

ಶ್ರೀನಿವಾಸಪುರ : ಪಟ್ಟಣದ ಬಾಲಕೀಯರ ಪಿಯುಸಿ ಕಾಲೇಜು ಆವಣರದಿಂದ ಸೋಮವಾರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶ್ರೀನಿವಾಸಪುರ ಘಟಕದವತಿಯಿಂದ ರಾಜ್ಯ ಸಂಘದ ನಿರ್ಣಯದಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಿ ಅಂಡ್ ಆರ್ ತಿದ್ದುಪಡಿಗಾಗಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಡಶಾಲಾ ಶಿಕ್ಷಕರಾಗಿ ಬಡ್ತಿ ನೀಡಲು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ಒತ್ತಾಯಿಸಿ ಫ್ರೀಡಂ ಪಾರ್ಕ್ ಚಲೋ ಸಭೆಗೆ ಹೊರಡುತ್ತಿರುವುದು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಲ್ಲಾ ಖಜಾಂಚಿ ರೋಣೂರು ರೆಡ್ಡಪ್ಪ, ತಾಲೂಕು ಉಪಾಧ್ಯಕ್ಷರಾದ ಆನಂದ್, ಹೆಚ್.ವಿ.ಶೋಭಾ ರಮೇಶ್ ,ಅನಿತ ಶಿವಾರೆಡ್ಡಿ,ಖಜಾಂಚಿ ವೇಣುಗೋಪಾಲ್ ಸಂಘಟನಾ ಕಾರ್ಯದರ್ಶಿ ವೆಂಕಟರಾಮ ರೆಡ್ಡಿ, ಗ್ರಾಮೀಣ ಕಾರ್ಯದರ್ಶಿ ನಾಗೇಂದ್ರ, ನಿರ್ದೇಶಕರಾದ ಕೆ ರಘುನಾಥ್ ರೆಡ್ಡಿ ,ಪೆದ್ದಪ್ಪಯ್ಯ ಶಿಕ್ಷಕರಾದ ಅನಿತ ,ಸಿ.ಆರ್.ಪಿ ಗಳಾದ ಶಿವರಾಘವರೆಡ್ಡಿ, ಜಯರಾಮ ರೆಡ್ಡಿ ನಟರಾಜ್ ,ಮಮತಾ, ಸುಜಾತ, ರಾಧಾ ಹಾಗು ತಾಲೂಕಿನ ಶಿಕ್ಷಕರು ಭಾಗವಹಿಸಿದ್ದರು.