ಶ್ರೀನಿವಾಸಪುರ : ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ , ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು. ಅಧಿಕಾರಿಗಳು ಯಾವುದೇ ಕಾರಣಕ್ಕೂ ತಮ್ಮ ಭೂಮಿಯನ್ನು ವಶಪಡಿಸಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಈ ಸಭೆಯ ಮೂಲಕ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೈಕೋಟ್ ವಕೀಲ ಶಿವಪ್ರಕಾಶ್ ಹೇಳಿದರು.
ಪಟ್ಟಣದ ನೌಕರರ ಭವನದಲ್ಲಿ ಭಾನುವಾರ ಭೂಮಿ ಹೋರಾಟ ಸಮಿತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೋ, ಅದಕ್ಕೆ ಅಧಿಕಾರಿಗಳು, ರೈತರು ಬದ್ಧರಾಗಬೇಕು, ಸಣ್ಣ ರೈತರು ಬದ್ದರಾಗಬೇಕಾಗಿದೆ. ಸರ್ಕಾರದ ತೀರ್ಮಾನಕ್ಕೆ ತಲೆಬಾಗಬೇಕಾಗುತ್ತದೆ ಎಂದರು. ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮೇಲೆ ಬೆದರಿಕೆ ಹಾಕುವುದು ಆಗಲಿ, ನಮ್ಮ ಮೇಲೆ ಬೆದರಿಕೆ ಹಾಕುವುದು ಆಗಲಿ ಆಗಬಾರದು ಎಂದು ಎಚ್ಚರಿಸಿದರು.
ಸರ್ಕಾರವೇ ಸಾಗುವಳಿ ಚೀಟಿಯ ಮುಖಾಂತರ ರೈತರಿಗೆ ಕೊಟ್ಟಂತಹ ಭೂಮಿಯನ್ನು ಅರಣ್ಯ ಇಲಾಖೆಯು ವಶಪಡಿಸಿಕೊಂಡಿರುವದು ಸರಿಯಲ್ಲ. ರೈತರು ತಮ್ಮ ಜೀವನಾಡಿಯಾಗಿ ಬೆಳದಂತಹ ಮಾವು ಗಿಡಗಳನ್ನು ನಾಶಪಡಿಸಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್ನಲ್ಲಿ ಅರಣ್ಯ ಇಲಾಖೆ ಡಿಎಫ್ಒ ಕಾನೂನು ಬಾಹೀರವಾಗಿ ರೈತರ ಭೂಮಿಯನ್ನ ವಶಪಡಿಸಿಕೊಂಡಿರುವುದ ಸರಿಯಲ್ಲ ಎಂಬ ವಾದ ವಿವಿದಾಗಳು ನಡೆದವು.
ಮುಖ್ಯ ಮಂತ್ರಿಗಳು ಜಂಟಿ ಸರ್ವೆ ಆಗುವತನಕ ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನ ವಶಪಡಿಸಿಕೊಳ್ಳುವ ಕೆಲಸ ಮಾಡಬಾರದು ಎಂದು ಹೇಳಿದ್ದರೂ ಸಹ ಅಧಿಕಾರಿಯು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ ಸರ್ಕಾರವು ಯಾವ ರೈತರು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ ಅಂತಹವರಿಗೆ ಭೂಮಿಯ ಸಾಗುವಳಿ ಚೀಟಿ ನೀಡಿದೆ. ಬಡವರಿಗೆ, ದಲಿತರಿಗೆ ಕಾನೂನು ಬದ್ದವಾಗಿ ಭೂಮಿಯನ್ನ ಹಂಚಿಕೆ ಮಾಡಿದೆ.
ಭೂಮಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್, ಭೂಮಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಟಿ.ಎಂ.ವೆಂಟೇಶ್, ಕಾರ್ಯದರ್ಶಿ ಬಿ.ಎಸ್.ಸೈಯದ್ ಫಾರಕ್, ರೈತ ಮುಖಂಡರಾದ ಮುಳಬಾಗಿಲು ಗೋಪಾಳ್, ಪಾಳ್ಯ ಗೋಪಾಲ್, ಸರ್ವಿಸ್ ಸ್ಟೇಷನ್ ಸತ್ಯಣ್ಣ ಇದ್ದರು.