ಶ್ರೀನಿವಾಸಪುರ 2 : ಪಟ್ಟಣ ತಹಶೀಲ್ದಾರ್ ಕಛೇರಿಯ ಮುಂಭಾಗ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪಟ್ಟಣದಲ್ಲಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡಿಸಿ ತಹಶೀಲ್ದಾರ್ ಶರೀನ್ತಾಜ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಯುವ ಘಟಕದ ಅಧ್ಯಕ್ಷ ಸುಬ್ರಮಣಿ, ಮಾತನಾಡಿ ಪೋಸ್ಟ್ ಆಫೀಸ್ ಕಛೇರಿ ಮುಂಭಾಗದ ರಸ್ತೆ ಹಾಗು ಪಟ್ಟಣದ ಕೆಲ ರಸ್ತೆಗಳು ಎರಡು ಮೂರು ವರ್ಷಗಳಿಂದಲೂ ತುಂಬಾ ಹದಗೆಟ್ಟಿದ್ದು, ಅನೇಕ ಬಾರಿ ಸಂಬಂದ ಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ರೀತಿಯಾದ ಉಪಯೋಗವಾಗಿಲ್ಲ ಎಂದು ಆರೋಪಿಸುತ್ತಾ,
ಈ ರಸ್ತೆಯಲ್ಲಿ ಪ್ರತಿ ದಿನ ಶಾಲಾ ಮಕ್ಕಳು, ಆಸ್ಪತ್ರೆಗೆ ಹೋಗಿ ಬರುವ ರೋಗಿಗಳು ಹಾಗೂ ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರು ಓಡಾಡುತ್ತಾರೆ . ಈ ರಸ್ತೆಯಲ್ಲಿ ಬಿದ್ದು ಅವಘಡಗಳು ನಡೆದಿರುವ ಅನೇಕ ಘಟನೆಗಳು ಇದ್ದು, ಈ ತರಹದ ಅವಘಡಗಳು ನಡೆಯುತ್ತಿದ್ದರು ಸಂಬಂದ ಪಟ್ಟ ಇಲಾಖೆ ಮಾತ್ರ ಕಣ್ಣು ಮಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.
ಮುಂದಿನ ದಿನಗಳ ಪಟ್ಟಣದಲ್ಲಿ ಹಾಳಾಗಿರುವ ರಸ್ತೆಗಳನ್ನು ಸಂಬಂದಪಟ್ಟ ಇಲಾಖೆಗೆ ಸರಿಪಡಿಸುವಂತೆ ತಹಶೀಲ್ದಾರ್ರವರು ಸೂಚನೆ ನೀಡಿ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಸಲು ಸೂಚಿಸುವಂತೆ ಮನವಿ ಮಾಡಿದರು. ಇಲ್ಲಾವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ವೇದಿಕೆವತಿಯಿಂದ ಹೋರಾಟ ನಡೆಸುವುದಾಗಿ ತಿಳಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಶ್ರೀನಾಥ್ , ಗೌರವಾಧ್ಯಕ್ಷ ರಾಮಾಂಜಿ, ಜಿಲ್ಲಾ ಕಾರ್ಯದರ್ಶಿ ಸುನಿಲ್ಕುಮಾರ್, ಜಿಲ್ಲಾಧ್ಯಕ್ಷ ನರಸಿಂಹರಾಜು, ಸದಸ್ಯರಾದ ಸಂತೋಷ್, ಮಹೇಶ್, ಮಂಜುನಾಥ್, ಧನಂಜಯ್, ಆದರ್ಶ, ಸುಜಿತ್ ಇದ್ದರು.