ಶ್ರೀನಿವಾಸಪುರ : ಪ್ರಪಂಚದಲ್ಲಿಯೇ ಮಾವಿಗೆ ವಿಶ್ವ ಪ್ರಸಿದ್ದಿಯಾಗಿದೆ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಆದರೆ ಮೂಲಭೂತ ಸೌಲಭ್ಯಗಳು ಕೊರತೆ ಎದ್ದು ಕಾಣುತ್ತದೆ.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮಾವು ವಹಿವಾಟ ಪ್ರಾರಂಭವಾಗಿ ಎರಡು ತಿಂಗಳು ಕಳೆಯುತ್ತಿದೆ ಎಪಿಎಂಸಿಯಲ್ಲಿ ಮಾತ್ರ ಮೂಲಭೂತ ಸೌಲಭ್ಯಗಳು ಇಲ್ಲದೆ ಕೂಲಿ ಕಾರ್ಮಿಕರು ಬಯಲಿನಲ್ಲಿಯೇ ಶೌಚಾಲಯವನ್ನು ಅವಲಂಬಿಸಿದ್ದಾರೆ. ಕನಿಷ್ಟ ನೀರು ಸಹ ಸಿಗುತ್ತಿಲ್ಲ. ಎಲ್ಲಂದರಲ್ಲಿ ಕಸಕಡ್ಡಿ ಚರಂಡಿ ತುಂಬಿ ಗೊಬ್ಬನಾರುತ್ತದೆ. ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯನ್ನು ಉಂಟು ಮಾಡಿದೆ.
ಒಂದೇ ಸ್ಥಳದಲ್ಲಿ ಬಟ್ಟೆ ಒಗೆಯುವುದು ಸ್ನಾನ ಮಾಡುವುದು ನೀರು ಹಿಡಿಯುವುದು
ಎಪಿಎಂಸಿ ಮಾರುಕಟ್ಟೆಯಲ್ಲಿ ನೀರಿನ ಟ್ಯಾಂಕ್ ಇದ್ದು ಸುಮಾರು ನೂರಾರು ಮಂದಿ ಕೂಲಿ ಕಾರ್ಮಿಕರು ತಣ್ಣೀರು ಸ್ನಾನ ಮಾಡುವುದು ಬಟ್ಟೆ ಒಗೆಯುವುದು ಪಾತ್ರೆ ತೊಳೆದುಕೊಳ್ಳುವುದು ಮಾಡಿಕೊಳ್ಳುತ್ತಿದ್ದಾರೆ. ಆದರೆ ಒಂದೆ ಜಾಗದಲ್ಲಿ ನೀರು ಸರಬರಾಜು ಮಾಡುವ ಕಾರಣ ಜನ ಸಂದಣಿ ಹೆಚ್ಚಾಗಿದೆ ಕಾರ್ಮಿಕರು ಕೆಲಸ ಬಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕಂಡು ಬಂದಿದೆ.
ಮಾರುಕಟ್ಟೆಯಲ್ಲಿ ರೈತರು, ಸಾರ್ವಜನಿಕರು, ಕಾರ್ಮಿಕರು, ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಕಾರಣ ರಸ್ತೆಯಲ್ಲಿ ನೂರಾರು ಟ್ಯಾಕ್ಟರ್, ಲಾರಿ, ಬೃಹತ್ ವಾಹನಗಳು ಸಂಚಾರ ಮಾಡುತ್ತಿದ್ದರಿಂದ ದೂಳು ಹೆಚ್ಚಿನದಾಗಿ ಬರುತ್ತಿದ್ದು, ಕನಿಷ್ಟ ಪಕ್ಷ ಎಪಿಎಂಸಿ ಅಧಿಕಾರಿಗಳು ಗಮನಹರಿಸಿ ನೀರನ್ನು ಹಾಕದೆ ಇದಕ್ಕೂ ನಮಗೂ ಸಂಬಂದವಿಲ್ಲದಂತೆ ಕಛೇರಿಯಲ್ಲಿ ಕುಳಿತಿದ್ದಾರೆಂದು ರೈತರು ಆರೋಪಿಸಿದ್ದಾರೆ.
