ಶ್ರೀನಿವಾಸಪುರ: ಪಟ್ಟಣದ ಶ್ರೀ ಬೋಯಿಕೊಂಡ ಗಂಗಮ್ಮ ದೇವಾಲಯ ಸಂತೆ ಮೈದಾನ ಸೇವಾ ಸಮಿತಿ ವತಿಯಿಂದ ಅಮ್ಮನವರ ಉತ್ಸವ ಮೆರವಣಿಗೆ ಹಾಗು ದೀಪೋತ್ಸವ ಕಾರ್ಯಕ್ರಮ ಶ್ರದ್ದಾ ಭಕ್ತಿ ವಿಜೃಂಭಣೆಯಿಂದ ನಡೆಸಲಾಯಿತು.
ಪಟ್ಟಣದ ಸಂತೆ ಮೈದಾನದಲ್ಲಿ ನೆಲೆಸಿರುವ ಶ್ರೀ ಬೋಯಿಕೊಂಡ ಗಂಗಮ್ಮ ದೇವಿಗೆ ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಸಾಂಪ್ರದಾಯದಂತೆ ಸೇವಾಸಮಿತಿ ಬಳಗದ ವತಿಯಿಂದ ಪಟ್ಟಣದ ಸಂತೆ ಮೈದಾನ, ಅಂಬೇಡ್ಕರ್ ಪಾಳ್ಯ, ರಥಬೀದಿಗಳಲ್ಲಿ ಅಮ್ಮನವರ ಉತ್ಸವ ಮೂರ್ತಿಯನ್ನು ತಮಟೆ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸೇವಾಕರ್ತರು ಹೊತ್ತು ಮೆರವಣಿಗೆ ನಡೆಸಲಾಯಿತು.
ಜೊತೆಗೆ ಸ್ಥಳೀಯ ಭಕ್ತಾದಿಗಳಿಂದ ತಂಬಿಟ್ಟು ದೀಪೋತ್ಸವ ವನ್ನು ಮಹಿಳೆಯರು ಹೊತ್ತು ಅರಿಕೆಯನ್ನು ನೆರವೇರಿಸಲಾಯಿತು, ದೇವಿಗೆ ವಿಶೇಷ ಹೂವಿನ ಅಲಂಕಾರ ಅಭಿಶೇಖ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು ಅಮ್ಮನವರ ದರ್ಶನಕ್ಕೆ ಬಂದಂತಹ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಸೇವೆಯನ್ನು ಏರ್ಪಡಿಸಲಾಗಿತ್ತು.
ಇದೇ ವೇಳೆಯಲ್ಲಿ ಬಾಗವಹಿಸಿ ಮಾತನಾಡಿದ ಸಮಾಜ ಸೇವಕ ಕೆ.ಕೆ ಮಂಜುನಾಥ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಈ ಬಾಗದ ಸೇವಾಕರ್ತ ಭಕ್ತಾದಿಗಳಿಂದ ಗಂಗಮ್ಮ ದೇವಿಗೆ ದೀಪೋತ್ಸವ ಇತರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷದಾಯಕವಾಗಿದೆ ತಾಯಿ ಆಶೀರ್ವಾದ ಎಲ್ಲರಿಗೂ ನೀಡಲಿ ಮುಂದಿನ ವರ್ಷವೂಕೂಡ ಇಂತಹ ಕಾರ್ಯಕ್ರಮಗಳು ಸಡಗರದಿಂದ ಮುಂದುವರಿಯಲಿ ಎಂದು ತಿಳಿಸಿದರು.
ಈ ಪೂಜಾ ಕಾರ್ಯಕ್ರಮಗಳನ್ನು ದೇವಾಲಯ ಪ್ರದಾನ ಅರ್ಚಕ ವೆಂಕಟಸ್ವಾಮಿ ತಂಡ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಂತೇಮೈದಾನದ ಅಮ್ಮನವರ ಸೇವಾಸಮಿತಿ ಬಳಗದವರಾದ ರಾಮಕೃಷ್ಣ(ಬುಜ್ಜಿ), ಬೀಮಣ್ಣ, ಅಕ್ಕುಲಪ್ಪ, ಸಿಪಿಎಂ ಆನಂದ್, ರವಿ, ಆನಂದ್, ಶ್ರೀಧರ್, ಬೋಟಿ ಆನಂದ, ಅಂಗಡಿ ಬಾಬು, ಹರೀಶ್ ರಾಜ್, ಮುನಿಕೃಷ್ಣ, ವೆಂಕಟರೆಡ್ಡಿ, ಮ್ಯಾದರ ಕುಟುಂಬದವರು ಹಾಗು ಅಮ್ಮನವರ ಸೇವಾ ಸಮಿತಿ ಬಳಗದ ಯುವಕರು ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.