

ಶ್ರೀನಿವಾಸಪುರ : ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ರವರು ಈ ದೇಶದಲ್ಲಿ ಅತಿ ಹೆಚ್ಚು ವಿದ್ಯಾವಂತರಾಗಿ, ಪದವಿಧರರಾಗಿ, ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯು ಮುನ್ನೆಡೆಯಲು ಸಂವಿಧಾನವನ್ನು ರಚಿಸಿ, ಮಹನೀಯ , ಮಹಾನುಭಾವನಿಗೆ ಶತಕೋಟಿ ನಮನಗಳು ತಿಳಿಸುತ್ತಾ, ಅವರ ಜಯಂತಿಯನ್ನು ಅದ್ದೂರಿಯಾಗಿ ನಾವೆಲ್ಲರೂ ಆಚರಣೆ ಮಾಡಬೇಕು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಎಂದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ರಾಷ್ಷ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಬಾಬು ಜಗಜೀವನ್ರಾಮ್ ಹಾಗು ಡಾ|| ಬಿ.ಆರ್.ಅಂಬೇಡ್ಕರ್ರವರ ಜಯಂತಿಗಳನ್ನು ಆಚರಣೆಯ ಬಗ್ಗೆ ಪೂರ್ವಬಾವಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಸಧ್ಯ ಇರುವ ಅಂಬೇಡ್ಕರ್ ಪಾರ್ಕ್ ಗೆ ಸ್ಥಳ ನಿಗದಿಪಡಿಸಿದ್ದು ನನ್ನ ಅವಧಿಯಲ್ಲಿ, ಸಧ್ಯ 50 ಲಕ್ಷರೂ ಅನುದಾನ ಇದ್ದು, 2 ಎಕರೆ ಜಮೀನಿನಲ್ಲಿ ಸುಂದರವಾದ ಭವನವನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ. ಒಂದು ತಿಂಗಳಲ್ಲಿ ಭವನ ನಿರ್ಮಿಸಲು ಬೇಕಾದ ರೂಪರೇಷಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲರೂ ಸೇರಿ ಒಗ್ಗಟ್ಟಾಗಿ ಅದ್ದೂರಿಯಾಗಿ ಆಚರಣೆ ಮಾಡೋಣ ಎಂದರು.
ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಮಾತನಾಡಿ ತಹಶೀಲ್ದಾರ್ ದಿ||ಕೌನ್ಸಲರ್ ಎಂ.ಶ್ರೀನಿವಾಸ್ರವರು ಅಂಬೇಡ್ಕರ್ ಪಾರ್ಕ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪಾರ್ಕ್ಗೆ ಗ್ರಾನೈಟ್, ಮೆಷ್, ಲಾನ್ ಮಾಡುವುದರ ಮೂಲಕ ಪಾರ್ಕ್ ಸುಂದರವಾಗಿ ಕಾಣಿಸಬೇಕು ಎಂಬ ಕನಸನ್ನು ಕಂಡಿದ್ದರು. ಕಳೆದ ಐದಾರು ವರ್ಷಗಳಿಂದಲೂ ಯಾವುದೇ ಅನುದಾನ ಬಂದಿಲ್ಲ. ಸದ್ಯ ನಾನು ಪುರಸಭೆ ಅಧ್ಯಕ್ಷನಾದ ಮೇಲೆ, ಪಾರ್ಕ್ ಅಭಿವೃದ್ಧಿಗಾಗಿ ನನ್ನ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದೇನೆ. ಅಂಬೇಡ್ಕರ್ ಜಯಂತಿಯನ್ನು ಗ್ರಾಂಡ್ ಆಗಿ ಮಾಡೋಣ , ಸ್ಟೇಜ್ ಕಾರ್ಯಕ್ರಮವನ್ನು ಸಹ ಅದ್ದೂರಿಯಾಗಿ ಮಾಡೋಣ ಎಂದರು.
ಬಾಬು ಜಗಜೀವನರಾಮ್ ಜಯಂತಿಯನ್ನ 5 ನೇ ತಾರೀಖು, ಅಂಬೇಡ್ಕರ್ ಜಯಂತಿಯನ್ನು 14 ತಾರೀಖು ರಂದು ಆಚರಣೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ 10 ವಿದ್ಯಾರ್ಥಿಗಳಿಗೆ ಸನ್ಮಾನ , ವಿವಿಧ ಹೋಬಳಿಗಳಿಂದ 10 ಪಲ್ಲಕ್ಕಿ, ಐದು ಕಲಾ ತಂಡಗಳಿಂದ ಅದ್ದೂರಿಯಾಗಿ ಮಾಡಿಸಲು ನಿರ್ಧರಿಸಲಾಯಿತು . ಅನ್ನಸಂತರ್ಪಣೆ ಹಮ್ಮಿಕೊಳ್ಳಲು ನಿರ್ಧರಿಸಲಾಯತು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎಸ್.ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಬೈರೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ರಾಜೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಟಿಪಿಒ ವೆಂಕಟಸ್ವಾಮಿ, ಇಂಜನೀಯರ್ಗಳಾದ ಕೃಷ್ಣಪ್ಪ, ಗೋವಿಂದಪ್ಪ, ಸಬ್ರಿಜಿಸ್ಟರ್ ರಾಮಕೃಷ್ಣಪ್ಪ, ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಸುಷ್ಮ, ಭೂ ಮಾಪನ ಇಲಾಖೆ ಅಧಿಕಾರಿ ವಸಂತ್ , ಎಪಿಎಂಸಿ ಕಾರ್ಯದರ್ಶಿ ಸಿ. ಕುಮಾರ್, ಆಧಿಜಾಂಬವ ಟ್ರಸ್ಟ್ನ ಅಧ್ಯಕ್ಷ ವಿ.ಮುನಿಯಪ್ಪ ಮುಖಂಡರಾದ ರಾಮಾಂಜಮ್ಮ, ಚಲ್ದಿಗಾನಹಳ್ಳಿ ಈರಪ್ಪ, ವರ್ತನಹಳ್ಳಿ ವೆಂಕಟೇಶ್, ಕೂಸ್ಸಂದ್ರ ರೆಡ್ಡಪ್ಪ, ಪೆದ್ದಪಲ್ಲಿ ನಾರಾಯಣಸ್ವಾಮಿ, ಬದ್ರಿನರಸಿಂಹ, ವೆಂಕಟೇಶ್, ಗಾಂಡ್ಲಹಳ್ಳಿ ಚಲಪತಿ, ಬಂದರ್ಲಾಪಲ್ಲಿ ಮುನಿಯಪ್ಪ, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ , ಶ್ರೀನಿವಾಸ್ ಇದ್ದರು.
