ಶ್ರೀನಿವಾಸಪುರ : ರಾಜ್ಯ ಕಾಂಗ್ರೆಸ್ ಪಕ್ಷವೇ ತಾಲೂಕಿನಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಅನುವು ಮಾಡಿಕೊಟ್ಟಿದ್ದು ಈ ವಿಚಾರದಲ್ಲಿ ಮುಖ್ಯ ಮಂತ್ರಿಗಳಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ . ಆದರೆ ತಾಲೂಕಿನ ಕಾಂಗ್ರೆಸ್ ಪಕ್ಷದ ನಾಯಕರೇ ತಾಲೂಕಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಡ್ಡಪಡಿಸುತ್ತಿರುವುದು ಎಷ್ಟು ಸರಿ ಎಂದು ಸಾಮಾಜಿಕ ಹೋರಾಟಗಾರ ಹೋಳೂರು ಸಂತೋಷ್ ಪ್ರಶ್ನಿಸಿದರು.?
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ವಿವಿಧ ಕನ್ನಡ ಪರ ಸಂಘಟನೆಗಳಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ವ್ಯಕ್ತಿ ವರ್ಚಿಸಿಗೋಸ್ಕರ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿರುವುದು ಎಷ್ಟು ಸರಿ? ತಾಲೂಕಿನಲ್ಲಿ ಕೈಗಾರಿಕ ವಲಯ ಸ್ಥಾಪನೆ ಆದರೆ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿ ತಮ್ಮ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ ಇದನ್ನ ಸಹಿಸದ ಕೆಲ ಸ್ವಾರ್ಥಿಗಳು ತಾಲೂಕಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಡ್ಡಪಡಿಸುತ್ತಿದ್ದಾರೆ ಎಂದು ಆರೋಪಿಸಿ, ಪಕ್ಷ ಬೇದ ಮರೆತು ತಾಲೂಕನ್ನು ಅಭಿವೃದ್ದಿಪಡಿಸಲು ಕೈಜೋಡಿಸವಂತೆ ಮನವಿ ಮಾಡಿದರು.
ಎಂದು ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ರಾಜ್ಯ ಪ್ರದಾನ ಕಾರ್ಯದರ್ಶಿ ಸಾದಿಕ್ ಅಹಮ್ಮದ್ ಮಾತನಾಡುತ್ತಾ ಈ ಹಿಂದೆ 2108 ರ ಸಮಯದಲ್ಲಿ ಕಾಂಗ್ರೆಸ್ ಪಕ್ಷದವರು ತಾಲೂಕಿನಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಯನ್ನು ತುರಾತುರಿ ಗುದ್ದಲಿ ಪೂಜೆ ಮಾಡಿ ಹೊರಟರು ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರೈಲ್ವೆ ಕೋಚ್ ಫ್ಯಾಕ್ಟರಿಯನ್ನು ಯಾರು ಪ್ರಾರಂಭ ಮಾಡಬೇಕು ಎಂದು ಹಾತೊರಯುತ್ತಿದ್ದರೋ ಅವರೆ ಪ್ರಸ್ತುತ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಅಡ್ಡಪಡಿಸುತ್ತಿದ್ದಾರೆ ಎಂದು ಟೀಕಿಸಿ , ಆಂದು ರೈಲ್ವೆ ಕೋಚ್ ಫ್ಯಾಕ್ಟರಿ ಬೇಕಾಗಿರುವುದೇನು ಇಂದು ಕೈಗಾರಿಕೆಗಳು ಬೇಡದಿರುವುದು ಏನು ಎಂದು ಪ್ರಶ್ನಿಸಿದರು?
ಶ್ರೀನಿವಾಸಪುರ ಪಟ್ಟಣವು ಅಭಿವೃದ್ಧಿಯಾಗಿ ನಗರಸಭೆಯಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಎಲ್ಲರೂ ಸ್ವಾರ್ಥವನ್ನು ಬಿಟ್ಟು ತಾಲೂಕನ್ನು ಅಭಿವೃದ್ಧಿಪಡಿಸೋಣ ಎಂದು ಕರೆನೀಡಿದರು.