ಶ್ರೀನಿವಾಸಪುರ : ಸಚಿವ ಕೆ.ಎಚ್. ಮುನಿಯಪ್ಪ ರವರನ್ನು ಅಸಭ್ಯ ವರ್ತನೆಯಿಂದ ಅವಾಚ್ಯ ಶಬ್ದಗಳನ್ನು ಮಾತನಾಡಿ ಹಾಡಿ ನಮ್ಮ ಸಮುದಾಯವನ್ನು ನಮ್ಮನ್ನು ಕೀಳಮಟ್ಟದಿಂದ ಬೈಯ್ದಿರುವ ಅಡವಿಚಂಬಕೂರು ಗ್ರಾಮದ ಗೋಪಾಲ್ ಊರುಫ್ ಯರ್ರಾಬರ್ರಿ ಗೋಪಾಲ್ ಮತ್ತು ಹರಿನಾಥರೆಡ್ಡಿ ಉರುಫ್ ಹರಿ ಜೆ.ಎಸ್ ರೆಡ್ಡಿ ರವರನ್ನ ಬಂದಿಸುವಂತೆ ಆದಿಜಾಂಭವ ಸೇವಾ ಸಮಿತಿಯ ಅಧ್ಯಕ್ಷ ಸಿ.ಮುನಿಯಪ್ಪ, ಪ್ರದಾನ ಕಾರ್ಯದರ್ಶಿ ಎನ್.ವೆಂಕಟರಮಣಪ್ಪ, ನೇತೃತ್ವದಲ್ಲಿ ಹಾಗು ಆಧಿಜಾಂಭವ ಚಾರಿಟೆಬಲ್ ಟ್ರಸ್ಟ್ನ ಸದಸ್ಯರು ಆಗ್ರಹಿಸಿದರು.
ಪಟ್ಟಣದ ಪೊಲೀಸ್ ಠಾಣೆಗೆ ಮಂಗಳವಾರ ಗೋಪಾಲ್ ಊರುಫ್ ಯರ್ರಾಬರ್ರಿ ಗೋಪಾಲ್ ಮತ್ತು ಹರಿನಾಥರೆಡ್ಡಿ ಉರುಫ್ ಹರಿ ಜೆ.ಎಸ್ ರೆಡ್ಡಿ ರವರು ಜಾತಿನಿಂದನೆ ಮಾಡಿದ್ದಾರೆಂದು ದೂರು ಸಲ್ಲಿಸಿ ಮಾತನಾಡಿದರು.
ದಿನಾಂಕ: 30-09-2024 ರ ಸೋಮವಾರ ದಂದು ಇದೇ! ತಾಲ್ಲೂಕು, ಅಡವಿಚಂಬಕೂರು ಗ್ರಾಮದ ಸಾರ್ವಣೀಯ ಜಾತಿಗೆ ಸೇರಿದ ಗೋಪಾಲ್ ಉರುಫ್ ಯಾರಾಬ್ರರಿ ಗೋಪಾಲ್ ಮತ್ತು ಹರಿನಾಥರೆಡ್ಡಿ ಉರುಫ್ ಹರಿ ಕೆ.ಎಸ್ ರೆಡ್ಡಿ ಇವರುಗಳು ದೌರ್ಜನ್ಯದಿಂದ ನಮ್ಮ ಸಮುದಾಯದ ನಾಯಕರನ್ನು ಮತ್ತು ಇದೇ ತಾಲ್ಲೂಕಿನ ನಮ್ಮ ಜಾತಿಯ ಮುಖಂಡರುಗಳನ್ನು ಫೆಸೇಬುಕ್ ಮೂಲಕ ಜಾತಿಯನ್ನು ನಿಂಧಿಸಿ ಅಸಭ್ಯವಾಗಿ ಈ ಸಮುದಾಯದ ಜನರು ಏನು ಕೆಲಸಕ್ಕೆ ಬಾರದೆ ಇರುವವರು ಇಂತಹ ಕಡಿಮೆ ಜಾತಿ ಇವರ ಕೈಯಿಂದ ಎನು ಆಗುವುದಿಲ್ಲ ಇವರ ಜಾತಿ ಮತ್ತು ಇವರು ನಾಯಕರಾದ ಕೆ.ಎಚ್. ಮುನಿಯಪ್ಪರವರನ್ನ ಅವಾಚ್ಯ ಶಬ್ದಗಳಿಂದ ಬೈಯ್ದುರಿತ್ತಾರೆ ದೂರಿದರು.
ಇಂತಹ ವ್ಯಕ್ತಿಗಳಿಂದ ಸಮಾಜಕ್ಕೆ ಹಾನಿಕರ ಆದ್ದರಿಂದ ನಮ್ಮ ಜಾತಿಯನ್ನು ಕೀಳಮಟ್ಟದಿಂದ ಮಾತನಾಡಿ ನಮ್ಮ ಸಮುದಾಯಕ್ಕೆ ಮಾನಸಿಕವಾಗಿ ನೋವನ್ನುಂಟು ಮಾಡಿರುವ ಗೋಪಾಲ್ ಮತ್ತು ಹರಿನಾಥರೆಡ್ಡಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ನಮಗೆ ಮತ್ತು ನಮ್ಮ ಸಮುದಾಯಕ್ಕೆ ನ್ಯಾಯವನ್ನು ಕೊಡಿಸಿಕೊಡಬೇಕೆಂದು ಖಜಾಂಚಿ ವೆಂಕಟೇಶಪ್ಪ, ಮುಖಂಡರಾದ ಜಿ.ಆರ್.ಶ್ರೀನಿವಾಸ್, ನಂಬಿಹಳ್ಳಿ ನಾರಾಯಣಸ್ವಾಮಿ, ಹೂಹಳ್ಳಿ ಕೃಷ್ಣಪ್ಪ, ಮೊಗಿಲಹಳ್ಳಿ ಶಿವಪ್ಪ, ನಾಗದೇನಹಳ್ಳಿ ವೆಂಕಟರಮಣಪ್ಪ, ಮದ್ದೇಪಲ್ಲಿ ನಾರಾಯಣಸ್ವಾಮಿ, ಆಲವಾಟ ಲಕ್ಷ್ಮಣ, ಬಟ್ಟಗುಟ್ಟಪಲ್ಲಿ ನರಸಿಂಹಪ್ಪ ಆಗ್ರಹಿಸಿದರು.