ಶ್ರೀನಿವಾಸಪುರ : ದೇಶದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆಯೂ ಸಹಾ ಹೊಂದಿದೆ ದೇಶ ವಿದೇಶಗಳಿಗೆ ಇಲ್ಲಿಂದಲೇ ಮಾವು ರಫ್ತು ಮಾಡುವ ಕಾರಣ ಪ್ರಪಂಚ ಮಾವಿನ ಹಣ್ಣಿನ ನಗರವೆಂದೇ ಶ್ರೀನಿವಾಸಪುರ ಪ್ರಖ್ಯಾತಿಯಾಗಿದೆ ಎಂದು ಕರವೇ ಸಮರ ಸೇನೆ ತಾಲೂಕು ಪ್ರದಾನ ಕಾರ್ಯದರ್ಶಿ ವಿ.ಎನ್.ಜಗದೀಶ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗ ಶುಕ್ರವಾರ ಕನ್ನಡಪರ ಸಂಘಟನೆಗಳ ಸದಸ್ಯರು ಪಟ್ಟಣದ ಚಿಂತಾಮಣಿ ಬೆಂಗಳೂರು ರಸ್ತೆ ಬದಿಗಳಲ್ಲಿ ವಾಹನಗಳನ್ನು ಚಾಲಕರು ನಿಲ್ಲಿಸುತ್ತಿದ್ದು ಇದರಿಂದ ಆಗುವ ಟ್ರಾಫಿಕ್ ಸಮಸ್ಯೆ ಬಗೆಹರಿಸುವಂತೆ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆ ಕೋಲಾರ ಜಿಲ್ಲೆ ಕೋಲಾರ ಜಿಲ್ಲೆಯಲ್ಲಿ ವಿಶೇಷವಾಗಿ ಶ್ರೀನಿವಾಸಪುರ ತಾಲ್ಲೂಕಿನ ರೈತರು ಶೇಕಡಾ 60 ಕ್ಕೂ ಹೆಚ್ಚು ರೈತರು ಮಾವು ಬೆಳೆಯುತ್ತಿದ್ದು ಪ್ರತಿ ವರ್ಷ ಮೇ ತಿಂಗಳಲ್ಲಿ ಮಾವು ಕಟಾವು ಆರಂಭವಾಗುತ್ತದೆ ಮಾವಿನ ಮಂಡಿಗಳು ಸಹಾ ಆರಂಭವಾಗಿದ್ದು ಮಂಡಿಗಳ ಬಳಿ ಹಾದು ಹೋಗುವ ಚಿಂತಾಮಣಿ ಬೆಂಗಳೂರು ರಸ್ತೆ ಬದಿಗಳಲ್ಲಿ ವಾಹನಗಳನ್ನು ಚಾಲಕರು ನಿಲ್ಲಿಸಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಮಾವಿನ ಮಂಡಿಗಳಿಗೆ ಇತರೆ ರಾಜ್ಯಗಳಿಂದ ಮಾವಿನ ವಹಿವಾಟಿಗಾಗಿ ವಿವಿಧ ರೀತಿಯ ವಾಹನಗಳು ಆಗಮಿಸಿ ರಸ್ತೆ ಬದಿಗಳಲ್ಲಿ ಮನಸ್ಸೋ ಇಚ್ಛೆ ನಿಲ್ಲಿಸುವ ಕಾರಣ ಅನೇಕ ಬಾರಿ ಬಹಳಷ್ಟು ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾಗಿದ್ದು ,
ಈ ಬಾರಿ ಈ ರೀತಿಯ ಯಾವುದೇ ಅಪಘಾತಗಳು ಸಂಭವಿಸದಂತೆ ಹಾಗೂ ಸಾರ್ವಜನಿಕರಿಗೆ ಸಂಚಾರದ ದಟ್ಟನೆ ಸಮಸ್ಯೆಯಿಂದ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಅಕ್ಕಪಕ್ಕ ರಸ್ತೆಗಳಲ್ಲಿ ಯಾವುದೇ ರೀತಿಯ ವಾಹನಗಳನ್ನು ನಿಲ್ಲಿಸದಂತೆ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಮನವಿ ಮಾಡಿದರು.
ಈ ಸಮಯದಲ್ಲಿ ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾದಿಕ್ ಅಹಮ್ಮದ್, ವಿವಿಧ ಕನ್ನಡ ಪರ ಸಂಘಟನೆ ಪದಾಧಿಕಾರಿಗಳಾದ ಗುರುಮೂರ್ತಿ, ರಾಜೇಶ್, ಧನಂಜಯ್, ಎಚ್.ಎಂ.ಅರುಣ್ ಕುಮಾರ್, ಎಂ.ಡಿ.ಯಾಶೀನ್ ಅಹಮ್ಮದ್, ಅಬ್ದುಲ್ಲಾ, ಶಾಹುಲ್ ಅಹಮ್ಮದ್, ವೆಂಕಟೇಶ್ ಇದ್ದರು.