

ಶ್ರೀನಿವಾಸಪುರ : ಪ್ರಪಂಚಕ್ಕೆ ಮಾವಿನ ರುಚಿಯನ್ನ ಕೊಡುತ್ತಿರುವ ಶ್ರೀನಿವಾಸಪುರ ಇಂದು ಡ್ರ್ಯಾಗನ್ ಫ್ರೊಟ್ನ ಸಂವೃದ್ಧಿ ಬೆಳೆಯನ್ನು ಬೆಳೆಯುವ ಮೂಲಕ ತಾಲೂಕಿನ ದೇವಲಪಲ್ಲಿ ಗ್ರಾಮದ ಐಟಿಐ ಓದಿರುವ ಯುವ ರೈತ ವಿ.ಆಂಜನೇಯ ಗಮನ ಸಳೆಯುತ್ತಿದ್ದಾರೆ.
ತಾಲೂಕಿನಲ್ಲಿ ಯಾವುದೇ ರೀತಿಯಾದ ನದಿಗಳು, ನಾಲೆಗಳು ಇಲ್ಲದೆ ಕೇವಲ ಮಳೆ ಯಾಶ್ರಿತ ಬೆಳೆಗಳನ್ನು ಇನ್ನು ಕೆಲ ರೈತರು ಕೊಳವೆ ಬಾವಿಗಳನ್ನು ಬಳಸಿ ಬೆಳೆಗಳನ್ನು ಬೆಳೆಯುತ್ತಾರೆ. ಇನ್ನು ಕೆಲವರು ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಇದ್ದು , ಯಾವುದೇ ರೀತಿಯಾದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ಸಂಕಷ್ಟದಲ್ಲಿ ಇರುತ್ತಾರೆ.
ಆದರೆ ದೇವಲಪಲ್ಲಿ ಗ್ರಾಮದ ಯುವ ರೈತ ವಿ.ಆಂಜನೇಯ ಎಂಬುವವರು ಪಕ್ಕದ ಜಮೀನಿನಿಂದ ನೀರು ಪಡೆದು ಒಂದು ಎಕರೆಯಲ್ಲಿ 500 ಕಂಬಗಳು, 2000 ಗಿಡಗಳನ್ನು ಹಾಕಿದ್ದು, ಮೊದಲ ವರ್ಷ 8 ರಿಂದ 10 ಲಕ್ಷ ಬಂಡವಾಳ ಖರ್ಚುಮಾಡಿ, ಒಂದು ವರ್ಷ ಗಿಡಗಳನ್ನು ಪೋಷಣೆ ಮಾಡಿ ಪ್ರಥಮ ಇಳುವರಿಯಲ್ಲಿ ಕಳೆದ 10 ದಿನಗಳ ಹಿಂದೆ 2 ಕ್ವಿಂಟಾಲ್ ಗಳ ಹಣ್ಣುಗಳನ್ನು ಬೆಂಗಳೂರಿನ ಕೆಆರ್.ಮಾರುಕಟ್ಟೆಗೆ ಹಾಕಿದ್ದಾರೆ. ಸೋಮವಾರ 1 ಟನ್ ಡ್ರ್ಯಾಗನ್ ಫ್ರೋಟ್ಗಳನ್ನು ಕಿತ್ತು ಬೆಂಗಳೂರಿನ ಕೆಆರ್. ಮಾರುಕಟ್ಟೆಗೆ ಹಾಕಲಾಯಿತು. ಎರಡ ನೇ ವರ್ಷದಿಂದ 15 ಲಕ್ಷ ಲಾಭ ಪಡೆಯಬಹುದು.
ವಿ.ಆಂಜನೇಯ ಪತ್ರಿಕೆಯೊಂದಿಗೆ ಮಾತನಾಡಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿದೇರ್ಶಕ ಶ್ರೀನಿವಾಸನ್ ಮಾರ್ಗದರ್ಶನದಿಂದ ನರೇಗಾ ಯೋಜನೆಯಡಿಯಲ್ಲಿ ಒಂದು ಎಕರೆ 1ಲಕ್ಷ 53 ಸಾವಿರ ಪ್ರೋತ್ಸಾಹ ಧನವನ್ನು ಪಡೆದು ಗಿಡಗಳನ್ನು ಬೆಳೆಸಲಾಗುತ್ತಿದೆ ಎಂದರು. ಇದರ ಸದುಪಯೋಗವನ್ನು ಇತರೆ ರೈತರು ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಅಲ್ಲದೆ ಈ ಬೆಳೆಗೆ ಕಾಡು ಪ್ರಾಣಿಗಳ, ಹಕ್ಕಿಗಳ, ಕೋತಿಗಳ ಕಾಟ ಇರುವುದಿಲ್ಲ. ನೀರು ಕಡಿಮೆ ಅವಶ್ಯಕತೆ ಇದ್ದು, ವಾರಕ್ಕೆ ಎರಡು ಸಲ ಅರ್ಧ ಗಂಟೆ ನೀರು ಬಿಟ್ಟರೆ ಸಾಕು. ಕೊಳವೆಬಾವಿಯಲ್ಲಿ ನೀರು ಕಡಿಮೆ ಇರುವ ರೈತರು ಸಹ ಬೆಳೆಯ ಬಹುದು.
