ಶ್ರೀನಿವಾಸಪುರ : ಪ್ರತಿಯೊಬ್ಬರು ಹಕ್ಕು ಮತ್ತು ಕರ್ತವ್ಯಗಳನ್ನು ಜೊತೆ ಜೊತೆಯಾಗಿ ಜೋಡಿ ಎತ್ತುಗಳಂತೆ ಮುನ್ನೆಡಯಬೇಕು ಎಂದು ಸಲಹೆ ನೀಡಿದರು ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ವ್ಯಾಖ್ಯಾನಿಸಿದರು.
ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗು ತಾಲೂಕು ಆಡಳಿತ ಮಂಡಲಿ ವತಿಯಿಂದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ನಮ್ಮ ದೇಶವು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನೇತೃತ್ವದಲ್ಲಿ ಅಭಿವೃದ್ದಿಯತ್ತಾ ಸಾಗುತ್ತಿದ್ದು, ಭಾರತ ದೇಶದ ಗಣತಂತ್ರದ ತಾಯಿ ಎಂಬ ಘೋಷ ವಾಕ್ಯದ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ದೇಶದ ಅಭಿವೃದ್ಧಿಯ ಬಗ್ಗೆ ತಿಳಿಸಲಾಗುತ್ತಿದೆ. ನಮ್ಮ ದೇಶವು ಸಂವಿಧಾನದ ಮುಖೇನ ಸಂವಿದಾನದಂತೆ ವ್ಯವಸ್ಥೆಗಳನ್ನು ಬಳಸುತ್ತಿರುವ ಏಕೈಕ ರಾಷ್ಟ್ರವೆಂದರೆ ನಮ್ಮ ಭಾರತ ದೇಶ .
ಈ ಹಿಂದೆ ಭಾರತ ದೇಶ ಹಳ್ಳಿಗಳ ದೇಶ, ಭಾರತ ದೇಶ ಬಡವರ ದೇಶ, ಭಾರತ ದೇಶ ಕೂಲಿ ಕಾರ್ಮಿಕರ ದೇಶ ಎಂದು ಹೇಳಿಕೊಳ್ಳಲಾಗಿತ್ತು ಆದರೆ ಇಂದು ದೇಶವು ಅನೇಕ ರೀತಿಯಲ್ಲಿ ಪ್ರಗತಿ ಕಾಣುತ್ತಿದೆ. ಇಂದು ಕೇಂದ್ರ ಸರ್ಕಾರವು ಎಲೆಮರಿಕಾಯಿಯಂತೆ ಇರುವ ಆದರ್ಶ ವ್ಯಕ್ತಿಗಳನ್ನು ಪಕ್ಷಾತೀತಿವಾಗಿ, ಜ್ಯಾತ್ಯಾತೀತವಾಗಿ ಗುರ್ತಿಸಿ ಕೇಂದ್ರ ನೀಡುವ ಪ್ರದ್ಮಶ್ರೀ, ಪದ್ಮವಿಭೂಷಣ ಗಳಂತಹ ಅನೇಕ ಪುರಸ್ಕಾರಗಳಿಗೆ ಆಯ್ಕೆ ಮಾಡುತ್ತಿರುವುದು ಆದರ್ಶ ವ್ಯಕ್ತಿಗಳಿಗೆ ಗೌರವ ತಂದಂತೆ ಎಂದರು.
ಶೈಕ್ಷಣಿಕವಾಗಿ ರಾಜ್ಯದಲ್ಲಿ ತಾಲೂಕು ದ್ವಿತೀಯ ಸ್ಥಾನವನ್ನು ಪಡೆದಿರುವುದ ಹೆಮ್ಮಯ ಸಂಗತಿ . ಮುಂದಿನ ದಿನಗಳಲ್ಲಿ ಇನ್ನು ಹೆಚ್ಚ ಪರಿಶ್ರಮದೊಂದಿಗೆ ಪ್ರಥಮ ಸ್ಥಾನವನ್ನು ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರು ಪರಿಶ್ರಮ ಪಡುವಂತೆ ಸಲಹೆ ನೀಡಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ಭಾರತ ದೇಶವು ಪ್ರಪಂಚದಲ್ಲಿ ಬಲಿಷ್ಠ ರಾಷ್ಟವಾಗಿ ಹೊರಹೊಮ್ಮುತ್ತಿದೆ . ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ದೇಶವು ಅಭಿವೃದ್ಧಿ ರಾಷ್ಟ್ರವಾಗುತ್ತಿದೆ.
ಕ್ಷೇತ್ರ ಅಭಿವೃದ್ಧಿ ಪಡಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳವು ಹಿನ್ನೆಲೆಯಲ್ಲಿ ಪಟ್ಟಣವನ್ನು 30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪಟ್ಟಣವನ್ನು 2 , 3 ತಿಂಗಳಲ್ಲಿ ಕೆಲಸವನ್ನು ಪ್ರಾರಂಭಿಸಿ ಪಟ್ಟಣವನ್ನು ಅಭಿವೃದ್ಧಿ ಪಡಿಸಲಾಗುವುದು.
