ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿಯ ಆದಿರಾಜಹಳ್ಳಿ ಗ್ರಾಮದ ಎ.ಆರ್.ನಾಗರಾ ಜ್ರವರು ಬೆಂಗಳೂರಿನ ಬ್ಯಾಟರಾಯನಪುರ ಸಂಚಾರಿ ಠಾಣೆಯ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಇತ್ತೀಚೆಗೆ ಅವರ ಠಾಣಾ ವ್ಯಾಪ್ತಿಯಲ್ಲಿ ಸಂಪ್ಗೆ ಬಿದ್ದಿದ್ದ ಮಗು ಜೀವ ಉಳಿಸಿ ಕೋಲಾರ ಜಿಲ್ಲೆ ಹೆಮ್ಮೆಯ ಪುತ್ರರಾ ಗಿದ್ದಾರೆ. ಘಟನೆ ವಿವರ : ಬೆಂಗಳೂರಿನ ಬ್ಯಾಡರಹಳ್ಳಿಯ ಬಿಇಎ ಲ್ ಲೇಔಟ್ನಲ್ಲಿ ಮಾರ್ಚ್ 6 ರಂದು ಬುಧವಾರ ಮಧ್ಯಾಹ್ನ 3-30ರಲ್ಲಿ ಸುಮಾರಿಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಪೋಲಿಸ್ ಠಾಣೆಗೆ ಕಡೆಗೆ ದ್ವಿಚಕ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್ನ ಮನೆಯೊಂದರ ಬಳಿ ಹಲವು ಮಹಿಳೆಯರು ಗುಂಪು ಗೂಡಿದ್ದಾರೆ
ಮಗು ಸಂಪ್ ಒಳಗೆ ಬಿದ್ದಿದೆ ಕಾಪಾಡಿ ಕಾ ಪಾಡಿ ಎಂದು ಕೂಗುತ್ತಿರುವುದನ್ನು ನಾಗರಾಜ್ ಗಮನಿಸಿದ್ದಾರೆ. ತಕ್ಷಣ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಮಾಹಿತಿ ಪಡೆದು ಸುಮಾರು 10 ಅಡಿ ಆಳದ ಸಂಪ್ಗೆ ಮಗುವೊಂದು ಬಿದ್ದು ನೀರಿನಲ್ಲಿ ಮುಳಗಿ ಒದ್ದಾಡುತ್ತಿರುವುದು ಕಂಡು ಬಂದಿದೆ. ಒಂದು ಕ್ಷಣವು ಯೋಚನೆ ಮಾಡದೆ ತಾವು ಧರಿಸಿದ್ದ ಸಂಚಾರಿ ಠಾಣಾ ಡ್ರೆಸ್ನಲ್ಲಿಯೆ ಸಂಪ್ನೊಳಗೆ ಇಳಿದು ಆ ಮಗುವನ್ನು ರಕ್ಷಿಸಿ ಮೇಲಕ್ಕೆ ತಂದಿದ್ದಾರೆ. ಬಳಿಕ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿ ದ್ದಾರೆ. ಸಕಾಲಕ್ಕೆ ನೀರಿನಿಂದ ಮೇಲೆ ಮಗುವನ್ನು ತೆಗೆದು ಆಸ್ಪತ್ರೆಗೆ ಸೇರಿಸಿ ಪ್ರಾಣಾಪಾಯದಿಂದ ಕೋಲಾರ ಜಿಲ್ಲೆಯ ಹೆಮ್ಮೆಯ ಪುತ್ರ ಸಂಚಾರಿ ಠಾಣಾ ಪಿಎಸ್ಐ ನಾಗರಾಜ್ ಅವರ ಧೈರ್ಯ, ಸಾಹಸ ಹಾಗೂ ಕಾರ್ಯಕ್ಕೆ ಸ್ಥಳೀಯರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.