ಶ್ರೀನಿವಾಸಪುರ : ಮಕ್ಕಳಿಗೆ ವ್ಯವಹಾರ ಜ್ಞಾನ ಬೆಳೆಯಲು ಈ ಕಾರ್ಯಕ್ರಮವು ಅನುಕೂಲವಾಗಲಿದ್ದು ಪೋಷಕರು ತಮ್ಮ ಮಕ್ಕಳನ್ನ ಸಹಕರಿಸುವಂತೆ ಎಪಿಜಿ ಅಬ್ದಲ್ ಕಲಾಂ ಟ್ರಸ್ಟ್ನ ಉಪಾಧ್ಯಕ್ಷ ಇಲಿಯಾಸ್ ಪಾಷ ಕರೆ ನೀಡಿದರು.
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ಸರ್ಕಾರಿ ಉರ್ದು , ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶನಿವಾರ ಮೆಟ್ರಿಕ್ ಮೇಳವನ್ನು ಶಾಲಾವತಿಯಿಂದ ಆಯೋಜನೆ ಮಾಡಲಾಗಿತ್ತು.
ಮುಖ್ಯ ಶಿಕ್ಷಕ ಮಹ್ಮದ್ ಸಾಧಿಕ್ ಮಾತನಾಡಿ ಈ ಶಾಲೆಯ ಮಕ್ಕಳಿಗೆ ಎಪಿಜಿ ಅಬ್ದಲ್ ಕಲಾಂ ಟ್ರಸ್ಟ್ನವರು ಶೈಕ್ಷಣಿಕವಾಗಿ ಸಹಕಾರ ನೀಡುತ್ತಿದ್ದು, ವಿದ್ಯಾರ್ಥಿಗಳು ದಾನಿಗಳು ನೀಡುವಂತಹ ದಾನಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಎಪಿಜಿ ಅಬ್ದಲ್ ಕಲಾಂ ಟ್ರಸ್ಟ್ನ ಖಜಾಂಚಿ ಎಬಿಎಸ್ರಿಜ್ವಾನ್, ಎಸ್ಡಿಎಂಸಿ ಅಧ್ಯಕ್ಷ ಹಿದಾಯುತುಲ್ಲಾ, ಸಿಆರ್ಪಿ ನಾಜೀನಾ ಬೇಗಂ , ಶಿಕ್ಷಕರಾದ ರಿಹಾನಾಖಾನಮ್, ಅಸ್ಮಸುಲ್ತಾನ, ಭಾರತಮ್ಮ, ನುಸ್ರತ್ ಅಮ್ಮಜಾನ್, ಕುಬ್ರಾಐಮನ್, ಗುಲ್ಅಭ್ಷ ಇದ್ದರು.