ನರಸಾಪುರ, ವೇಮಗಲ್ನಲ್ಲಿ ಯಾವು ರೀತಿಯಲ್ಲಿ ಕೈಗಾರಿಕ ವಲಯವು ಅಭಿವೃದ್ಧಿಯಾಗುತ್ತಿದೆಯೋ ಅದೇ ರೀತಿಯಾಗಿ ಕ್ಷೇತ್ರದಲ್ಲಿ ಕೈಗಾರಿಕ ವಲಯವನ್ನು ಅಭಿವೃದ್ಧಿ ಪಡಿಸಲಾಗುದು ಚಿಂತನೆ ಮಾಡಲಾಗುತ್ತಿದೆ . ಇದರಿಂದ ಯುವಕರಿಗೆ ಉದ್ಯೋಗವನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಕ್ಷೇತ್ರದಲ್ಲಿ 5 ಸಾವಿರ ಎಕರೆಯಲ್ಲಿ ಕೈಗಾರಿಕಾ ವಲಯವನ್ನು ಸೃಷ್ಠಿ ಮಾಡಲಾಗುವುದು.
ಶ್ರೀನಿವಾಸಪುರ ಕ್ರೀಡಾಂಗಣಕ್ಕೆ 5 ಕೋಟಿ ರೂ ಗಳನ್ನು ನೀಡುವಂತೆ ಸರ್ಕಾರದಲ್ಲಿ ಪ್ರಸ್ತಾವಣೆ ಸಲ್ಲಿಸಿದ್ದೇನೆ. ಅಬೇಂಡ್ಕರ್ ಭವನವನ್ನ 2 ಕೋಟಿ ವೆಚ್ಚದಲ್ಲಿ ಸ್ಥಾಪನೆ ಮಾಡಲು ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ.
ಶ್ರೀನಿವಾಸಪುರ –ಕೋಲಾರ ರಸ್ತೆ 7.5 ಮೀಟರ್ ಅಗಲಿಕರಿಸಿ 40 ಕೋಟಿ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಪ್ರಾರಂಭಸಿಲಾಗಿದೆ . ಮುಂದಿನ ಬಜೆಟ್ನಲ್ಲಿ 10 ಕೋಟಿ ವೆಚ್ಚದಲ್ಲಿ ಮಾವಿನ ಹಣ್ಣು ಸಂಸ್ಕರಣ ಘಟಕವನ್ನು ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗುತ್ತದೆ. ಜಲ ಜೀವನ್ ಮಿಷನ್ ವತಿಯಿಂದ ಹಳ್ಳಿ ಹಳ್ಳಿಗೂ ನಲ್ಲಿಯ ಮೂಲಕ ನೀರನ್ನ ಮನೆಗಳಿಗೆ ಹರಿಸಲಾಗುವುದು.
ತಾಲೂಕಿನಲ್ಲಿ ನಿರಾಶ್ರಿತರು ಇರುವುದರಿಂದ ನಾನೇ ಖುದ್ದು ಪ್ರತಿ ಪಂಚಾಯಿತಿಗೂ ಬೇಟಿ ನೀಡಿ ನಿರಾಶ್ರಿತರಿಗೆ ಮನೆಗಳನ್ನು ಕಲ್ಪಸಲಾಗುವುದು. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗೊಂಡು ನಿಮ್ಮ ತಂದೆ ತಾಯಿಗೆ , ಶಾಲೆಗೆ ಕೀರ್ತಿ ತರುವಂತೆ ಸಲಹೆ ನೀಡಿದರು. ತಾಲೂಕನ್ನು ಸರ್ವತೋಮುಖ ಅಭಿವೃದ್ಧಿಗಾಗಿ ಅಧಿಕಾರಿಗಳು ಸಾರ್ವಜನಿಕರು ಸಹಕರಿಸಬೇಕು ಎಂದರು.
ಪೊಲೀಸರಿಂದ , ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು ಹಾಗು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.ಶಾಸಕರು ವಿದ್ಯಾರ್ಥಿಗಳೊಂದಿಗೆ ನೃತ್ಯ ಪ್ರದರ್ಶವನ್ನು ಮಾಡುವುದರ ಮೂಲಕ ಎಲ್ಲರ ಗಮನವನ್ನು ಸಳೆದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಬಿಇಒ ಮುನಿಲಕ್ಷ್ಮಯ್ಯ, ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಅರಣ್ಯ ಇಲಾಖೆ ಅರಣ್ಯಾಧಿಕಾರಿ ಕೆ.ಮಹೇಶ್, ಖಜಾನೆ ಅಧಿಕಾರಿ ಕಮಲಾಕ್ಷಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜನಾರ್ಧನ್, ಬಿಆರ್ಸಿ ಕೆ.ಸಿ.ವಸಂತ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವೆಂಕಟಸ್ವಾಮಿ, ರೇಷ್ಮ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಸಿಡಿಪಿಒ ನವೀೀನ್ಕುಮಾರ್, ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಆರ್ಐ ಗಳಾದ ಮುನಿರೆಡ್ಡಿ, ಹರಿ ಇದ್ದರು.