ನೋಟ-1
ಎಪಿಎಂಸಿ ಮಾರುಕಟ್ಟೆಯಲ್ಲಿ ಎರಡು ಕಡೆ ಶೌಚಾಲಯ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ನಾನ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಸ್ವಚ್ಚತೆ ಕಾರ್ಯವನ್ನು ಮಾಡುತ್ತಿದ್ದೇವೆ. ಮಂಡಿ ಮಾಲೀಕರಿಗೆ ಸ್ವಚ್ಚತೆಯನ್ನು ಕಾಪಾಡುವಂತೆ ಸಭೆಯನ್ನು ಕರೆದು ಕಟ್ಟುನಿಟ್ಟಾಗಿ ನಿರ್ದೇಶನ ಮಾಡಿದ್ದೇವೆ. ಇದನ್ನು ಪಾಲನೆ ಮಾಡದೆ ಇರುವ ಮಂಡಿ ಮಾಲೀಕರಿಗೆ ನೋಟೀಸ್ನ್ನು ನೀಡಿದ್ದೇವೆ. ನಮ್ಮ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿಂದ ಎಲ್ಲವನ್ನು ನೋಡುವುದಕ್ಕೆ ಆಗುತ್ತಿಲ್ಲ. ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆಂದ
ಎಪಿಎಂಸಿ ಕಾರ್ಯದರ್ಶಿ ಬಿ.ಶಶಿಕಳಾ.
ನೋಟ-2
ಮಾವು ವಹಿವಾಟು ನಡೆಯುವ ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳು ಮರಿಚಿಕೆಯಾಗಿದೆ. ನೂರಾರು ಕೂಲಿ ಕಾರ್ಮಿಕರು ಕೆಲಸವನ್ನು ಅರಿಸಿ ಮಾರುಕಟ್ಟೆಗೆ ಬಂದಿದ್ದಾರೆ. ಆದರೆ ಇಲ್ಲಿ ನೋಡಿದರೆ ಎಲ್ಲಂದರೆ ಅಲ್ಲಿ ಗೊಬ್ಬುನಾರುತ್ತದೆ. ಚರಂಡಿಗಳು ತುಂಬಾ ಕೊಳೆತ ಮಾವು ತುಂಬಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲದೆ ಮಾರುಕಟ್ಟೆ ಪ್ರಾಂಗಣದ ಅಂಗಡಿಗಳ ಸಂದಿ ಗೊಂದಿ, ಬಯಲು ಪ್ರದೇಶವನ್ನು ಅವಲಂಬಿಸಿದ್ದಾರೆ. ಈ ಮಾರುಕಟ್ಟೆಗೆ ವಿಶ್ವದಲ್ಲಿಯೇ ಮಾವಿನ ನಗರ ಎಂದು ಹೆಸರುವಾಸಿಯಾಗಿದೆ.ಆದರೆ ಇದಕ್ಕೆ ಕಪ್ಪು ಚುಕ್ಕೆ ತರುತ್ತಿದೆ. ಶುದ್ದ ಕುಡಿಯುವ ನೀರಿನ ಘಟಕ ಕೆಲಸ ಮಾಡುತ್ತಿಲ್ಲ. ರೈತರ ಭವನ ಬಳಿಕೆಯಾಗುತ್ತಿಲ್ಲ. ಒಟ್ಟಾರೆಯಾಗಿ ಈ ಎಪಿಎಂಸಿ ಮಾರುಕಟ್ಟೆಯ ಸೌಲಭ್ಯಗಳ ಬಗ್ಗೆ ಹೇಳುವರು ಕೇಳುವರು ಇಲ್ಲದಂತಾಗಿದೆ. ಅಧಿಕಾರಿಗಳು ಕೂಡಾ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದೇವೆಂದು ಕಛೇರಿಯಲ್ಲಿ ಕುಳಿತು ಕಾಲಹರಣ ಮಾಡುತ್ತಿರುವುದು ವಿಪರ್ಯಾಸವಾಗಿದೆಂದು.
ರೈತ ಸೇನೆಯ ಜಿಲ್ಲಾಧ್ಯಕ್ಷ ಚಲ್ದಿಗಾನಹಳ್ಳಿ ಸಿ.ವಿ. ಪ್ರಭಾಕರ ಗೌಡ