ಶ್ರೀನಿವಾಸಪುರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ.90 ರಷ್ಟು ಫಲಿತಾಂಶ ದೊರೆತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಲಕ್ಷ್ಮಯ್ಯ ತಿಳಿಸಿದ್ದಾರೆ.
1253 ಗಂಡು, 1214 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 2467 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 1103 ಗಂಡು, 1117 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 2220 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.88ರಷ್ಟು ವಿದ್ಯಾರ್ಥಿಗಳು ಹಾಗೂ ಶೇ.92 ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ತಾಲ್ಲೂಕಿಗೆ ಶೇ.90 ರಷ್ಟು ಫಲಿತಾಂಶ ಲಭ್ಯವಾಗಿದೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೇಧಾ ಕೆ.ಎಂ. 621 ಅಂಕ ಗಳಿಸಿ ಪ್ರಥಮ ಪಡೆದುಕೊಂಡಿದ್ದಾರೆ. ವೇಣು ಶಾಲೆಯ ವಿದ್ಯಾರ್ಥಿನಿ ಸೃಜನಶ್ರೀ ಪಿ.ಆರ್.620 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಎಸ್ವಿಬಿಎನ್ ಶಾಲೆಯ ಪ್ರಜ್ಞಾ ಟಿ.ಎಸ್617, ಗೌನಿಪಲ್ಲಿ ಗ್ರಾಮದ ಸಪ್ತಗಿರಿ ಶಾಲೆಯ ಸಹನಾ .ವಿ616, ಯಲ್ದೂರು ಗ್ರಾಮದ ಪರಂಜ್ಯೋತಿ ಶಾಲೆಯ ವಿದ್ಯಾರ್ಥಿ ಪ್ರೇಮ್ ಕುಮಾರ್ ಆರ್.ಎನ್.615 ಅಂಕ ಗಳಿಸಿದ್ದಾರೆ.
55 ವಿದ್ಯಾರ್ಥಿಗಳು ಹಾಗೂ 79 ವಿದ್ಯಾರ್ಥಿನಿಯರು ಎ+, 142 ವಿದ್ಯಾರ್ಥಿಗಳು ಹಾಗೂ 224 ವಿದ್ಯಾರ್ಥಿನಿಯರು ಎ, 211 ವಿದ್ಯಾರ್ಥಿಗಳು ಹಾಗೂ 256 ವಿದ್ಯಾರ್ಥಿನಿಯರು ಬಿ+, 265 ವಿದ್ಯಾರ್ಥಿಗಳು ಹಾಗೂ 251 ವಿದ್ಯಾರ್ಥಿನಿಯರು ಬಿ, 228 ವಿದ್ಯಾರ್ಥಿಗಳು ಹಾಗೂ ಹಾಗೂ 214 ವಿದ್ಯಾರ್ಥಿನಿಯರು ಚ+, 142 ವಿದ್ಯಾರ್ಥಿಗಳು ಹಾಗೂ 92 ವಿದ್ಯಾರ್ಥಿನಿಯರು ಸಿ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ತಾಲ್ಲೂಕಿನ ಮಮರಕುಂಟೆ ಸರ್ಕಾರಿ ಪ್ರೌಢ ಶಾಲೆ, ತಾಡಿಗೋಳ್ ಸರ್ಕಾರಿ ಪ್ರೌಢ ಶಾಲೆ, ಶ್ರೀನಿವಾಸಪುರದ ರಂಗಾ ರಸ್ತೆ ಪ್ರೌಢ ಶಾಲೆ, ಪುಲಗೂರುಕೋಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆ, ಚಲ್ದಿಗಾನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸೋಮಿಯಾಜಲಪಲ್ಲಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗಂಗನ್ನಗಾರಿಪಲ್ಲಿ ಗ್ರಾಮದ ಏಕಲವ್ಯ ಮಾಡಲ್ ಸನಿವಾಸ ಪ್ರೌಢ ಶಾಲೆ, ಗೌನಿಪಲ್ಲಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ರೋಣೂರು ಗ್ರಾಮದ ಅಂಬೇಡ್ಕರ್ ಪ್ರೌಢ ಶಾಲೆ, ದೊಮ್ಮರ ಗುಡಿಸಲಿನ ಆಶ್ರಯ ನೀಲ್ಬಾಗ್ ಸ್ಕೂಲ್, ಹೆಬ್ಬಟ ಗ್ರಾಮದ ಜಿಜಿ ವೇಣು ಗುರುಕುಲ, ದೊಡಮಲದೊಡ್ಡಿ ಗ್ರಾಮದ ನಿಸರ್ಗ ವಿದ್ಯಾ ಮಂದಿರ, ಗೌನಿಪಲ್ಲಿ ಗ್ರಾಮದ ಪ್ರಸಾದ್ ವಿದ್ಯಾ ಮಂದಿರ, ಯಲ್ದೂರಿನ ಪ್ರೀತಿ ಪ್ರೌಢ ಶಾಲೆ, ಶ್ರೀನಿವಾಸಪುರದ ಸಪ್ತಗಿರಿ ಪ್ರೌಢ ಶಾಲೆ, ಲಕ್ಷ್ಮೀಪುರದ ಮಿನರ್ವ ವಿದ್ಯಾ ಮಂದಿರ, ಶ್ರೀನಿವಾಸಪುರದ ಶೈಲೇಂದ್ರ ವಿದ್ಯಾ ಮಂದಿರ, ವೆಂಕಟಾದ್ರಿ ವಿದ್ಯಾ ಸಂಸ್ಥೆ, ಭಾವನಾ ಇಂಗ್ಲೀಷ್ ಮೀಡಿಯಂ ಸ್ಕೂಲ್, ರಾಯಲ್ಪಾಡಿನ ತಪಸ್ವಿ ವಿದ್ಯಾ ಕೇಂದ್ರ, ಲಕ್ಷ್ಮೀಪುರ ಕ್ರಾಸ್ನ ವಿಎಸ್ಆರ್ ಶಾಲೆ, ಗೌನಿಪಲ್ಲಿಯ ವೆಂಕಟೇಶ್ವರ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಸತ್ಯಸಾಯಿ ಇಂಗ್ಲೀಷ್ ಸ್ಕೂಲ್ ಗೌನಿಪಲ್ಲಿ, ಯಲ್ದೂರು ಗ್ರಾಮದ ವಿದ್ಯಾ ದೀಪ್ತಿ ಪಬ್ಲಿಕ್ ಸ್ಕೂಲ್, ಕಂಡ್ಲೇವಾರಿಪಲ್ಲಿ ಗ್ರಾಮದ ಕಾವೇರಿ ಪಬ್ಲಿಕ್ ಸ್ಕೂಲ್, ನೀಲಟೂರು ಗ್ರಾಮದ ಪಾವನ ವಿದ್ಯಾಭವನ ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ಅವರು ತಿಳಿಸಿದ್ದಾರೆ.