ಶ್ರೀನಿವಾಸಪುರ : ಪಟ್ಟಣದ ಮಾರತಿನಗರದಲ್ಲಿ ಸೋಮವಾರ ಅರಿಕೆರೆ ಲಕ್ಷ್ಮಮ್ಮ 65 ವರ್ಷದ ಮಹಿಳೆಗೆ ಬೀದಿ ನಾಯಿಗಳು ತಲೆಗೆ ತೀವ್ರಗಾಯವಾಗಿದೆ ಹಾಗು ದೇಹದ ಇತರೆ ಭಾಗಗಳಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಅರಿಕೆರೆ ಲಕ್ಷ್ಮಮ್ಮ ಪಟ್ಟಣದಲ್ಲಿ ಮಾರತಿ ನಗರದ ತನ್ನ ತಂಗಿಯ ಮನೆಗೆ ಬಂದಿದ್ದು, ಮನೆಯ ಸಮೀಪ ನಿಂತಿದ್ದ ಸಮಯದಲ್ಲಿ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದೆ. ಕಳೆದ ವರ್ಷ ನವಬಂರ್ ತಿಂಗಳಲ್ಲಿ ಬೀದಿನಾಯಿಗಳ ಕಾಟದಿಂದ ಬಡಾವಣೆಗಳಲ್ಲಿ ತಿಂಡಿ, ತಿನಿಸುಗಳನ್ನು ಹಿಡಿದು ಸಾಗುವ ಪುಟ್ಟ ಮಕ್ಕಳ ಮೈಮೇಲೆ ಬೀದಿ ನಾಯಿಗಳು ದಾಳಿ ಇಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು ಅದರಂತೆ ಸೋಮವಾರ ಬೀದಿ ನಾಯಿಗಳ ಕಾಟದಿಂದ ಮಹಿಳೆಯ ತಲೆಗೆ ತೀವ್ರವಾಗಿ ಗಾಯವಾಗಿ ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆ ದಾಖಲಾಗಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನಾದರೂ ಪುರಸಭೆಯು ಬೀದಿ ನಾಯಿಗಳ ಕಾಟವನ್ನು ಹೋಗಲಾಡಿಸುವದೇ ಎಂದು ಸಾರ್ವಜನಿಕರ ಆಗ್ರಹವಾಗಿದೆ.