ಶ್ರೀನಿವಾಸಪುರ: ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಜಾಗ್ರಾತ ಕ್ರಮಗಳ ಬಗ್ಗೆ ಡಿಎಚ್ಒ, ಟಿಎಚ್ಒ, ಆಸ್ಪತ್ರೆಯ ಆಡಳಿತಾಧಿಕಾರಿಗಳೊಂದಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾಹಿತಿ ಪಡೆದು ಮಾತನಾಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಬೇಟಿ ನೀಡಿ ಕುಂದುಕೊರತೆ ಹಾಗು ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು.
ಆಸ್ಪತ್ರೆಗೆ ಸಮರ್ಪಕವಿದ್ಯುತ್ ಒದಗಿಸಲು 250 ಕೆವಿ ವಿದ್ಯುತ್ ಟ್ರಾನ್ಸ್ಫಾರಂ ಅಳವಡಿಕೆ ಮಾಡಲು ಹಾಗು ಆಸ್ಪತ್ರೆಗೆ 24 ಗಂಟೆ ವಿದ್ಯುತ್ ಸೌಲಭ್ಯ ಒದಗಿಸಲು ಪ್ರತ್ಯೇಕ ಎಕ್ಸ್ ಪ್ರೆಸ್ಸ ಲೈನ್ ಆಳವಡಿಸಲು ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ಮಾಡಿದರು.
ಆಸ್ಪತ್ರೆಗೆ ಲಾಂಡ್ರಿ ಮಿಷನ್ಗೆ ಅನುದಾನ ಬಿಡುಗಡೆ ಸೂಚನೆ ನೀಡಿದರು. ಶ್ರೀನಿವಾಸಪುರ 100 ಆಕ್ಸಿಜನ್ ಬೆಡ್ಗಳ ವ್ಯವಸ್ಥೆಗೆ ಹಾಗೂ ಗೌನಿಪಲ್ಲಿ ಆಸ್ಪತ್ರೆಯಲ್ಲಿ 30 ಆಕ್ಸಿಜನ್ ಬೆಡ್ಗಳ ವ್ಯವಸ್ಥೆಗೆ ತೀರ್ಮಾನಿಸಲಾಯಿತು.
ಡಿಎಚ್ಒ ವಿಜಯಕುಮಾರ್, ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಟಿಎಚ್ಒ ಶರೀಫ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಶ್ರೀನಿವಾಸ್, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ , ಜಗಜೀವನಪಾಳ್ಯ ರವಿ ಇತರರು ಇದ್ದರು