

ಶ್ರೀನಿವಾಸಪುರ : ಸಮುದಾಯದ ವಿದ್ಯಾರ್ಥಿಗಳು ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಪಡೆದು ಸಮಾಜ ಮುಖಿ ಕೆಲಸಗಳನ್ನು ಮಾಡುವಂತೆ ಸಲಹೆ ನೀಡಿದರು. ಅಲ್ಲದೆ ಸಮುದಾಯ ಎಲ್ಲರೂ ಸಹ ಸಂಘಟನೆಯೊಂದಿಗೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಭಲರಾಗುವಂತೆ ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಸಲಹೆ ನೀಡಿದರು .
ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ಸವಿತಾ ಮಹರ್ಷಿ ಜಯಂತಿಯನ್ನು ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪುರಸಭೆ ಸದಸ್ಯ ಸಂಜಯ್ಸಿಂಗ್, ಮುಖ್ಯಾಧಿಕಾರಿ ವಿ.ನಾಗರಾಜ್, ಕಂದಾಯ ಅಧಿಕಾರಿ ಆರ್.ಶಂಕರ್, ಪರಿಸರ ಅಬಿಯಂತರ ಲಕ್ಷ್ಮೀಶ, ಸಿಬ್ಬಂದಿಗಳಾದ ನಾಗೇಶ್, ಸಂತೋಷ, ಪೌರಕಾರ್ಮಿಕರ ಅಧ್ಯಕ್ಷ ಭಾಲಕೃಷ್ಣ ಹಾಗು ಸವಿತಾ ಸಮಾಜದ ಮುಖಂಡರು ಇದ್ದರು.