ಶ್ರೀನಿವಾಸಪುರ : ರಾಜ್ಯದಿಂದ ಆಂದ್ರ ಪ್ರದೇಶದ ಬಿ.ಕೊತ್ತಕೋಟ, ಮದನಪಲ್ಲಿಗೆ ಹೋಗುವ ರಸ್ತೆಯು ಆಂದ್ರದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಲಿದ್ದು ಮದನಪಲ್ಲಿ ಶಾಸಕರು ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಲಿಂಕ್ ರಸ್ತೆಗೆ ವ್ಯವಸ್ಥೆ ಮಾಡುತ್ತಿದ್ದು ಮದನಪಲ್ಲಿ ಶಾಸಕರಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕೃತಜ್ಞತೆ ಸಲ್ಲಿಸಿದರು.
ತಾಲೂಕಿನ ರಾಯಲ್ಪಾಡು ಹೋಬಳಿಯ ಮುದಿಮಡುಗು ಸಮೀಪದ ಆಂದ್ರದ ಮೊರಂಕಿಂದಪಲ್ಲಿ ಗ್ರಾಮದಲ್ಲಿ ಶನಿವಾರ ರಾಜ್ಯ , ಆಂದ್ರ ರಸ್ತೆಗೆ ಕಾಮಗಾರಿಗೆ ಜಂಟಿಯಾಗಿ ಚಾಲನೆ ನೀಡಿ ಮಾತನಾಡಿದರು.
ಅಲ್ಲದೆ ರಾಜ್ಯ ನೆರ ಹೊರೆಯ ಗ್ರಾಮಗಳಲ್ಲಿ ಬಾಂದವ್ಯ, ಬಾವ ಬೆಸೆಗೆ ಸಂಬಂದವಿದೆ ರಾಜ್ಯದ ೨-೫೦ ಕಿಲೋಮೀಟರ್ ರಸ್ತೆ ಕಾಮಗಾರಿ ಮಾಡಬೇಕಾಗಿದ್ದು ರಾಜ್ಯ ಮತ್ತು ಆಂದ್ರ ಪ್ರದೇಶದಕ್ಕೆ ಲಿಂಕ್ ರಸ್ತೆಯನ್ನು ವ್ಯವಸ್ಥೆ ಮಾಡುವ ಉದ್ದೇಶವನ್ನು ಹೊಂದಿದ್ದೇನೆ ಎಂದರು.
ಮದನಪಲ್ಲಿ ಶಾಸಕ ಷಹಜಾನಪಾಷ ಮಾತನಾಡಿ ರಸ್ತೆ ಇತರೆ ಮೂಲ ಭೂತ ಸೌಲಭ್ಯಗಳ ಕೊರತೆಯಿಂದ ನಾಗರೀಕರು ಬೇಸರಿಸುತ್ತಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವಿಬ್ಬರೂ ಸೇರಿ ಸರಿಪಡಿಸುವ ನಿಟ್ಟಿನಲ್ಲಿ ಕೈಜೋಡಿಸುತ್ತಿದ್ದೇವೆ ಎಂದರು.
ಗ್ರಾಮೀಣ ಭಾಗದ ಬಡಜನರಿಗೆ ತರಕಾರಿ ಹಣ್ಣು ಹಂಪರು ಸರಬರಾಜು ಮಾಡಲು ಮತ್ತು ರೈತರಿಗೆ ಅನುಕೂಲವಾಗುವಂತೆ ಈ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾ.ಪಂ ಮಾಜಿ ಸದಸ್ಯರಾದ ಮಂಜುನಾಥರೆಡ್ಡಿ, ರಾಜಶೇಖರರೆಡ್ಡಿ,ಮುದಿಮಡುಗು ಗ್ರಾಮ ಪಂಚಾಯತಿ ಸದಸ್ಯ ಎಲ್.ರಾಜೇಶ್, ಆರ್.ಐ. ಶಂಕರರೆಡ್ಡಿ, ಜಿಲ್ಲಾ ಪಂಚಾಯತ್ ಇಂಜಿನಿಯರ್, ಕೃಷ್ಣಪ್ಪ,ವಾಟರ್ ಬೋರ್ಡ್ ಇಂಜಿನಿಯರ್ ಸಂತೋಷ್, ಸರ್ಪಂಚ್ ಆನಂದರೆಡ್ಡಿ, ಮಂಡಲ್ ಅಧ್ಯಕ್ಷ ಈಶ್ವರ್, ಮುಖಂಡ ವೇಣು, ಜಯಣ್ಣ, ನಾಗೇಶ್ ,ರಾಜ್ಯ ಆಂದ್ರದ ಪಂಚಾಯಿತ್ ರಾಜ್, ಕಂದಾಯ ಅಧಿಕಾರಿಗಳು ಇದ್ದರು