ಶ್ರೀನಿವಾಸಪುರ: ಇಲ್ಲಿನ ರಾಘವೇಂದ್ರಸ್ವಾಮಿ ಮಠದಲ್ಲಿ ಸೋಮವಾರ ಶ್ರೀನಿವಾಸದೇವರ, ಪ್ರಾಣದೇವರ ಹಾಗೂ ರಾಘವೇಂದ್ರ ತೀರ್ಥರ ಮೃತ್ತಿಕಾ ಬಂದಾವನ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಗಣಪತಿ ಪೂಜೆ, ಪುಣ್ಯಾಹ, ಕಳಶ ಸ್ಥಾಪನೆ, ಹೋಮ, ಪೂರ್ಣಾಹುತಿ, ಪ್ರತಿಷ್ಠಾಪನೆ, ಮಹಾಭಿಷೇಕ, ಪಂಚಾಮೃತ ಅಭಿಷೇಕ, ಮೂಲ ದೇವರಿಗೆ ಮಹಾಪೂಜೆ, ನೈವೇದ್ಯ, ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪ್ರಾಣದೇವರು, ರಾಘವೇಂದ್ರಸ್ವಾಮಿ ಪಾದುಕೆಗಳಿಗೆ ನೂತನ ರಜತ ಕವಚ ಸಮರ್ಪಣೆ ಮಾಡಲಾಯಿತು. ರಾಯರ ಬೃದಾವನ ಪುನರ್ ಪ್ರತಿಷ್ಠಾಪನಾ ಕಾರ್ಯಕ್ಕೆ ಸುವಿದೇಂದ್ರತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ಗುರು ರಾಘವೇಂದ್ರ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್ನ ಶ್ರೀನಾಥ್, ಚೇತನ್ ವೆಂಕೋಬರಾವ್, ಬಿ.ಎನ್.ಸೂರ್ಯನಾರಾಯಣ, ರಾಜ್ಯ ಬ್ರಾಹ್ಮಣ ಮಹಾಸಭಾ ನಿರ್ದೇಶಕ ಕೆ.ಎನ್.ಅರುಣ್ ಕುಮಾರ್ ಶರ್ಮಾ, ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಕೆ.ದಿವಾಕರ್, ಖಜಾಂಚಿ ಗೋಪಿನಾಥರಾವ್, ತಾಲ್ಲೂಕು ಪುರೋಹಿತ ಪರಿಷತ್ ಅಧ್ಯಕ್ಷ ಸತೀಶ್ ಶಾಸ್ತ್ರಿ, ಕಾರ್ಯದರ್ಶಿ ಸಂತೋಷ್, ಜಿ.ಆರ್.ಮಧ್ವೇಶ್, ರಾಘವೇಂದ್ರ, ದಿನೇಶ್, ಕಾರ್ತಿಕ್ ಇದ್ದರು.