

ಶ್ರೀನಿವಾಸಪುರ : ತಾಲೂಕಿನ ಚಿಂತಾಮಣಿ ರಸ್ತೆಯ ಕಲ್ಲೂರು ಗ್ರಾಮದ ಸಮೀಪ ಶುಕ್ರವಾರ ಸಂಜೆ ತಿರುಮಲದಿಂದ ಚಿಕ್ಕಬಳ್ಳಾಪುರ ಹೋಗುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಜಿಂಕೆ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೆ ಮೃತ ಪಟ್ಟಿದೆ.
ಜಿಂಕೆಯು ರಸ್ತೆ ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅರಣ್ಯ ಅಧಿಕಾರಿ ಅನಿಲ್ಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ, ಕಾರು ಚಾಲಕನನ್ನು ವಿಚಾರಣೆಯ ಸಂಬಂದ ಶ್ರೀನಿವಾಸಪುರ ಅರಣ್ಯ ಇಲಾಖಾ ಕಚೇರಿಗೆ ಕರೆದ್ಯೂಲಾಯಿತು.
