಮಪತ್ನಿ ಶ್ರೀಮತಿ ಡಾ. ಚಂದ್ರಕಲಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಟ್ಟಣ ಮಾರುತಿ ಸಭಾಭವನದಲ್ಲಿ ಶನಿವಾರ ಜಿ.ಪಂ ಮಾಜಿ ಅಧ್ಯಕ್ಷ ದಿ|| ಎಂ. ಶ್ರೀನಿವಾಸನ್ ಅಭಿಮಾನಿ ಬಳಗ ಹಾಗೂ ಯುವ ಸೇನೆ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅತ್ತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಅಂಬೇಡ್ಕರ್ರವರು ಬಹಿಷ್ಕೃತ ಭಾರತ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಶಿಕ್ಷಣ, ಸಂಘಟನೆ, ಹೋರಾಟ ಎಂಬುದನ್ನ ಘೋಷಣೆ ಮಾಡಿ ನೂರು ವರ್ಷಗಳು ತುಂಬಿದೆ ಇದರ ಅಂಗವಾಗಿ ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಲು ಈ ಒಂದು ಕಾರ್ಯಕ್ರಮವನ್ನು ಹೊಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ ಮನುಷ್ಯನು ಹುಟ್ಟುತ್ತಾನೆ, ಸಾಯಿತ್ತಾನೆ ಆದರೆ ಅವರು ಮಾಡಿರುವ ಕಾರ್ಯಗಳು ಶಾಶ್ವತ. ದಿ|| ಎಂ.ಶ್ರೀನಿವಾಸನ್ ರವರ ಅವರ ಕಾರ್ಯಗಳು , ಅವರ ಯೋಜನೆಗಳು , ಅವರ ಚಿಂತನೆಗಳು, ಮುಂದಿನ ಪೀಳಿಗೆಗೆ ದಾರಿದೀಪವಾಗುವಂತೆ ಕುಟುಂಬದವರು, ಅಭಿಮಾನಿಗಳು ಚಿಂತನೆ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ತಹಸೀಲ್ದಾರ್ ಸುದೀಂದ್ರ ಮಾತನಾಡಿದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಮುನಿಲಕ್ಶ್ಮಯ್ಯ, ಬಿಆರ್ಸಿ ವಸಂತ, ಪುರಸಭೆ ಮುಖ್ಯಧಿಕಾರಿ ಸತ್ಯನಾರಾಯಣ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್, ಸಾಯಿ ವಿಜಯ ಕಾಲೇಜು ಪ್ರಾಂಶುಪಾಲ ರಾಮಾಂಜನೇಯ, ಪುರಸಭಾ ಸದಸ್ಯ ಬಿ ಆರ್ ಭಾಸ್ಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಇಂದ್ರಾಭವನ್ ಜಿ ರಾಜಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಅರ್.ಜಿ. ನರಸಿಂಹಯ್ಯ, ಕೆಕೆ.ಮಂಜು, ಗ್ರಾಮ ಪಂಚಾಯಿತಿ ಸದಸ್ಯರಾದ ಬಕ್ಷು ಸಾಬ್, ವಿಶ್ವನಾಥರೆಡ್ಡಿ, ದಿ|| ಎಂ.ಶ್ರೀನಿವಾಸನ್ ರವರ ಕುಟುಂಬಸ್ಥರಾದ ಶಿವಕುಮಾರಿ, ವಿಶ್ವನಾಥ್, ಎಂ.ಶ್ರೀನಿವಾಸನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗಾಂಡ್ಲಹಳ್ಳಿ ಎನ್.ಚಲಪತಿ, ದಲಿತ ಮುಖಂಡ ಉಪ್ಪರಲ್ಲಿ ತಿಮ್ಮಯ್ಯ, ಈರಪ್ಪ, ಶಂಕರ್, ಚಲಪತಿ, ರಾಜೇಶ್, ದೊರಸ್ವಾಮಿರೆಡ್ಡಿ, ಕೂಳ್ಳೂರು ವೆಂಕಟೇಶ್, ಶಿಕ್ಷಕರಾದ ಮುರಳಿ, ಕಲಾಶಂಕರ್, ಜಿ ಎಂ ಕೃಷ್ಣಪ್ಪ , ಹಾಗೂ ವಿವಿಧ ಶಾಲಾ ಕಾಲೇಜು ಪ್ರಭಾನ್ವಿತ ವಿದ್ಯಾರ್ಥಿಗಳು , ಪೋಷಕರ ಉಪಸ್ಥಿತರಿದ್ದರು.