ಯಲಹಂಕದ ಶ್ರೀನಿವಾಸರವರ ಬಳಿ ಒಂದು ಗಿಡಕ್ಕೆ 70 ರೂ ನಂತೆ 2000 ಗಿಡಗಳನ್ನ ತೆಗೆದುಕೊಂಡು ಬಂದು ಒಂದು ವರ್ಷ ಗಿಡಗಳನ್ನು ಕಾಲಕಾಲಕ್ಕೆ ನೀರು, ಗೊಬ್ಬರವನ್ನು ಹಾಕಿ ಸಂವೃದ್ಧಿಯಾಗಿ ಬೆಳಸಿ, ಗಿಡಗಳಿಗೆ ಹಸು ಮತ್ತು ಕುರಿಗಳ ಗೊಬ್ಬರವನ್ನು ಡಿ ಕಾಂಫೋಸ್ ಮಾಡಿ, ಇದಕ್ಕೆ ಫಂಗಿಸೈಡಸ್ಸ್ಗಳಾದ ಡ್ರೈಕೋಡರ್ಮಾ, ಸೋಡಾ ಮನ್ಸ್ನ್ನು ಮಿಕ್ಸಿಮಾಡಿ 6 ತಿಂಗಳು ಕಾಲ ಸಂರಕ್ಷಿಸಲಾಗುತ್ತದೆ. ಆ ಗೊಬ್ಬರದ ಮೇಲೆ ವಾರಕ್ಕೊಮ್ಮೆ ನೀರನ್ನ ಇದರ ಮೇಲೆ ಬಿಟ್ಟು ಹದ ಮಾಡಲಾಗುತ್ತದೆ. ಆ ಗೊಬ್ಬರವನ್ನ ಗಿಡಗಳಿಗೆ ಹಾಕಿದಾಗ ಹೆಚ್ಚು ಪರಿಣಾಮಕಾರಿಯಾಗಿ ಡಿ ಕಾಂಫೋಸ್ ಗೊಬ್ಬರವನ್ನ ಹಾಕಿದಾಗ ಕಾಯಿ ಒಳ್ಳೆಯ ಗಾತ್ರ ಬರಲು ಕಾರಣವಾಗುತ್ತದೆ. ತಿಪ್ಪೆಗೊಬ್ಬರ ಬಳಕೆ ಗಿಂತ ಡಿ ಕಾಂಫೋಸ್ ಗೊಬ್ಬರ ಹೆಚ್ಚು ಪರಿಣಾಮಕಾರಿ ಎಂದು ಮಾಹಿತಿ ನೀಡಿದರು.
ನಮ್ಮ ರೈತರು ಬೇರೆ ಬೆಳಗಳಿಂದ ನಷ್ಟ ಆಗುತ್ತಿದ್ದಾರೆ. ಈ ಬೆಳೆಯು ರೈತರನ್ನ ಆರ್ಥಿಕವಾಗಿ ಸಭಲರಾಗುಲು ಈ ಬೆಳೆಯು ಕಾರಣವಾಗುತ್ತದೆ. ಈ ಬೆಳೆಗೆ ಮಾರುಕಟ್ಟೆ ಸಂಬಂದಿಸಿದಂತೆ ಯಾವುದೇ ತೊಂದರೆಗಳು ಇಲ್ಲ. ಒಂದು ಕಾಯಿ 300 ಗ್ರಾಂನಿಂದ 800 ಗ್ರಾಂ ವರೆಗೂ ತೂಕವಿದೆ, ನಮಗೆ 1 ಕೆಜಿ 180 ರೂ ಸಿಗುತ್ತಿದೆ.
ನೋಟ್ 1: ಬೇರೆ ಬೆಳೆಗಳಲ್ಲಿ ನಷ್ಟ ಇದ್ದೇ ಇರುತ್ತದೆ. ಆದರೆ ಈ ಬೆಳೆಯಲ್ಲಿ ನಷ್ಟ ಎಂಬುದು ಇರುವುದಿಲ್ಲ. 1 ಕೆಜಿ ಎಂಬತ್ತು, ನೂರು ರೂ ಹೋದರು ಸಹ ವರ್ಷಕ್ಕೆ ಕನಿಷ್ಟ ಪಕ್ಷ ಒಂದು ಟನ್ಗೆ 8 ಲಕ್ಷ ಲಾಭ ಇದ್ದೇ ಇರುತ್ತದೆ . ಡ್ಯ್ರಾಗನ್ ಫ್ರೊಟ್ ಬೆಳೆ ಬೆಳೆದರೆ ಉಪಯುಕ್ತ ಇದ್ದೇ ಇರುತ್ತದೆ. ಬೇರೆ ಬೆಳೆಗಳು ಬೆಳದು ನಷ್ಟ ಆಗುವುದರಿಂದ ಈ ಬೆಳೆಯನ್ನು ಬೆಳೆದರೆ ಲಾಭ ಇದ್ದೇ ಇರುತ್ತದೆ . ಪ್ರಾರಂಭದಲ್ಲಿ ಎಂಟು ರಿಂದ ಹತ್ತು ಲಕ್ಷ ಬಂಡವಾಳ ಹಾಕಬೇಕು. ಒಂದು ಬಾರಿ ಬಂಡವಾಳ ಮಾಡಿದರೆ 30 ವರ್ಷ ಇರುತ್ತದೆ ಈ ಬೆಳೆಯಿಂದ ಲಾಭ ಪಡೆಯಬಹುದು ಎಂದು ರೈತರಿಗೆ ಸಲಹೆ ನೀಡಿದರು.
